- ಹಿಟ್ ಆಗ್ತಿದೆ “BAD” ಚಿತ್ರದ ಪ್ರೇಮಗೀತೆ
- ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಹಾಗೂ ಪೃಥ್ವಿ ಭಟ್ ಹಾಡಿರುವ ಗೀತೆ “ನೀ ಬರುವೆ ಅಂತ ನಾ ಕಾದು ಕುಂತ”
- ಪಿ.ಸಿ.ಶೇಖರ್ ನಿರ್ದೇಶನದ ನಕುಲ್ ಗೌಡ, ಮಾನ್ವಿತ ಹರೀಶ್ ನಟಿಸಿರುವ ಚಿತ್ರ “BAD”
ಇತ್ತೀಚೆಗಷ್ಟೇ ಝಂಕಾರ್ ಮ್ಯೂಸಿಕ್ Jhankar Music ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ “BAD” ಚಿತ್ರದ ಪ್ರೇಮಗೀತೆ “ನೀ ಬರುವೆ ಅಂತ ನಾ ಕಾದು ಕುಂತ” ಇದರ ಲಿರಿಕಲ್ ವೀಡಿಯೋ ಸಾಕಷ್ಟು ವ್ಯೂಸ್ ಪಡೆಯುವ ಮೂಲಕ ಹಿಟ್ ಆಗ್ತಿದೆ. ಕವಿರಾಜ್ Kaviraj ಅವರ ಸಾಹಿತ್ಯ ಇರುವ ಈ ಗೀತೆಗೆ ಅರ್ಜುನ್ ಜನ್ಯ Arjun Janya ಸಂಗೀತ ಸಂಯೋಜನೆ ಮಾಡಿದ್ದಾರೆ. ಪೃಥ್ವಿ ಭಟ್ Pruthvi Bhat ತಮ್ಮ ಇಂಪಾದ ಸ್ವರದಲ್ಲಿ ಹಾಡಿದ್ದಾರೆ. ನಾದ ಕಿರಣ್ ಪಿಕ್ಚರ್ಸ್ Nada Kiran Pictures ಬ್ಯಾನರ್ ಅಡಿಯಲ್ಲಿ ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಪಿ.ಸಿ.ಶೇಖರ್. P.C. Shekhar
ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಪಾತ್ರಗಳು
ಕಾಮ, ಕ್ರೋಧ, ಮೋಹ, ಮತ್ಸರ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ ಎಂದು ನಿರ್ದೇಶಕರು ತಿಳಿಸಿರುತ್ತಾರೆ. ನಾಯಕನ ಬರುವಿಕೆಗಾಗಿ ಕಾದು ಕುಳಿತ್ತಿರುವ ನಾಯಕಿ, ಕಾಯುವಿಕೆಯ ಆ ಸಮಯದ ಕಲ್ಪನೆಗಳನ್ನು ಹಾಡಿನ ಮೂಲಕ ತೋರಿಸಲಾಗಿದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಯ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿಯಬೇಕಿದೆ. ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿರುವ ಚಿತ್ರಕ್ಕೆ ಸಚಿನ್ ಜಗದೀಶ್ವರ್ ಎಸ್ ಬಿ ಸಂಭಾಷಣೆ ಬರೆದಿದ್ದಾರೆ. ನಕುಲ್ ಗೌಡ Nakul Gowda ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, Manvitha Harish ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.