ಸೆಟ್ಟೇರಲಿದೆ ಸಿಂಪಲ್ ಸುನಿ ನಿರ್ದೇಶನದ “ರಿಚಿ ರಿಚ್” ಸಿನಿಮಾ

Date:

  • ಸೆಟ್ಟೇರಲಿದೆ ಸಿಂಪಲ್ ಸುನಿ ನಿರ್ದೇಶನದ “ರಿಚಿ ರಿಚ್” ಸಿನಿಮಾ
  • ಬಿಗ್ ಬಾಸ್ 10 ಸೀಸನ್ ವಿಜೇತ ಕಾರ್ತಿಕ್ ಮಹೇಶ್ ನಾಯಕತ್ವದಲ್ಲಿ ಮೂಡಿಬರಲಿದೆ ಹೊಸ ಸಿನಿಮಾ
  • ಬೆಂಗಳೂರಿನ ಉದ್ಯಮಿ ಅರವಿಂದ್ ರಮೇಶ್ ರೆಡ್ಡಿ ಎ.ಆರ್.ವಿ. ಎಂಟರ್ಟೈನರ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಯುವಪೀಳಿಗೆಯನ್ನೇ ಗಮನದಲ್ಲಿಟ್ಟುಕೊಂಡು ಸಿಂಪಲ್ ಆಗಿ, ನವಿರಾದ ಹಾಸ್ಯದ ಎಳೆಯ ಮೂಲಕ ಕಥೆ ಹೇಳುವಲ್ಲಿ ಫೇಮಸ್ ನಿರ್ದೇಶಕ ಸಿಂಪಲ್ ಸುನಿ. ಇವರ ಹೊಸ ಸಿನಿಮಾ “ರಿಚಿ ರಿಚ್” ಸದ್ಯದಲ್ಲೇ ಸೆಟ್ಟೇರಲಿದೆ. ಇದರಲ್ಲಿ ನಾಯಕ ನಟನಾಗಿ ಮಿಂಚಲಿದ್ದಾರೆ ಬಿಗ್ ಬಾಸ್ ಸೀಸನ್ 10 ರ ವಿಜೇತ ಕಾರ್ತಿಕ್ ಮಹೇಶ್. ಕಾರ್ತಿಕ್ ಮಹೇಶ್ Karthik Mahesh ಈಗಾಗಲೇ ರಾಮರಸ ಸಿನಿಮಾದಲ್ಲಿ Ramarasa Movie ಲೀಡ್ ರೋಲ್ ನಿರ್ವಹಿಸುತ್ತಿದ್ದು, ಇದೀಗ ರಿಚಿ ರಿಚ್ Richi Rich Movie ಮೂವೀ ಅನೌನ್ಸ್ ಆಗಿದೆ.

ಬೆಂಗಳೂರಿನ ಉದ್ಯಮಿ ಅರವಿಂದ್ ರಮೇಶ್ ರೆಡ್ಡಿ ಕನ್ನಡದಲ್ಲಿ ಸದಭಿರುಚಿಯ ಚಿತ್ರ ನಿರ್ಮಾಣದ ಕನಸು ಹೊತ್ತು ಎ.ಆರ್.ವಿ. ಎಂಟರ್ಟೈನರ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ ಇದು ಇವರ ಚೊಚ್ಚಲ ನಿರ್ಮಾಣದ ಚಿತ್ರವಾಗಿರಲಿದೆ. ರಿದ್ದೇಶ್ ಚಿನ್ನಯ್ಯ(ರಿಚಿ) ರಿಚ್ ಆಗುವ ಕತೆಯೇ ಈ ಸಿನಿಮಾದ ಕಥಾಹಂದರವಾಗಿರಲಿದೆ. ಫನ್, ಪ್ಯಾಮಿಲಿ, ಎಮೋಷನಲ್ ಅಂಶಗಳು ಚಿತ್ರ ನೋಡುಗರನ್ನು ಸೆರೆಹಿಡಿದಿಡಲಿದೆ. ತಾಂತ್ರಿಕ ತಂಡದ ಘೋಷಣೆ ಆಗಿದ್ದು‌ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...