- ಈ ಕಾಲದ ಒಂದು ಬೆಸ್ಟ್ ಕತೆಯ ಜೊತೆ ಬರ್ತಿದೆ “ಬೆಸ್ಟಿ”
- ಆಧುನಿಕ ತಂತ್ರಜ್ಞಾನದ ಪ್ರೇಮಕತೆಯಿದು
- ಕುಚ್ ಕುಚ್ ಕಹಾನಿ ಜೊತೆ ಸುಂದರ ಸಂದೇಶ
ಈಗಿನ ಯುವಜನತೆ ಆಧುನಿಕ ತಂತ್ರಜ್ಞಾನಗಳಿಂದ ಹೇಗೆಲ್ಲಾ ಮೋಸ ಹೋಗುತ್ತಾರೆ ಎಂಬ ವಿಷಯವನ್ನು, ಜೊತೆಗೆ ಪ್ರೀತಿಯ ಸೆಂಟಿಮೆಂಟ್ ನ್ನು ಹೇಳುವ ಹೊಸ ಚಿತ್ರವೊಂದು ರೆಡಿಯಾಗುತ್ತಿದೆ. ಅಂದ ಹಾಗೆ ಚಿತ್ರದ ಹೆಸರು “ಬೆಸ್ಟಿ” Besty ಆರ್ಯ ಯೋಗೀಶ್ Arya Yogish ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಗಗನ್ ಸಾನಿಧ್ಯ Gagan Sanidhya ಲಾಂಛನದಲ್ಲಿ,ಬೇಳೂರು ಗೋಪಾಲಕೃಷ್ಣ ಅವರ ಸಹಕಾರದೊಂದಿಗೆ ಶ್ರೀನಿವಾಸ್, ಮಮತ ಶ್ರೀನಿವಾಸ್, ಸೋಮಶೇಖರ್ ಹಾಗೂ ಕೆ.ಎಂ.ನಟರಾಜ್ ಅವರು ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ರಿಲೀಸ್ ಮಾಡಲಾಗಿದೆ. ಈ ಚಿತ್ರದ ನಾಯಕರಾಗಿ ಚೇತನ್ ಗೌಡ ನರೆಹಳ್ಳಿ Chethan Gowda Narehalli ಹಾಗೂ ಸಾತ್ವಿಕ್ ವೆಂಕಟೇಶ್ Sathwik Venkatesh ಅಭಿನಯಿಸುತ್ತಿದ್ದು ಇವರಿಗೆ ಸಾಥ್ ನೀಡುವ ನಾಯಕಿಯ ಆಯ್ಕೆ ಇನ್ನೇನು ನಡೆಯಬೇಕಿದೆ. ಚಿತ್ರದ ಕತೆ ಮತ್ತು ಚಿತ್ರ ಕತೆಯನ್ನು ನಿರ್ದೇಶಕರಾದ ಆರ್ಯ ಯೋಗೀಶ್ ಅವರೇ ಹೆಣೆದಿದ್ದು ಈ ಕಾಲದ ಟ್ರೆಂಡ್ ಗೆ ತಕ್ಕ ಹಾಗೆ ಚಿತ್ರದ ಕತೆಯಿದೆ.
ಚಿತ್ರದಲ್ಲಿ ಕರಿ ಸುಬ್ಬು, ಟೆನ್ನಿಸ್ ಕೃಷ್ಣ ಮುಂತಾದವರು ನಟಿಸುತ್ತಿದ್ದು ಇನ್ನಷ್ಟು ಮಂದಿ ತಾರಾಗಣದಲ್ಲಿ ಜೊತೆಯಾಗಲಿದ್ದಾರೆ. ಚಿತ್ರಕ್ಕೆ ಶೋಯಬ್ (ಹೈದರಾಬಾದ್) ಛಾಯಾಗ್ರಹಣ, ಸನ್ನಿ ಅವರ ಸಂಗೀತ ನಿರ್ದೇಶನ, ಶಿವಕಾಂತ್ ಕಲಾ ನಿರ್ದೇಶನ, ಹಾಗೂ ಸೂರಿ ಮಾಸ್ಟರ್ ಅವರ ನೃತ್ಯ ನಿರ್ದೇಶನವಿದೆ. ಇನ್ನಷ್ಟು ತಂತ್ರಜ್ಞರು ಚಿತ್ರಕ್ಕೆ ಜೊತೆಯಾಗುವ ನಿರೀಕ್ಷೆ ಇದ್ದು ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದೆ. ಚಿತ್ರದ ಕುರಿತ ಇನ್ನಷ್ಟು ಅಪ್ಡೇಟ್ ಗಳನ್ನು ಚಿತ್ರತಂಡ ಶೀಘ್ರದಲ್ಲಿ ನೀಡುವ ಸಾಧ್ಯತೆಯಿದೆ.