- ಗುರುರೇಣುಕಾ ಪ್ರೊಡಕ್ಷನ್ ನಿರ್ಮಿಸಿರುವ “ಅಂತರ್ಯಾಮಿ” ಚಿತ್ರದ ಪೋಸ್ಟರ್ ಬಿಡುಗಡೆ
- ತುಮಕೂರು ಸಿದ್ಧಲಿಂಗ ಮಠದ, ಶ್ರೀ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳಿಂದ ಪೋಸ್ಟರ್ ಬಿಡುಗಡೆ
- ಕೆ.ಧನಂಜಯ್ ನಿರ್ದೇಶಿಸಿರುವ, ಪ್ರಣವ್ ಅಭಿನಯವಿರುವ ಚಿತ್ರ “ಅಂತರ್ಯಾಮಿ”
ಗುರುರೇಣುಕಾ ಪ್ರೊಡಕ್ಷನ್ ನವೀನ್ ಅವರ ನಿರ್ಮಾಣದ, ಕೆ.ಧನಂಜಯ್ ಅವರ ನಿರ್ದೇಶನವಿರುವ “ಅಂತರ್ಯಾಮಿ” Antharyami ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸಿದ್ಧಗಂಗಾ ಮಠದ ಶ್ರೀ ಶ್ರೀ ಸಿದ್ಧಗಂಗಾ ಸ್ವಾಮೀಜಿಯವರು ಚಿಕ್ಕವರಿಂದ ದೊಡ್ಡವರವರೆಗೂ ಮೊಬೈಲ್ ಗೀಳು ಇಂದು ಹಾಸುಕ್ಕಾಗಿದ್ದು ಮೊಬೈಲ್ ನಲ್ಲಿ ಬರುವ ಕೆಲ ಕೆಟ್ಟ ವಿಚಾರಗಳಿಂದ ಜನರು ಹೇಗೆ ಹಾದಿ ತಪ್ಪುತ್ತಾರೆ, ಮೊಬೈಲ್ ಚಟದಿಂದ ಹೊರಬರಲು ಮಾರ್ಗೋಪಾಯಗಳೇನು, ಇದರಿಂದ ದೂರ ಇರುವುದು ಹೇಗೆ ಎಂಬಂತಹ ಸಂದೇಶಗಳನ್ನು ಕಥಾ ಹಂದರವಾಗಿ ಹೊಂದಿರುವ ಅಂತರ್ಯಾಮಿ ಚಿತ್ರ ಉತ್ತಮವಾದ ಚಿತ್ರವಾಗಿ ಮೂಡಿಬರಲಿ ಎಂದು ಆಶೀರ್ವಾದ ಮಾಡಿದರು.


ಜಗತ್ತು ತಾಂತ್ರಿಕವಾಗಿ ಬೆಳವಣಿಗೆ ಹೊಂದುತ್ತಿದೆ. ಹಲವು ಹೊಸ ಆವಿಷ್ಕಾರಗಳು ಮಾನವನಿಗೆ ಸಹಕಾರಿಯಾಗಿವೆ. ಆದರೆ ಅಂತರ್ಜಾಲದಲ್ಲಿ ದೊರೆಯುತ್ತಿರುವ ಕೆಲವು ವಿಚಾರಗಳು ಮನುಷ್ಯನ ಒಳಿತು ಮಾತ್ರವಕ್ಕದೇ ಮತ್ತು ಕೆಡುಕುಗಳಿಗೆ ಕಾರಣವಾಗಿದ್ದು ಇಂದಿನ ಯುವ ಸಮೂಹ, ಮಕ್ಕಳೂ ಮೊಬೈಲ್ ಬಳಕೆಯ ದಾಸರಾಗುತ್ತಿದ್ದಾರೆ. ಇದರಿಂದ ಹೊಬರಲು ಹಿರಿಯರು ಮಾರ್ಗದರ್ಶನ ನೀಡಬೇಕು. ಪುಸ್ತಕ ಹಿಡಿಯುವ ಕೈ ಮೊಬೈಲ್ ಹಿಡಿಯುವಂತಾಗಬಾರದು ಎಂದು ಕಿವಿ ಮಾತು ಹೇಳಿದರು.
ಅಂತರ್ಯಾಮಿ ಚಿತ್ರದಲ್ಲಿ ನಾಯಕರಾಗಿ ಪ್ರಣವ್ ನಟಿಸಿದ್ದು, ನಾಯಕಿಯಾಗಿ ಮೋಹಿರಾ ಅಚಾರ್ಯ ಮಿಂಚಿದ್ದಾರೆ.
ಮಂಡ್ಯ ಸಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಉದಯ್, ರುದ್ರಮುನಿ ಪಂಡಿತ್, ರೇಣುಕಾಂಬ, ಶರತ್ ಘಾಟಿ, ಶ್ರೀಕೃಷ್ಣ, ಮಂಜೀವಾ, ಹೇಮಾಮಾಲಿನಿ, ಬಾಲಕೃಷ್ಣ ಬರಗೂರು, ವಸಂತ್, ಯೋಗೀಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ದೇಸಿ ಮೋಹನ್ ಅವರ ಸಂಗೀತವಿದ್ದು, ವಿನಯ್ ಕಾವ್ಯಕಾಂತಿ ಸಾಹಿತ್ಯ ಬರೆದಿದ್ದಾರೆ, ಛಾಯಾಗ್ರಹಣ ಎಸ್.ಬಾಲು, ನೃತ್ಯ ಬಾಲ ಮಾಸ್ಟರ್, ತಾಂತ್ರಿಕ ಸಲಹೆ ಶ್ರೀಕಾಂತ್ ಶ್ರಾಫ್, ಪಿಆರ್ ಒ ಎಂ.ಜೆ.ಎಸ್.ಪಿ.ಆರ್ ಸೇರಿದಂತೆ ಚಿತ್ರಕ್ಕೆ ಸಹ ನಿರ್ದೇಶನವನ್ನ ರವಿಶಂಕರ್, ವಂಸತ್, ಗೌತಮ್ ಮುಂತಾದವು ನಿರ್ವಹಿಸಿದ್ದಾರೆ.
