ಭರದಿಂದ ಸಾಗುತ್ತಿದೆ “ತೀರ್ಥರೂಪ ತಂದೆಯವರಿಗೆ” ಚಿತ್ರೀಕರಣ

Date:

  • ಭರದಿಂದ ಸಾಗುತ್ತಿದೆ “ತೀರ್ಥರೂಪ ತಂದೆಯವರಿಗೆ” ಚಿತ್ರೀಕರಣ
  • ಚಿತ್ರದಲ್ಲಿ ಕಂಗೊಳಿಸಲಿದೆ ನಿಹಾರ್ ಮುಕೇಶ್, ರಚನಾ ಇಂದರ್ ಜೋಡಿ
  • ರಾಮೇನಹಳ್ಳಿ ಜಗನ್ನಾಥ್ ಅವರ ಕತೆ ಮತ್ತು ನಿರ್ದೇಶನ ಚಿತ್ರಕ್ಕಿದೆ.
  • ಕನ್ನಡ ಮತ್ತು ತೆಲುಗುವಿನಲ್ಲಿ ಬಿಡುಗಡೆ

ಜೈ ಚಾಮುಂಡೇಶ್ವರಿ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ “ತೀರ್ಥರೂಪ ತಂದೆಯವರಿಗೆ” Theertharoopa Tandeyavarige Movie ಚಿತ್ರವನ್ನು ಹೊಂದಿಸಿ ಬರೆಯಿರಿ Hondisi Bareyiri ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ್ Ramenahalli Jagannatha ಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಡೇ ಸಿನಿಮಾಸ್ Sunday Cinemas ಸಂಸ್ಥೆ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ಕೌಟುಂಬಿಕ ಕಥಾಹಂದರವನ್ನು ಹೊಂದಿರುವ ಚಿತ್ರ ಇದಾಗಿದ್ದು ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವಂತೆ ಚಿತ್ರೀಕರಿಸಲಾಗುತ್ತಿದೆ.

ಭರದಿಂದ ಸಾಗಿದೆ ಚಿತ್ರೀಕರಣ

ಈಗಾಗಲೇ ಮೈಸೂರು, ಮೂಡಿಗೆರೆ, ಕೊಚ್ಚಿಯಲ್ಲಿ ಚಿತ್ರೀಕರಣ ನಡೆದಿದ್ದು ಶೇ. 50 ರಷ್ಟು ಚಿತ್ರೀಕರಣ ಪೂರ್ಣಗೊಂಡಿರುತ್ತದೆ. ಇನ್ನು ಮುಂದಿನ ಹಂತದ ಶೂಟಿಂಗ್ ಸಂಕ್ರಾಂತಿಯ ನಂತರ ಮೂಡಿಗೆರೆ Mudigere ಹಾಗೂ ಉತ್ತರ ಭಾರತದ ಭಾಗದಲ್ಲಿ ಮುಂದುವರೆಯಲಿದೆ. ಲವ್ ಮಕ್ಟೇಲ್, ಲವ್ 360 ಖ್ಯಾತಿಯ ರಚನಾ ಇಂದರ್ Rachana Inder ಅಕ್ಷರ ಎಂಬ ಹೆಸರಿನಿಂದ ನಾಯಕಿಯ ಪಾತ್ರದಲ್ಲಿ ಮಿಂಚುತ್ತಿದ್ದು, ತೆಲುಗು ಸರಣಿ ಗುಪ್ಪೆದಂತ ಮನಸ್ಸು (2020) ನಲ್ಲಿನ ಪಾತ್ರಕ್ಕಾಗಿ ಹೆಸರಾದ ನಟ ನಿಹಾರ್ ಮುಖೇಶ್ ಅವರಿಗೆ ಜೋಡಿಯಾಗಿದ್ದಾರೆ. ಇನ್ನುಳಿದಂತೆ ಸಿತಾರ, ರಾಜೇಶ್ ನಟರಂಗ ಮೊದಲಾದ ಘಟಾನುಘಟಿಗಳು ಚಿತ್ರತಂಡದ ಜೊತೆಗಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ತುಲುಗುವಿನಲ್ಲಿ “ಪ್ರಿಯಮೈನ ನಾನ್ನಕು” ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಗೊಳ್ಳುತ್ತಿದೆ ಈ ಚಿತ್ರ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...