- ಪೇಮಸ್ ಆಗ್ತಿದೆ ತುಳುನಾಡ ಸಂಸ್ಕೃತಿ ಬಿಂಬಿಸುವ “ದಸ್ಕತ್” ಮೂವಿಯ “ಆಟಿ ಕಳೆಂಜ” ಹಾಡು
- ಡಿ. 13 ಕ್ಕೆ ಬಿಡುಗಡೆಯಾಗಿದೆ ಅನೀಶ್ ಕುಮಾರ್ ವೇಣೂರು ನಿರ್ದೇಶನದ “ದಸ್ಕತ್”
- ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ ಸಂಘರ್ಷಗಳ ಮೇಲೆ ಬೆಳಕು ಚೆಲ್ಲುವ ಚಿತ್ರ
ತುಳುನಾಡಿಗೂ ಆಟಿ (ಆಷಾಢ) ವೇಳೆಗೆ ಬರುವ ಆಟಿಕಳೆಂಜನಿಗೂ ಭಾವನಾತ್ಮಕ ನಂಟಿದೆ. ಗದ್ದೆಯ ಬದು, ಹಳ್ಳ ಕೊಳ್ಳ ದಾಟಿ ಮನೆಮನೆಗೂ ಭೇಟಿ ನೀಡಿ ಎಲ್ಲರ ಭಕ್ತಿ ಗೌರವಗಳನ್ನು ಸ್ವೀಕರಿಸುತ್ತ ಎಲ್ಲರನ್ನೂ ಹಾರೈಸುವ ಆಟಿಕಳೆಂಜನನ್ನೇ ಹೈಲೈಟ್ಸ್ ಮಾಡಿರುವ ದಸ್ಕತ್ ತುಳು ಸಿನಿಮಾದಲ್ಲಿ ಆಟಿಕಳೆಂಜನ ಅಬ್ಬರ ಜೋರಾಗಿಯೇ ಇದೆ. ತುಳುನಾಡಿನ ಗ್ರಾಮ್ಯ ಪರಿಸರದಲ್ಲಿ ತೆರೆದುಕೊಳ್ಳುತ್ತಾ ಸಾಗುವ ದಸ್ಕತ್ ಸಿನಿಮಾದ ದೃಶ್ಯಗಳು ತುಳುನಾಡಿನ ಜನರಲ್ಲಷ್ಟೇ ಅಲ್ಲ ಅನ್ಯ ಭಾಷಿಕರಲ್ಲೂ ಸಕ್ಕತ್ ಜೋಷ್ ತುಂಬಿಸುವಂತಿದೆ.

ಫೇಮಸ್ಸಾಗ್ತಿದೆ ಈ ಹಾಡು
ಈ ಚಿತ್ರದ “ಕಳೆಂಜ ಕಳೆಂಜ ಹೇ ಕಳೆಂಜ” ಹಾಡಂತೂ ಕೇಳುಗರಿಗೆ ಥ್ರಿಲ್ ಹುಟ್ಟಿಸುತ್ತದೆ. ಹಾಡು ಚಿತ್ರೀಕರಣಗೊಂಡಂತಹಾ ಸ್ಥಳ, ಹಿನ್ನೆಲೆ ಇವೆಲ್ಲವೂ ಹಾಡಿಗೆ ಹೊಸ ಉತ್ಸಾಹ ತುಂಬಿಸಿದೆ. ತುಳು ಸಿನಿಮಾ ರಂಗದಲ್ಲಿ ಹಾಡೊಂದನ್ನು ಈ ರೀತಿ ಅದ್ಭುತವಾಗಿ ಚಿತ್ರೀಕರಣಗೊಳಿಸಿರುವುದು ಇದೇ ಮೊದಲು. ಇಷ್ಟು ಅದ್ಭುತವಾದ ದೃಶ್ಯೀಕರಣದ ಪ್ರಯತ್ನ ಹಿಂದೆ ಯಾರೂ ಮಾಡಿರಲಿಲ್ಲ ಎನ್ನುವುದು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ಹಾಡಿನ ರಿದಂ ಪ್ರೇಕ್ಷಕರ ಎದೆಯೊಳಗೆ ಸಂಚಲನ ಮೂಡಿಸುವ, ಮತ್ತೆ ಮತ್ತೆ ಕೇಳಬೇಕೆನ್ನಿಸುವ ಭಾವ ಹುಟ್ಟಿಸುತ್ತದೆ. ಹಾಡಿನ ಲಯದಲ್ಲಿಯೇ ರೌದ್ರತೆ ಮುಂದೇನಾಗಬಹುದು ಎನ್ನುವ ಗುಟ್ಟು ಅಡಗಿದೆ. ಅಂತರಾಷ್ಟ್ರೀಯ ಗುಣಮಟ್ಟದ BGM(ಹಿನ್ನೆಲೆ) ಹೊಂದಿರುವ ಈ ಹಾಡು ಪ್ರೇಕ್ಷಕರನ್ನು ಭರ್ಜರಿಯಾಗಿ ಕ್ಯಾಚ್ ಮಾಡಿದೆ.
Aati Kalenja Daskath Tulu Movie Song :
ಚಿತ್ರ ತಂಡದಲ್ಲಿ ಮಿಂಚಿರುವ ಸ್ಥಳೀಯರ ತಂಡ
ಕಾಮಿಡಿ ಕಿಲಾಡಿಗಳು ಶೋ ನ ಅನೀಶ್ ಕುಮಾರ್ ವೇಣೂರು ಅವರ ನಿರ್ದೇಶನದ ಈ ಚಿತ್ರದಲ್ಲಿ ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ, ಮನೋಜ್ ಆನಂದ್ ಕಾರ್ಯನಿರ್ವಹಿಸಿದ್ದಾರೆ. ರಾಘವೇಂದ್ರ ಕುಡ್ವ ನಿರ್ಮಾಣದ ಚಿತ್ರಕ್ಕೆ ಬೋಧಿ ಪ್ರೊಡಕ್ಷನ್ ಸಹಯೋಗವಿದೆ. ಪ್ರಜ್ಞೇಶ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕನ್ನಡ ಚಲನಚಿತ್ರ ನಟ ಮೋಹನ್ ಶೇಣಿ, ಸಿರಿಯಲ್ ನಟಿ ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವರು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಛಾಯಾಗ್ರಹಣ ಹಾಗೂ ಗಣೇಶ್ ನೀರ್ಚಾಲ್ ಸಂಕಲನ, ಸಮರ್ಥನ್ ಎಸ್. ರಾವ್ ಸಂಗೀತವಿದೆ.


