ಜನಪದ ಶೈಲಿಯಲ್ಲಿ ಬಿಡುಗಡೆ ಆಯ್ತು “ಪಪ್ಪಿ” ಚಿತ್ರದ “ಕಾಲ ಕೆಟ್ಟೈತಂತ” ಹಾಡು

Date:

  • ಜನಪದ ಶೈಲಿಯಲ್ಲಿ ಬಿಡುಗಡೆ ಆಯ್ತು “ಪಪ್ಪಿ” ಚಿತ್ರದ “ಕಾಲ ಕೆಟ್ಟೈತಂತ” ಹಾಡು
  • ಹಿಟ್ ಆಗ್ತಿದೆ ಆಯುಷ್ ಮಲ್ಲಿ‌ ನಿರ್ದೇಶನದ ಚಿತ್ರದ ಈ ಹಾಡು.
  • ಎ2 ಮ್ಯೂಸಿಕ್ ಚಾನಲ್ ನಲ್ಲಿ ಬಿಡುಗಡೆ ಆಗಿದೆ ಜನಪದ ಶೈಲಿಯ ಹಾಡಿನ ಲಿರಿಕಲ್ ವೀಡಿಯೋ

ಬಿ.ಬಿ.ಸಂಕನೂರು B B Sankanuru ಬ್ಯಾನರ್ ಅಡಿಯಲ್ಲಿ ಆನಂದಪ್ಪ ಸಂಕನೂರು Anandappa Sankanuru ನಿರ್ಮಿಸುತ್ತಿರುವ ಹಾಸ್ಯಮಯ ಭಾವನಾತ್ಮಕ ಚಿತ್ರ “ಪಪ್ಪಿ” Puppy ಟ್ರೇಲರ್ ಬಿಡುಗಡೆಗೊಂಡು ಸಕ್ಕತ್ ವ್ಯೂಸ್ ಪಡೆದ ಬೆನ್ನಲ್ಲೇ ಇದೀಗ “ಕಾಲ ಕೆಟ್ಟೈತಂತ” ಲಿರಿಕಲ್ ಹಾಡು ಎ2 ಮ್ಯೂಸಿಕ್ A2 Music ಚಾನಲ್ ನಲ್ಲಿ ಬಿಡುಗಡೆಗೊಂಡಿದೆ. ನಿಂಗಣ್ಣ ದೋಣಿ Ninganna Doni ಮತ್ತು ಆಯುಷ್ ಮಲ್ಲಿ Ayush Malli ಸಾಹಿತ್ಯ, ಸಂಗೀತವಿರುವ ಈ ಹಾಡು ಈಗಿನ ಕಾಲದ ಕುರಿತಾಗಿದೆ‌. ಆಧುನಿಕ ಸಮಾಜದ ಬದಲಾವಣೆಗಳನ್ನು, ಬೆಲೆ ಏರಿಕೆಯ ಬಿಸಿಯನ್ನು ಜನಪದ ಶೈಲಿಯಲ್ಲಿ ತಿಳಿಸುವ ಪ್ರಯತ್ನ ಈ ಹಾಡಿನ ಮೂಲಕ ಮಾಡಿದೆ ಚಿತ್ರತಂಡ.

ಹಾಸ್ಯ, ಮುಗ್ಧತೆ, ಭಾವನೆಗಳ ಸಮ್ಮಿಲನ

ಬಾಲ ಕಲಾವಿದರಾಗಿ ಜಗದೀಶ್ ಕೊಪ್ಪಳ Jagadish Koppala ಹಾಗೂ ಆದಿತ್ಯ ಸಿಂಧನೂರು Adithya Sindhanuru ಬಹಳ ಮುಗ್ಧರಾಗಿ, ನೈಜತೆ, ಸಹಜತೆಯಿಂದ ಪಾತ್ರಕ್ಕೆ ಮೆರುಗು ತಂದಿದ್ದಾರೆ. ಇದೊಂದು ಹಾಸ್ಯಮಯ, ಭಾವನಾತ್ಮಕ, ಶುದ್ಧ ಪ್ರೀತಿ ತೋರಿಸುವ ಚಿತ್ರವಾಗಿದ್ದು ಜನರ ಮನಸ್ಸಿಗೆ ಬಹಳ ಹತ್ತಿರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಂಗಳೂರು ಸ್ಲಂ ಏರಿಯಾದಲ್ಲಿ ವಾಸಿಸುವ ಕಡು ಬಡತನದ ಕೆಳವರ್ಗದ ಕುಟುಂಬ, ಅಲ್ಲಿನ ಮಕ್ಕಳು, ಅವರ ಖುಷಿ, ಸುಖ- ದುಖಗಳ ಜೊತೆ ಅವರ ದಿನ ನಿತ್ಯದ ಜೀವನವನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರಬಹುದೆಂಬ ನಿರೀಕ್ಷೆ ಮೂಡುತ್ತದೆ‌. ಚಿತ್ರದಲ್ಲಿ ಬರುವ ಪಪ್ಪಿ ಮುದ್ದಾಗಿದ್ದು, ಪ್ರಾಣಿ ಪ್ರಿಯರನ್ನಂತೂ ಖಂಡಿತಾ ಕಾಡುತ್ತದೆ.

ಚಿತ್ರದಲ್ಲಿ ಅದೃಷ್ಟ್ ಸಂಕನೂರು, ಋತ್ವಿಕ್ ಬಳ್ಳಾರಿ, ದುರುಗಪ್ಪ ಕಾಂಬ್ಲಿ, ರೇಣುಕ, ಆರವ್ ಲೋಹಿತ್ ನಾಗರಾಜ್ ಮುಂತಾದವರು ಪಾತ್ರನಿರ್ವಹಿಸಿದ್ದು, ಚಿತ್ರ ಬಿಡುಗಡೆಗೆ ಸಿನಿಪ್ರಿಯರು ಕಾತುರರಾಗಿದ್ದಾರೆ. ಚಿತ್ರಕ್ಕೆ ಶ್ರೀಧರ್ ಕಶ್ಯಪ್, Shridhar Kashyap ರವಿ ಬಿಲ್ಲೂರ್ Ravi Billur ಸಂಗೀತ ಸಂಯೋಜಿಸಿದ್ದಾರೆ. ಬಿ.ಸುರೇಶ್ ಬಾಬು ಛಾಯಾಗ್ರಹಣ ಮಾಡಿದ್ದು, ವಿಶ್ವ ಎನ್.ಎಮ್. ಸಂಕಲನಕ್ಕೆ ಕೈಜೋಡಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img

Popular

You Might Also Like
Related

“ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ

“ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ ಕನ್ನಡದ “ಲವ್...

ಟೈಟಲ್ ನಿಂದಲೇ ಕುತೂಹಲ ಕ್ರಿಯೇಟ್ ಮಾಡ್ತಿದೆ “ಎಲ್ಟು ಮುತ್ತಾ”

ಟೈಟಲ್ ನಿಂದಲೇ ಕುತೂಹಲ ಕ್ರಿಯೇಟ್ ಮಾಡ್ತಿದೆ “ಎಲ್ಟು ಮುತ್ತಾ” ಹೈ5 ಸ್ಟುಡಿಯೋಸ್ ನ...

ಬಿಡುಗಡೆ ಆಯ್ತು ಹೊಸಪ್ರತಿಭೆಗಳ “ವಿಕ್ಕಿ” ಟ್ರೇಲರ್

ಬಿಡುಗಡೆ ಆಯ್ತು ಹೊಸಪ್ರತಿಭೆಗಳ “ವಿಕ್ಕಿ” ಟ್ರೇಲರ್ ದೀಪಕ್ ಎಸ್ ಅವಂದಕರ್ ನಿರ್ದೇಶನದಲ್ಲಿ ಮೂಡಿ...

ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ “ಯುದ್ಧಕಾಂಡ”

ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ “ಯುದ್ಧಕಾಂಡ" ಪವನ್ ಭಟ್ ಆಕ್ಷನ್ ಕಟ್ ಹೇಳಿರುವ,...