- ರಿಲೀಸ್ ಆಯ್ತು “ಕೆಡಿ” ಸಿನಿಮಾದ “ನಂಗೂ ನಿಂಗೂ ಸೆಟ್ಟಾಗಲ್ಲ” ಹಾಡು
- ಪ್ರೇಮ್ ನಿರ್ದೇಶನ, ಧೃವ ಸರ್ಜಾ ನಟನೆಯ ಚಿತ್ರ “ಕೆಡಿ”
- ಅರ್ಜುನ್ ಜನ್ಯಾ ಸಂಗೀತದಲ್ಲಿ ಮೂಡಿಬಂದಿವೆ ಚಿತ್ರದ ಹಾಡುಗಳು
ಆನಂದ್ ಆಡಿಯೋ Anand Audio ಯೂಟ್ಯೂಬ್ ನಲ್ಲಿ ಈಗಾಗಲೇ “ಕೆಡಿ” Kedi ಚಿತ್ರದ “ಶಿವ ಶಿವಾ” Shiva Shiva ಹಾಡು ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ಟ್ರೆಂಡಿಂಗ್ ಆಗ್ತಿದೆ. ಇದೇ ಸಂದರ್ಭದಲ್ಲಿ ಚಿತ್ರತಂಡ ಈಗ ಇನ್ನೊಂದು ಹಾಡು ರಿಲೀಸ್ ಮಾಡಿದೆ. “ನಂಗೂ ನಿಂಗೂ ಸೆಟ್ಟಾಗಲ್ಲ” Nangu Ningu Settagalla ಎಂಬ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ನಾಗಾಲೋಟದಲ್ಲಿ ವ್ಯೂಸ್ ಪಡೀತಿದೆ. ಈ ಹಾಡಲ್ಲಿ ನಾಯಕ ಧೃವಸರ್ಜಾ Druva Sarja ಹಾಗೂ ನಾಯಕಿ ರೀಷ್ಮಾ ನಾಣಯ್ಯ Reeshma Nanaiha ಜೊತೆಗೂಡಿ ಹೆಜ್ಜೆ ಹಾಕಿದ್ದಾರೆ.
ಢಿಫೆರೆಂಟ್ ಆಗಿದೆ ಈ ಸಾಂಗ್
ಕೆಡಿ ಚಿತ್ರದ ನಿರ್ದೇಶಕ ಪ್ರೇಮ್ Prem ಅವರೇ ಈ ಹಾಡಿಗೂ ಸಾಹಿತ್ಯ ಬರೆದಿದ್ದು, ಅರ್ಜುನ್ ಜನ್ಯಾ Arjun Janya ಸಂಗೀತ ಸಂಯೋಜನೆ ಇದೆ. ಮಿಕಾ ಸಿಂಗ್ Mika Singh ಅವರ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿನ ವೀಡಿಯೋದಲ್ಲಿ ಸಂಗೀತ ಸಂಯೋಜನೆಯ ವಿಶಿಷ್ಟ ವೀಡಿಯೋ ಕೂಡಾ ಇದೆ. ನಾಯಕ, ನಾಯಕಿಯರು ಹೆಜ್ಜೆ ಹಾಕುತ್ತಾ ಹಾಡಿನ ಮಧ್ಯೆಯೇ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್, ಅವರ ಸಿಗ್ನೇಚರ್ ಸ್ಟೆಪ್ ಗಳನ್ನೂ ಬಳಸಿರುವುದು ವಿಶೇಷ.
ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಸಂಪೂರ್ಣ ಆಡಿಯೋ ರೈಟ್ಸ್ ಅನ್ನು ಆನಂದ್ ಆಡಿಯೋ ಸಂಸ್ಥೆಯವರು 17.70 ಕೋಟಿ ಭರ್ಜರಿ ಮೊತ್ತ ನೀಡಿ ಖರೀದಿಸಿದೆ. ಅಲ್ಲದೇ ಈ ಚಿತ್ರಕ್ಕೆ 256 ಪೀಸ್ ಆರ್ಕೆಸ್ಟ್ರಾ ಬಳಸಿರುವುದೂ ಇದರ ಇನ್ನೊಂದು ವೈಶಿಷ್ಟ್ಯ. ಚಿತ್ರೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು, ಚಿತ್ರ ಹೊರಬರಲು ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ.