- ಮೆಜೆಸ್ಟಿಕ್ ಆಗಿ ಹೊರಬಂತು “ನಾಯಕ ನಾನೇ” ಸಾಂಗ್
- ರಾಮು ಕಥೆ, ಚಿತ್ರಕಥೆ, ನಿರ್ದೇಶನವಿರುವ ಚಿತ್ರ “ಮೆಜೆಸ್ಟಿಕ್ -2″
- ಹೊಸಪ್ರತಿಭೆಗಳಾದ ಭರತ್ ಕುಮಾರ್, ಸಂಹಿತಾ ವಿನ್ಯಾ ಮುಖ್ಯಭೂಮಿಕೆಯಲ್ಲಿದ್ದಾರೆ.
ಅಮ್ಮ ಎಂಟರ್ಟೈನ್ಮೆಂಟ್ಸ್ Amma Entertinments ಬ್ಯಾನರ್ ಅಡಿಯಲ್ಲಿ ಎಚ್. ಆನಂದಪ್ಪ H. Anandappa ನಿರ್ಮಿಸುತ್ತಿರುವ ಚಿತ್ರ “ಮೆಜೆಸ್ಟಿಕ್-2″. Majestic-2 ಇತ್ತೀಚೆಗಷ್ಟೇ ಇದರ “ನಾಯಕ ನಾನೇ” Nayaka Nane ಎಂಬ ಹಾಡು ಆನಂದ್ ಆಡಿಯೋ Anand Audio ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಒಳ್ಳೆ ವ್ಯೂಸ್ ಪಡೀತಿದೆ. ರಾಮು ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿರೋ ಈ ಚಿತ್ರಕ್ಕೆ ಹೊಸಪ್ರತಿಭೆಗಳಾದ ಭರತ್ ಕುಮಾರ್ Bharath Kumar ಹಾಗೂ ಸಂಹಿತಾ ವಿನ್ಯಾ Samhitha Vinya ಜೋಡಿ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದಾರೆ.
ಮೆಜೆಸ್ಟಿಕ್ ಹುಡುಗನ ಕಥೆ
ಮೆಜೆಸ್ಟಿಕ್ ನಲ್ಲಿ ಹುಟ್ಟಿ ಬೆಳೆದ ಹುಡುಗನ ಕಥೆ ಇದಾಗಿದ್ದು, ನಾಯಕನ ಪಾತ್ರಕ್ಕೆ ಎರಡು ಶೇಡ್ ಇದರಲ್ಲಿದೆ. ಮಾಸ್ ಕಥೆ ಹೊಂದಿರುವ ಚಿತ್ರ ಇದಾಗಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟಾಂಡ್, ಅಂಡರ್ ಪಾಸ್, ರಾಮೋಹಳ್ಳಿ, ಹೆಚ್.ಎಂ.ಟಿ., ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದ್ದು, ಪೂರ್ಣಗೊಂಡಿದೆ. ಬಿಡುಗಡೆಯ ದಿನಾಂಕ ಸದ್ಯದಲ್ಲೇ ಘೋಷಣೆಯಾಗಬೇಕಿದೆ.
ನಟಿ ಶೃತಿ Shruthi ನಾಯಕನ ತಾಯಿ ಪಾತ್ರದಲ್ಲಿದ್ದು, ವಿನು ಮನಸು ಸಂಗೀತ ನಿರ್ದೇಶನವಿದೆ. ವೀನಸ್ ಮೂರ್ತಿ ಛಾಯಾಗ್ರಹಣವಿದೆ.