- ಬಿಸಿಲೆ ಕ್ರಿಯೇಷನ್ ಬ್ಯಾನರ್ ನಲ್ಲಿ ಸೆಟ್ಟೇರಲಿದೆ ಕರಾವಳಿ ಮಣ್ಣಿನ ಸೊಗಡಿನ ಕಥೆ
- ಇನ್ನೂ ಹೆಸರಿಡದ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಸಂಚಲನ ಕ್ರಿಯೇಟ್ ಮಾಡ್ತಿದೆ.
- ಕರಾವಳಿಯ ಹುಡುಗ ಆರ್ಯನ್ ಶೆಟ್ಟಿ ನಿರ್ದೇಶನ ಹಾಗೂ ನಾಯಕತ್ವದಲ್ಲಿ ಬರಲಿದೆ ಹೊಸಚಿತ್ರ
ಬಿಸಿಲೆ ಕ್ರಿಯೇಷನ್ Bisile Creation ನ ಬ್ಯಾನರ್ ಅಡಿಯಲ್ಲಿ ಎರಡನೇ ಚಿತ್ರ ಅನೌನ್ಸ್ ಆಗಿದ್ದು, ಭಯಾನಕ, ಕುತೂಹಲಕಾರಿ ಪೋಸ್ಟರ್ ಬಿಡುಗಡೆಯಾಗಿದೆ. ಇನ್ನೂ ಹೆಸರಿಡದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಪುತ್ತೂರಿನ ಹುಡುಗ ಆರ್ಯನ್ ಶೆಟ್ಟಿ Aryan Shetty. ಇತ್ತೀಚೆಗಷ್ಟೇ ಈ ಹೊಸಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು ಸ್ವತಃ ಚಿತ್ರದ ನಾಯಕನೂ ಆಗಿರುವ ಆರ್ಯನ್ ಶೆಟ್ಟಿ ಅವರ ಭಯಂಕರ ಲುಕ್ ಈ ಪೋಸ್ಟರ್ ನಲ್ಲಿದೆ.
ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಈ ಚಿತ್ರ
ಕರಾವಳಿಯ ನೆಲದ ಸೊಗಡಿನ, ಮಣ್ಣಿನ ಪರಿಮಳದ ಕಥೆ ಹೇಳುವ ಈ ಚಿತ್ರ ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಪೋಸ್ಟರ್ ನಲ್ಲಿರುವಂತೆ ಚಿತ್ರವೂ ಅಗ್ರೆಸಿವ್ ಆಗಿರಲಿದ್ದು, ಸ್ಥಳಿಯ ಕಥೆಯೊಂದನ್ನು ಹೇಳಲಿದ್ದಾರಂತೆ ಚಿತ್ರದ ನಿರ್ದೇಶಕರು. ಪೋಸ್ಟರ್ ನಲ್ಲಿ ನಾಯಕನ ಕೈಯಲ್ಲಿ ಅಂಕದ ಕೋಳಿ ಕೂಡಾ ಕಾಣಿಸಿಕೊಂಡಿರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಸದ್ಯದಲ್ಲೇ ಟೈಟಲ್ ಟೀಸರ್
ಸದ್ದು ಮಾಡುತ್ತಿರುವ ಈ ಫಸ್ಟ್ ಲುಕ್ ಪೋಸ್ಟರ್ ಛಾಯಾಗ್ರಾಹಕ ರಾಹುಲ್ ಸಾಲ್ಯಾನ್ ಅವರ ಕೈಚಳಕದಲ್ಲಿ ಮೂಡಿಬಂದಿದೆ. ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಟೈಟಲ್ ಟೀಸರ್ ಹೊರಬರಲಿದೆ. ಜೂನ್ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.