ಕುಡುಬಿ ಜನಾಂಗದ ಕತೆ, ಕುಂದಾಪ್ರ ಭಾಷೆಯ ಸೊಗಡಿನ ಸದ್ದು “ಗುಂಮ್ಟಿ”

Date:

  • ಕುಡುಬಿ ಜನಾಂಗದ ಕತೆ, ಕುಂದಾಪ್ರ ಭಾಷೆಯ ಸೊಗಡಿನ ಸದ್ದು “ಗುಂಮ್ಟಿ”
  • ನಾಯಕ, ನಿರ್ದೇಶಕನಾಗಿ ಸಂದೇಶ್ ಕುಮಾರ್ ಅಜ್ರಿ
  • ಕಡಿಮೆ ಬಜೆಟ್ ನಲ್ಲಿ ಕಲಾತ್ಮಕ ಚಿತ್ರ
  • ಡಿಸೆಂಬರ್ 4ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಂಡಿದೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಕುಡುಬಿ ಸಮುದಾಯದ ಜನರ ಸಾಂಪ್ರದಾಯಿಕ ಆಚರಣೆಯ ಕುರಿತು ಪರಿಚಯಿಸುವ ಚಲನಚಿತ್ರ ಗುಂಮ್ಟಿ. ಗೋವಾದಲ್ಲಿ ಪೋರ್ಚುಗೀಸರ ದಾಳಿಯಿಂದ ನೊಂದು ಕರ್ನಾಟಕದ ಕಡೆ ಒಲಸೆ ಬಂದು ನೆಲೆನಿಂತಿರುವ ಕುಡುಬಿ ಸಮುದಾಯದ ಜನಪದ ಕಲೆಯಾದ ಗುಂಮ್ಟಿ ಕಲೆಯೇ ಈ ಚಿತ್ರದ ಜೀವಾಳ. Gumti Movie ಗುಂಮ್ಟಿ ಎಂದರೆ ಈ ಜನಪದ ಕಲೆಯಲ್ಲಿ ಬಳಸುವ ಮಣ್ಣಿನಿಂದ ಮಾಡಿದ ವಾದ್ಯ. ಈ ಗುಮ್ಟಿ ಕಲೆ, ಕುಡುಬಿ ಜನಾಂಗದ ಸಂಸ್ಕೃತಿ, ಸಂಪ್ರದಾಯಗಳನ್ನು ಈ ಆಧುನಿಕ ಕಾಲದಲ್ಲಿ ಉಳಿಸುವ ಹೋರಾಟದ ಕತೆ ಈ ಚಿತ್ರ ಒಳಗೊಂಡಿದೆ.

ಕಡಿಮೆ ಬಜೆಟ್ ನ ಕಲಾತ್ಮಕ ಚಿತ್ರ

ತಸ್ಮಯ್ ಪ್ರೊಡಕ್ಷನ್ ಅಡಿಯಲ್ಲಿ ವಿಕಾಸ್ ಎಸ್ ಶೆಟ್ಟಿ ನಿರ್ಮಿಸಿರುವ ಈ ಚಿತ್ರ ಅತಿ ಕಡಿಮೆ ಬಜೆಟ್ ನಲ್ಲಿ ನಿರ್ಮಾಣಗೊಂಡಿದ್ದು, 20-30 ದಿನಗಳ ಅವಧಿಯಲ್ಲಿ ಶೂಟಿಂಗ್ ಮುಗಿದಿದೆ. ಉಡುಪಿ, ಕುಂದಾಪುರ, ಕಾರವಾರ, ಶಿರಸಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸೊಲ್ಲಾಪುರ ಮತ್ತು ಪಶ್ಚಿಮ ಘಟ್ಟದ ವಿವಿಧ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಮೆಹಬೂಬ್ ಸಾಬ್ ಮತ್ತು ಡುಂಡಿ ಮೋಹನ್ ಸಂಗೀತ ಸಂಯೋಜನೆ ಇದೆ. ಅನೀಶ್ ಡಿಸೋಜಾ ಅವರ ಛಾಯಾಗ್ರಹಣ ಮತ್ತು ಶಿವರಾಜ್ ಮೇಹು ಅವರ ಸಂಕಲನವಿದೆ. ತಾರಾಗಣದಲ್ಲಿ ಮಲ್ಲಿ, ಕುಡುಬಿ ಹುಡುಗಿಯಾಗಿ ವೈಷ್ಣವಿ ನಾಡಿಗ್, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ್ ಮತ್ತು ರಂಜನ್ ಛತ್ರಪತಿ ಮುಂತಾದವರಿದ್ದಾರೆ.

ಈ ಸಿನಿಮಾ ಕೈ ಹಿಡಿಯಲಿಲ್ಲ ಕನ್ನಡ ಪ್ರೇಕ್ಷಕ?

ಕನ್ನಡದಲ್ಲಿ ಬಂದ ಸದಭಿರುಚಿಯ ಒಂದೊಳ್ಳೆ ಸಿನಿಮಾಗಳಲ್ಲಿ ಗುಂಮ್ಟಿಯೂ ಒಂದು. ಆದರೆ ಕನ್ನಡದ ಪ್ರೇಕ್ಷಕರು ಇಂತಹ ಒಳ್ಳೊಳ್ಳೆ ಸಿನಿಮಾಗಳನ್ನು ಯಾಕೋ ಗೆಲ್ಲಿಸುತ್ತಿಲ್ಲ, ಇಂತದ್ದೇ ಸಿನಿಮಾ ಬೇರೆ ಭಾಷೆಗಳಲ್ಲಿ ಬಂದಿದ್ದರೆ ಅಲ್ಲಿನ ಪ್ರೇಕ್ಷಕ ಪ್ರಭು ಈ ಸಿನಿಮಾವನ್ನು ಗೆಲ್ಲಿಸುತ್ತಿದ್ದ. ಆದರೆ ಕನ್ನಡ ಪ್ರೇಕ್ಷಕರು ಕೈ ಹಿಡಿಯದೇ ಇರುವುದು ನಿಜಕ್ಕೂ ಬೇಸರದ ಸಂಗತಿ ಎನ್ನುವುದು ಸದಭಿರುಚಿಯ ಸಿನಿಮಾ ವಿಶ್ಲೇಷಕರ ಅನ್ನಿಸಿಕೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...