- ಸಸ್ಪೆನ್ಸ್ ಜೊತೆಗೆ ಎಮೋಷನಲ್ ಫೀಲ್ ಕೊಡಲು “ಉಸಿರು” ರೆಡಿ: ಯಾವಾಗ ರಿಲೀಸ್?
- ನಟ ತಿಲಕ್ ಶೇಖರ್, ನಾಯಕಿಯಾಗಿ ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
- ಚಿತ್ರಕ್ಕೆ ಪನೇಮ್ ಪ್ರಭಾಕರ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಕನ್ನಡದಲ್ಲಿ ಬಹುನಿರೀಕ್ಷಿತ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಿನಿಮಾವೊಂದು ಆಗಸ್ಟ್ 29 ಕ್ಕೆ ರಿಲೀಸ್ ಆಗ್ತಿದೆ. ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು ಎಂಬ ಪರಿಕಲ್ಪನೆಯ ಮೇಲೆ ತಯಾರಾಗಿರುವ ಈ ಚಿತ್ರವೇ “ಉಸಿರು”Usiru. ಆರ್.ಎಸ್.ಪಿ. ಪ್ರೊಡಕ್ಷನ್ SRO Production ಮೂಲಕ ಲಕ್ಷ್ಮಿ ಹರೀಶ್ ನಿರ್ಮಿಸಿರುವ, ನಟ ತಿಲಕ್ ಶೇಖರ್ Thilak Shekhar, ನಾಯಕಿಯಾಗಿ ಪ್ರಿಯಾ ಹೆಗ್ಡೆ Priya Hegde ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪನೇಮ್ ಪ್ರಭಾಕರ್ Panem Prabhakar ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಆರ್.ಎಸ್. ಗಣೇಶ್ ನಾರಾಯಣನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಭೈರವರಾಮ ಸಂಭಾಷಣೆ ಹಾಗೂ ಸಾಹಿತ್ಯ ರಚಿಸಿದ್ದಾರೆ. ಸಹ ನಿರ್ಮಾಪಕ ಹರೀಶ್ ಅವರು ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಸಸ್ಪೆನ್ಸ್ ಜೊತೆಗೆ ಎಮೋಷನಲ್ ಅಂಶಗಳು
ಅನಾಮಧೇಯ ವ್ಯಕ್ತಿಯಿಂದ ಹೆಂಡತಿಯ ಪ್ರಾಣಕ್ಕೆ ಆಪತ್ತು ಬಂದಾಗ, ಪೊಲೀಸ್ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವ ಕತೆ ಈ ಚಿತ್ರದ್ದು. ಚಿತ್ರದಲ್ಲಿ ಸಸ್ಪೆನ್ಸ್ ಜೊತೆಗೆ ಎಮೋಷನಲ್ ಅಂಶಗಳು ಕೂಡ ಸಾಕಷ್ಟಿವೆ ಎನ್ನುವುದು ಚಿತ್ರತಂಡದ ಗ್ಯಾರಂಟಿ. ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದ್ದು ಟ್ರೆಂಡಿಯಾಗಿದೆ. ಸಿನಿಮಾ ರಿಲೀಸಾಗಿ ಪ್ರೇಕ್ಷಕರನ್ನು ಸೆಳೆಯಲು ಕಾಯುತ್ತಿದೆ.