ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್

Date:

  • ಸಖತ್ ಟ್ರೆಂಡಿಂಗ್ ನಲ್ಲಿದೆ “ಎಲ್ಟು ಮುತ್ತಾ” ಟೀಸರ್
  • ಕೊಡಗಿನ ಸ್ವಾದವಿರುವ ವಿಭಿನ್ನ ಚಿತ್ರವಿದು
  • ರಾ.ಸೂರ್ಯ ಬರೆದು ನಿರ್ದೇಶಿಸಿ, ರಾ.ಸೂರ್ಯ- ಶೌರ್ಯ ಪ್ರತಾಪ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ

ಬಹುನಿರೀಕ್ಷಿತ “ಎಲ್ಟು ಮುತ್ತಾ” Eltu Muttha ಚಿತ್ರದ ಟೀಸರ್ ಅದ್ದೂರಿಯಾಗಿ ಬಿಡುಗಡೆಯಾಗಿ ಟ್ರೆಂಡ್ ಸೃಷ್ಟಿಸಿದೆ. ಹೈ5 ಸ್ಟುಡಿಯೋಸ್ Hi-Fi Studios ಲಾಂಛನದಲ್ಲಿ ಸತ್ಯ ಶ್ರೀನಿವಾಸನ್ Sathya Srinivasan ನಿರ್ಮಿಸಿರುವ, ರಾ.ಸೂರ್ಯ Ra. Surya ಬರೆದು ನಿರ್ದೇಶಿಸಿರುವ ಹಾಗೂ ರಾ.ಸೂರ್ಯ – ಶೌರ್ಯ ಪ್ರತಾಪ್ Shourya Prathap ಪ್ರಮುಖ ಪಾತ್ರದಲ್ಲಿ ನಟಿಸಿರುವ “ಎಲ್ಟು ಮುತ್ತಾ” ಸಾವಿನ ಸಮಯದಲ್ಲಿ ಡೋಲು ಹೊಡೆಯುವವರ ಕತೆಯನ್ನಾಧರಿಸಿದ ಸಿನಿಮಾ. ವಿಭಿನ್ನ ನಿರೂಪಣೆಯ ಸಸ್ಪೆನ್ಸ್ ಚಿತ್ರವಿದು. ಈ ಸಿನಿಮಾದ ಟೀಸರ್ ಇದೀಗ ಚಿತ್ರದ ಕುರಿತು ಕುತೂಹಲ ಮೂಡಿಸೋ ಜೊತೆಗೆ ಅತ್ಯಧಿಕ ವೀಕ್ಷಣೆಗಳನ್ನು ಪಡೆಯುತ್ತಿದೆ.

ಎಲ್ಟು, ಮುತ್ತಾ ಪಾತ್ರಗಳ ಸುತ್ತ ಸುತ್ತುವ ಕಥೆ

ಇದು ಮುಖ್ಯವಾಗಿ ಎಲ್ಟು ಮತ್ತು ಮುತ್ತಾ ಎನ್ನುವ ಎರಡು ಪಾತ್ರಗಳ ಕತೆ, ಎಲ್ಟು ಪಾತ್ರದಲ್ಲಿ ರಾ.ಸೂರ್ಯ ಕಾಣಿಸಿಕೊಂಡಿದ್ದರೆ, ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಪ್ರಿಯಾಂಕಾ ಮಾಲಲಿ Priyanka Malali ಸಾಥ್ ನೀಡಿದ್ದಾರೆ. ಸಿನಿಮಾದಲ್ಲಿ ನವೀನ್ ಪಡೀಲ್, ಕಾಕ್ರೋಜ್ ಸುಧೀ, ಯಮುನ ಶ್ರೀನಿಧಿ ಅವರಂತಹ ಸೃಜನಶೀಲ ಕಲಾವಿದರ ದಂಡೇ ಇದೆ. ಜೊತೆಗೆ ನೂತನ ಪ್ರತಿಭೆಗಳ ಸಂಗಮವಿದೆ. ಇದು ಕೊಡಗು ಭಾಗದಲ್ಲಿ ನಡೆಯುವ ಕಥೆಯಾದ್ದರಿಂದ ಸಿನಿಮಾದ ಬಹುತೇಕ ಚಿತ್ರೀಕರಣ ಕೂಡ ಕೊಡಗಿನಲ್ಲೇ ನಡೆದಿದೆ. ಚಿತ್ರದ ಸಂಭಾಷಣೆಯಲ್ಲಿ ಕೂಡ ಕೊಡಗು ಕನ್ನಡದ ಸೊಗಸಿದೆಯಂತೆ. ಟೀಸರ್ ನಲ್ಲಿಯೂ ಇದು ಗಮನಕ್ಕೆ ಬರುತ್ತದೆ.

ಶೌರ್ಯ ಪ್ರತಾಪ್ ಇಲ್ಲಿ ನಟನೆಯ ಜೊತೆಗೆ ಸಹನಿರ್ದೇಶನದಲ್ಲಿಯೂ ತೊಡಗಿಸಿಕೊಂಡು ರಾ ಸೂರ್ಯ ಅವರ ಜೊತೆಯಾಗಿದ್ದಾರೆ. ಚಿತ್ರಕ್ಕೆ ಪ್ರಸನ್ನ ಕೇಶವ ಸಂಗೀತ, ಮೆಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಇದೆ. ಅಜಿತ್ ಕೇಶವ, ರಾ ಸೂರ್ಯ ಹಾಗೂ ಶೌರ್ಯಪ್ರತಾಪ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿನಿಮಾದ ಡಬ್ಬಿಂಗ್ ಕೆಲಸಗಳು ಮುಗಿದಿದೆ. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್

“ಜಸ್ಟ್ ಮ್ಯಾರೀಡ್” ರಿಲೀಸ್ ಡೇಟ್ ಫಿಕ್ಸ್ ಆಗಸ್ಟ್ 22 ಕ್ಕೆ ಹೊರಬರಲಿದೆ ಸಿ.ಆರ್...

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು”

ಕುಟುಂಬದ ಕಹಾನಿ ಹೇಳಲು ಕಿರುತೆರೆಗೆ ಬಂತು “ನಾವು ನಮ್ಮವರು” ಹೊಸ ರಿಯಾಲಿಟಿ ಶೋ...