- “ಡ್ಯೂಡ್” ಸಿನಿಮಾದ ಟೀಸರ್ ಅಬ್ಬರ: ಪುಟ್ಬಾಲ್ ಹಿನ್ನೆಲೆಯ ಕತೆ ಹೇಳಲಿದೆ ಬಹುನಿರೀಕ್ಷಿತ ಚಿತ್ರ
- ನಿರ್ದೇಶಕ ತೇಜ್ ಆರ್ ಅವರ ನಟನೆ, ನಿರ್ದೇಶನ ಮತ್ತು ನಿರ್ಮಾಣದ “ಡ್ಯೂಡ್”
- ಸಖತ್ ಆಕ್ಷನ್ ಮತ್ತು ಸ್ಟಂಟ್ ಗಳಿಂದ ಕೂಡಿರುವ ಟೀಸರ್ ಸಖತ್ ಸದ್ದು ಮಾಡುತ್ತಿದೆ.
ಪಾನಾರೋಮಿಕ್ ಸ್ಟುಡಿಯೋ Panaromic Studio ಬ್ಯಾನರ್ ಅಡಿ ಮೇಘನಾ ರಾಜ್ Meghana Raj ಅವರ ಸಹೋದರ “ರಿವೈಂಡ್” “ರಾಮಾಚಾರಿ 2.0” ಚಿತ್ರಗಳ ಖ್ಯಾತಿಯ ನಿರ್ದೇಶಕ ತೇಜ್ ಆರ್ Tej R ಅವರ ನಟನೆ, ನಿರ್ದೇಶನ ಮತ್ತು ನಿರ್ಮಾಣದ “ಡ್ಯೂಡ್” Dude ಎನ್ನುವ ಹೊಸ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಚಿತ್ರದಲ್ಲಿ ತೇಜ್ ಜೊತೆಗೆ ಸಾನ್ಯಾ ಕಾವೇರಮ್ಮ Saanya Kaveramma, ರಾಘವೇಂದ್ರ ರಾಜ್‍ಕುಮಾರ್ Raghavendra Raj Kumar, ರಂಗಾಯಣ ರಘು Rangayana Raghu, ಸುಂದರ್ ರಾಜ್, ವಿಜಯ್ ಚೆಂಡೂರು, ಸ್ಪರ್ಶ ರೇಖಾ ಮುಂತಾದವರು ನಟಿಸಿದ್ದಾರೆ.

ಫುಟ್ಬಾಲ್ ಹಿನ್ನೆಲೆಯ ಸಿನಿಮಾ
ಸಖತ್ ಆಕ್ಷನ್ ಮತ್ತು ಸ್ಟಂಟ್ ಗಳಿಂದ ಕೂಡಿರುವ ಈ ಟೀಸರ್ ಸಖತ್ ಸದ್ದು ಮಾಡುತ್ತಿದೆ. ವಿಶೇಷ ಅಂದ್ರೆ ಈ ಸಿನಿಮಾ ಫುಟ್ಬಾಲ್ ಹಿನ್ನೆಲೆಯ ಸಿನಿಮಾ ಎನ್ನುವುದು.
ಬಾಲಿವುಡ್ ನಲ್ಲಿ ಕ್ರಿಕೆಟ್, ಹಾಕಿ ಹಿನ್ನೆಲೆಯ ಚಿತ್ರಗಳೆಲ್ಲಾ ಅಬ್ಬರಿದ್ದವು.ಇದೀಗ ಕನ್ನಡದಲ್ಲಿ “ಡ್ಯೂಡ್” ಮೂಲಕ ಫುಟ್ಬಾಲ್ ಹಿನ್ನೆಲೆಯ ಸಿನಿಮಾ ಬರುತ್ತಿರುವುದು ಕುತೂಹಲ ಮೂಡಿಸಿದೆ. ಜೊತೆಗೆ 12 ಹೊಸ ನಾಯಕಿಯರನ್ನು ಈ ಚಿತ್ರದಲ್ಲಿ ಪರಿಚಯಿಸಲಾಗಿದೆಯಂತೆ.

ಚಿತ್ರಕ್ಕೆ ಎಮಿಲ್ ಮೊಹಮ್ಮದ್ ಸಂಗೀತ ಸಂಯೋಜನೆ ಇದ್ದು, ಪ್ರೇಮ್ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರೀಕರಣ ಅರ್ಧ ಮುಗಿದಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
