ಟೈಟಲ್ ಮೂಲಕವೇ ಸದ್ದು ಮಾಡ್ತಿದೆ “Congratulation Brother”

Date:

  • ಟೈಟಲ್ ಮೂಲಕವೇ ಸದ್ದು ಮಾಡ್ತಿದೆ “Congratulation Brother”
  • ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನೆಡೆ ಗಮನ ಹರಿಸಿದೆ ಚಿತ್ರತಂಡ
  • ಹೊಸ ಪ್ರತಿಭೆಗಳ ಈ ತಂಡಕ್ಕೆ ಪ್ರತಾಪ್ ಗಂಧರ್ವ ಆಕ್ಷನ್ ಕಟ್ ಹೇಳಿದ್ದಾರೆ.

ಮೂರು ತಿಂಗಳ ಹಿಂದೆ ಚಿತ್ರೀಕರಣ ಶುರು ಮಾಡಿಕೊಂಡು “Congratulation Brother” ಎಂದು ತನ್ನ ಟೈಟಲ್ ಘೋಷಿಸಿಕೊಂಡು ಕುತೂಹಲ ಕೆರೆಳಿಸಿದ ಚಿತ್ರತಂಡ, ಇದೀಗ ತನ್ನ ಚಿತ್ರೀಕರಣವನ್ನು ಮುಗಿಸಿಕೊಂಡು ತನ್ನ ಪ್ರೊಡಕ್ಷನ್ ಕೆಲಸಗಳತ್ತ ಗಮನ ನೀಡಿದೆ. ಮುಂದಿನ ತಿಂಗಳು ಚಿತ್ರದ ಅದ್ದೂರಿ ಹಾಡನ್ನು ದುಬೈ ನಲ್ಲಿ ಬಿಡುಗಡೆ ಮಾಡಲು ಈ ಚಿತ್ರ ತಂಡ ಕಾಯುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೇ ತುಂಬಿಕೊಂಡಿರುವ ಈ ಚಿತ್ರದಲ್ಲಿ ವಿಭಿನ್ನ ಮತ್ತು ಪ್ರಮುಖ ಪಾತ್ರದಲ್ಲಿ ನಟ ಶಶಿಕುಮಾರ್ Shashikumar ನಟಿಸಿದ್ದಾರಂತೆ. ಶಶಿಕುಮಾರ್ ಅಭಿಮಾನಿಗಳಿಗೆ ಇದೊಂದು ಖುಷಿಯ ಸುದ್ದಿ ಕೂಡ ಹೌದು. ಕಲ್ಲೂರ್ ಸಿನಿಮಾಸ್ Kallur cinemas & ಪೆನ್ ಎನ್ ಪೇಪರ್ ಸ್ಟುಡಿಯೋಸ್ Pen N Paper Studios ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ Prashanth Kallur ಅವರು ನಿರ್ಮಿಸಿರುವ ಈ ಚಿತ್ರವನ್ನು ಪ್ರತಾಪ್ ಗಂಧರ್ವ Prathap Gandharva ನಿರ್ದೇಶಿಸಿದ್ದಾರೆ.

Congratulations ತಂಡದಲ್ಲಿದ್ದಾರೆ ಇವರೆಲ್ಲಾ

ಜನಪ್ರಿಯ ನಿರ್ದೇಶಕ ಹರಿ ಸಂತೋಷ್ ಕಥೆ ಹೆಣೆದಿದ್ದಾರೆ. ನಾಯಕನಾಗಿ ಯುವ ನಟ ರಕ್ಷಿತ್ ನಾಗ್ Rakshith Nag, ನಾಯಕಿಯರಾಗಿ ಸಂಜನಾ ದಾಸ್ Sanjana Das ಮತ್ತು ಅನುಷಾ Anusha ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಹರೀಶ್ ರೆಡ್ಡಿ ಸಹ ನಿರ್ಮಾಪಕರಾಗಿ ಹಾಗೂ ಶ್ರೀಕಾಂತ್ ಕಶ್ಯಪ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಕಾರವಾರ, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ 45 ದಿನಗಳ ಕಾಲ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ ತಂಡ ಪ್ರೊಡಕ್ಷನ್ ಹಂತದ ಕೆಲಸಗಳನ್ನು ಕ್ರಿಯೇಟಿವ್ ಆಗಿ ಮುಗಿಸುವ ತರಾತುರಿಯಲ್ಲಿದೆ. ಇದೊಂದು ಹೊಸ ಪ್ರತಿಭೆಗಳ ಬಹುನಿರೀಕ್ಷಿತ ಚಿತ್ರವಾಗಿದ್ದು ಎಲ್ಲವೂ ಅಂದುಕೊಂಡಂತೆ ಪ್ರೊಡಕ್ಷನ್ ಕೆಲಸಗಳು ಮುಗಿದರೆ ಈ ವರ್ಷದ ಜೂನ್ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ”

ಸಕ್ಕರೆ ನಾಡಿಂದ ಬರ್ತಿದೆ ಅಕ್ಕರೆ ತುಂಬಿದ ಸಿನಿಮಾ ”ಗಜೇಂದ್ರ ಕೇರಾಫ್ ದೊಡ್ಡರಸಿನಕೆರೆ” ಲವ್...

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು!

ಈ ವೀಕೆಂಡ್ ನಲ್ಲಿ ಓಟಿಟಿಯಲ್ಲಿ ಅಬ್ಬರಿಸಲಿದೆ ಈ ಸಿನಿಮಾಗಳು! ಮಾತಾಡಲು ಬರ್ತಿದೆ ಮಾತೊಂದ...

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ”

ಪ್ರೇಕ್ಷಕರೆದುರು ಬೀಸಲು ರೆಡಿಯಾಯ್ತು “ಮಾರುತ” ಅಕ್ಟೋಬರ್ 31 ಕ್ಕೆ ಬಹುನಿರೀಕ್ಷಿತ ಚಿತ್ರ “ಮಾರುತ”...

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ

ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ...