- “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಶೀರ್ಷಿಕೆ ಹಾಡು ಅನಾವರಣ
- ಇತ್ತೀಚೆಗಷ್ಟೆ ಶತಾಯುಷಿ ಸಾಲುಮರದ ತಿಮ್ಮಕ್ಕ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.
- ಮೇ 23 ರಂದು ತೆರೆಯ ಮೇಲೆ ಬರಲಿದೆ ಚಿತ್ರ
ಪರ್ಲ್ ಸಿನಿ ಕ್ರಿಯೇಷನ್ಸ್ Pearl Cini Creations ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ಬಂಡವಾಳ ಹೂಡಿರುವ “ಕುಲದಲ್ಲಿ ಕೀಳ್ಯಾವುದೋ” Kuladalli Keelyavudo ಚಿತ್ರವನ್ನು ಯೋಗರಾಜ್ ಭಟ್ಟರು Yogaraj Bhatt ಪ್ರೆಸೆಂಟ್ ಮಾಡುತ್ತಿದ್ದಾರೆ. ಕೆ.ರಾಮನಾರಾಯಣ್ K. Ramanarayan ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು Madenur Manu ನಾಯಕನಾಗಿ ನಟಿಸಿದ್ದಾರೆ. ಇವರಿಗೆ ಸಾಥ್ ನೀಡಿದ್ದಾರೆ ಮೌನ ಗುಡ್ಡೆಮನೆ Mouna Guddemane.
ಇತ್ತೀಚೆಗಷ್ಟೆ ಸಿನಿಮಾದ ಶೀರ್ಷಿಕೆ ಗೀತೆಯನ್ನು ಶತಾಯುಷಿ ಸಾಲುಮರದ ತಿಮ್ಮಕ್ಕ Salumarada Thimmakka ಬಿಡುಗಡೆ ಮಾಡಿದ್ದು, ಚಿತ್ರ ಬಿಡುಗಡೆಯ ದಿನಾಂಕ ಮೇ 23 ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಎರಡೂ ಹಿಟ್ ಆಗ್ತಿವೆ. ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದಿನ್ ಚಿತ್ರಕ್ಕೆ ಕಥೆ ಬರೆದಿದ್ದು, ಭಟ್ಟರು ನಟನೆ ಕೂಡಾ ಮಾಡಿದ್ದಾರೆ. ವಿಜಯಾನಂದ್ ಸಂಭಾಷಣೆ ಬರೆದಿದ್ದಾರೆ. ಹಾಡುಗಳಿಗೆ ಜಯಂತ ಕಾಯ್ಕಿಣಿ Jayanth Kaikini ಸಾಹಿತ್ಯ, ಮನೋಮೂರ್ತಿ Manomurthi ಸಂಗೀತವಿದೆ. ಉಳಿದಂತೆ ಶರತ್ ಲೋಹಿತಾಶ್ವ, ತಬಲಾ ನಾಣಿ, ಸೋನಾಲ್ ಮೊಂತೆರೋ, ಕರಿಸುಬ್ಬು, ಡ್ರ್ಯಾಗನ್ ಮಂಜು, ಸೀನ, ಯಶಸ್ವಿನಿ ಮುಂತಾದವರ ನಟನೆಯಿದೆ.