- ಸದ್ಯದಲ್ಲೇ ತೆರೆ ಮೇಲೆ ಮನಮುಟ್ಟುವ ಕಥಾನಕ “ತಾಯವ್ವ”
- ಸೂಲಗಿತ್ತಿಯ ಸುತ್ತ ಸುತ್ತುವ ಕಥೆಯನ್ನು ನಿರ್ದೇಶಿಸಿದ್ದಾರೆ ಸಾತ್ವಿಕ್ ಪವನ್ ಕುಮಾರ್
- ಈಗಾಗಲೇ ಚಿತ್ರದ ಕೆಲವು ಹಾಡುಗಳು ಬಿಡುಗಡೆಯಾಗಿದ್ದು, ಜನರ ಮನಗೆಲ್ಲುತ್ತಿವೆ.
ಸೂಲಗಿತ್ತಿಯ ಕುರಿತಾದ ಒಂದು ಅರ್ಥಪೂರ್ಣ, ಮನಮುಟ್ಟುವ ಕಥಾಹಂದರದ ಚಿತ್ರ “ತಾಯವ್ವ” Thayavva ಇದನ್ನು ನಿರ್ಮಾಣ ಮಾಡಿದ್ದಾರೆ ಗೀತಪ್ರಿಯಾ Geetha Priya ಹಾಗೂ ಪದ್ಮಾವತಿ ಚಂದ್ರಶೇಖರ್ Padmavathi Chandrashekhar. ಇದರೊಂದಿಗೆ ಗೀತಪ್ರಿಯಾ ಅವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ನಟನೆಯಲ್ಲಿ ಹಲವು ರಂಗಭೂಮಿ ಕಲಾವಿದರು ಸಾಥ್ ನೀಡಿದ್ದಾರೆ. ಪಿ.ಶೇಷಗಿರಿ P. Sheshagiri ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸಾತ್ವಿಕ್ ಪವನ್ ಕುಮಾರ್ Sathvik Pavan Kumar ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರರಂಗದ ಪ್ರಮುಖರಾದ ಕಿಚ್ಚ ಸುದೀಪ್, ನಟಿ ಉಮಾಶ್ರೀ, ಹಿರಿಯ ನಟ ಪ್ರಣಯರಾಜ ಶ್ರೀನಾಥ್, ಶಾಸಕ ಆರ್. ಅಶೋಕ್, ಡಾಕ್ಟರ್ ಕಾಮಿನಿ ಕೆ. ರಾವ್ ಮುಂತಾದವರು ಚಿತ್ರ ತಂಡಕ್ಕೆ ಸಾಥ್ ನೀಡಿದ್ದಾರೆ. ಚಿತ್ರ ನಿರ್ದೇಶಕರೇ ಛಾಯಾಗ್ರಹಣದ ಹೊಣೆ ಹೊತ್ತಿದ್ದು, ಅನಂತ್ ಆರ್ಯನ್ Ananth Aryan ಸಂಗೀತ ಸಂಯೋಜನೆ ಇದೆ. ಅತಿ ಶೀಘ್ರದಲ್ಲಿ ತಾಯವ್ವ ಕನ್ನಡ ಸಿನಿಮಾ ಪ್ರೇಕ್ಷಕರೆದುರು ಬರಲಿದ್ದಾಳೆ.