ರಿಲೀಸ್ ಆಯ್ತು “ಅಥಣಿ” ಚಿತ್ರದ ಟ್ರೇಲರ್

Date:

  • ರಿಲೀಸ್ ಆಯ್ತು “ಅಥಣಿ” ಚಿತ್ರದ ಟ್ರೇಲರ್
  • ರೈತರ ಬದುಕು ಬಣೆಗಳನ್ನು ಬಿಂಬಿಸು ಚಿತ್ರ
  • “ಧರಣಿ ಮಂಡಲ ಮಧ್ಯದೊಳಗೆ” ಎಂಬ ಅಡಿಬರಹದೊಂದಿಗೆ ಬರ್ತಿದೆ “ಅಥಣಿ”

“ಅಥಣಿ” Athani ಎಂಬ ಊರಿನ ಹೆಸರಿನಲ್ಲಿ ಪ್ರತಿಯೊಂದು ಊರಿನ ರೈತರ ಸಂಕಷ್ಟ, ಬವಣೆಗಳನ್ನು ಎತ್ತಿ ತೋರಿಸುವುದಕ್ಕೋಸ್ಕರ ರೈತರೇ ಆಗಿರುವ ವಾಸುದೇವ ಆರ್ ದೊಡ್ಡಹೆಜ್ಜಾಜಿ Vasudeva R Doddahejjaji ಅವರು ಅಭಯ್ ಖುಷಿ ಮೂವೀಸ್ Abhay Khushi Movies ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡ್ತಿರೋ ಚಿತ್ರವಾಗಿದೆ. ಸಮರ್ಥ್ ಎಂ. Samarth M ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರೊಂದಿಗೆ ಸ್ವತಃ ನಾಯಕ ಸ್ಥಾನವನ್ನಲಂಕರಿಸಿದ್ದಾರೆ. ಇತ್ತೀಚೆಗೆ ಸಂಕಲನಕಾರ, ನಟ, ನಿರ್ದೇಶಕ ನಾಗೇಂದ್ರ ಅರಸ್ Nagendra Uras ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದ್ದು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ರೈತನ ಕಥೆಯೊಂದಿಗೆ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ

“ಧರಣಿ ಮಂಡಲ ಮಧ್ಯದೊಳಗೆ” ಎಂಬ ಅಡಿಬರಹವನ್ನು ಹೊಂದಿರುವ ಚಿತ್ರ ಮುಖ್ಯಾಗಿ ರೈತರ ಬದುಕು, ಬವಣೆಗಳ ಕುರಿತು ಬೆಳಕು ಚೆಲ್ಲುತ್ತದೆ ಅಲ್ಲದೇ ಅದರೊಂದಿಗೆ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಕಥೆ ಇದಾಗಿದೆ. ಮಧು Madhu ಚಿತ್ರದ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಕೇಶ್ ಪೂಜಾರಿ, ಶೋಭ್ ರಾಜ್, ಯತಿರಾಜ್, ಭವ್ಯ, ಹನುಮಂತೇಗೌಡ, ಬಲ ರಾಜವಾಡಿ, ನಾಗೇಂದ್ರ ಅರಸ್, ಗಂಗರಾಜ್, ಮೂರ್ತಿ ವಿಷ್ಣುಪ್ರಿಯ, ರಾಜು ಮುಂತದವರು ತಾರಾಗಣದಲ್ಲಿದ್ದಾರೆ. ಹರ್ಷ ಕಾಗೋಡು ಸಂಗೀತ ನಿರ್ದೇಶನ, ವಿನು ಮನಸು ಹಿನ್ನಲೆ ಸಂಗೀತ, ಸಂದೀಪ್ ಹೊನ್ನಾಳಿ ಛಾಯಾಗ್ರಹಣ, ಸುನಯ್ ಜೈನ್ ಸಂಕಲನ ಈ ಚಿತ್ರಕ್ಕಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ ಚಿತ್ರ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ ಚಿತ್ರಗಳು

ಈ ವಾರ ಓಟಿಟಿಯಲ್ಲಿ ಮನರಂಜನೆಯ ಅಮಲೇರಿಸಲು ಬರ್ತಿದೆ ಎರಡು ಸೂಪರ್ ಕನ್ನಡ...

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ”

ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ಚಿತ್ರ “ಪ್ರೇಮ್ ಲವ್ ನಂದಿನಿ” ಬಸವರಾಜ ನಂದಿ...

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...