- ಜ.31 ಕ್ಕೆ ಪ್ರವಾಸ ಕಥನ “#ಪಾರು ಪಾರ್ವತಿ” ತೆರೆಗೆ
- ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ಚಿತ್ರ
- ಅಭಿನಯ ಚಕ್ರವರ್ತಿ ಸುದೀಪ್ ಅವರಿಂದ ಟ್ರೈಲರ್ ಬಿಡುಗಡೆ
ಟೀಸರ್, ಹಾಡುಗಳ ಮೂಲಕ ಈಗಾಗಲೇ ಸದ್ದು ಮಾಡುತ್ತಿರುವ, ಫ್ಯಾನ್ ಗಳನ್ನು ಫಿದಾ ಮಾಡ್ತಿರೋ ಚಿತ್ರ “#ಪಾರು ಪಾರ್ವತಿ” #paru Parvathi Movie ಬಿಡುಗಡೆಗೆ ಸಿದ್ಧಗೊಂಡಿದ್ದು, ಇದೇ ವಾರದಲ್ಲಿ ತೆರೆಯ ಮೇಲೆ ತನ್ನ ಪಯಣ ಪ್ರಾರಂಭಿಸಲಿದೆ. ಇತ್ತೀಚೆಗೆ ಅಭಿನಯ ಚಕ್ರವರ್ತಿ ಸುದೀಪ್ Kiccha Sudeep ರವರು ಟ್ರೈಲರ್ ಅನಾವರಣಗೊಳಿಸಿದ್ದು ಈಗಾಗಲೇ ಜನಮೆಚ್ಚುಗೆ ಪಡೆಯುತ್ತಿದೆ.

ಮುಖ್ಯ ಪಾತ್ರವಹಿಸಲಿದೆ “ಕಾರ್”
ಇದೊಂದು ಪ್ರವಾಸ ಕಥನವಾಗಿದ್ದು, ಅಡ್ವೆಂಚರ್, ಕಾಮಿಡಿ ಜಾನರ್ ನ ಚಿತ್ರವಾಗಿದೆ. ಉದ್ದೇಶ, ಗುರಿಗಳಿಲ್ಲದೇ ಪ್ರವಾಸಕ್ಕೆ ಹೊರಡುವ, ಹೊಸ ಹೊಸ ಅನುಭವಗಳನ್ನು, ವ್ಯಕ್ತಿಗಳನ್ನು ಗಳಿಸಿಕೊಳ್ಳುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಒಂದು “ಕಾರ್” ಕೂಡಾ ಪ್ರಮುಖ ಪಾತ್ರವಹಿಸಿದೆ.
EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ Rohith Keerthi ನಿರ್ದೇಶನದ ಈ ಚಿತ್ರದಲ್ಲಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ Deepika Das, ಪೂನಂ ಸರ್ ನಾಯಕ್, ಫವಾಜ್ ಅಶ್ರಫ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಕಾಂಡ್ ನಲ್ಲಿ ಚಿತ್ರೀಕರಣ ನಡೆದಿದೆ. ಅಬಿನ್ ರಾಜೇಶ್ ಛಾಯಾಗ್ರಹಣ, ಆರ್ ಹರಿ ಸಂಗೀತ ನಿರ್ದೇಶನ ಹಾಗೂ ಸಿ.ಕೆ.ಕುಮಾರ ಅವರ ಸಂಕಲನ “#ಪಾರು ಪಾರ್ವತಿ” ಚಿತ್ರಕ್ಕಿದೆ.