- ಅರ್ಥಪೂರ್ಣವಾಗಿ, ಕಣ್ತೆರೆಸುವಂತಿದೆ “ಸೀಸ್ ಕಡ್ಡಿ” ಚಿತ್ರದ ವೀಡಿಯೋ ಸಾಂಗ್
- ಬಿಡುಗಡೆಗೆ ಸಿದ್ಧವಾಗಿದೆ ರತನ್ ಗಂಗಾಧರ್ ನಿರ್ದೇಶನದ ಈ ಚಿತ್ರ
- ಚಿಂತನೆಗೆ ಹಚ್ಚುತ್ತದೆ “ಭೇದವು ಎಲ್ಲಿದೆ” ವೀಡಿಯೋ ಸಾಂಗ್
ಸೀಸದ ಕಡ್ಡಿ, ಪೆನ್ಸಿಲ್ ಅನ್ನು ರೂಪಕವಾಗಿಟ್ಟುಕೊಂಡು ತಯಾರಾಗಿರೋ “ಸೀಸ್ ಕಡ್ಡಿ” Sees Kaddi ಸಿನಿಮಾ ಮಕ್ಕಳನ್ನೇ ಹೆಚ್ಚು ದೃಷ್ಟಿಯಲ್ಲಿಟ್ಟುಕೊಂಡು ರತನ್ ಗಂಗಾಧರ್ Rathan Gangadhar ಅವರ ನಿರ್ದೇಶನದ ಕೈಚಳಕದಲ್ಲಿ ಮೂಡಿಬಂದಿರುವ ಚಿತ್ರವಾಗಿದೆ. ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಸದ್ದು ಮಾಡಿರುವ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ಸಂಪತ್ ಶಿವಶಂಕರ್ Sampath Shivashankar, ಕೃತಿ ನಾಣಯ್ಯ Krithi Nanaiah.
ಗಮನ ಸೆಳೀತಿದೆ ವಿಭಿನ್ನ ಹಾಡು
ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ “ಭೇದವು ಎಲ್ಲಿದೆ ಬೀಳುವ ಮಳೆಗೆ” ಹಾಡು ಎಲ್ಲರನ್ನೂ ಚಿಂತನೆಗೆ ಒಳಪಡುವಂತೆ ಮಾಡುತ್ತಿದೆ. ಈ ಹಾಡಿಗೆ ಮಹೇಂದ್ರ ಗೌಡ ಸಾಹಿತ್ಯ ಇದ್ದು, ಕೆ.ಸಿ.ಬಾಲಸಾರಂಗನ್ K.C Balasarangan ಸಂಗೀತ ಹಾಗೂ ಧ್ವನಿ ಇದ್ದು, ಅವರೊಂದಿಗೆ ಧ್ವನಿಗೂಡಿಸಿದ್ದಾರೆ ಶುಭದಾ ಆರ್ ಪ್ರಕಾಶ್. ಸಾಹಿತ್ಯ ಪ್ರೌಢತೆಯಿಂದ ಕೂಡಿದ್ದು, ಕಾಡುವಂತಿದೆ. ಜೀವನಕ್ಕೆ ನಾವು ಅಳವಡಿಸಿಕೊಳ್ಳಬಹುದಾದಂತಹಾ ಪಾಠಗಳನ್ನು ಈ ಹಾಡಿನ ಒಂದೊಂದೂ ಸಾಲುಗಳೂ ಮಾರ್ದನಿಸುತ್ತಿವೆ.
ಬಹುಪ್ರತಿಭೆಗಳ ಸಂಗಮ
ಆಕರ್ಷ ಕಮಲ, ಅಕ್ಷರ ಭಾರದ್ವಾಜ್, ಶರತ್ ಕೆ ಪರ್ವತವಾಣಿ, ಜಯಂತ್ ವೆಂಕಟ್ ಹಾಗೂ ಮಹೇಂದ್ರ ಗೌಡ ಇವರುಗಳು ಚಿತ್ರದ ಒಂದೊಂದು ಭಾಗದ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ವಹಿಸಿದ್ದು, ಬಹು ಪ್ರತಿಭೆಗಳು ಈ ಸಿನಿಮಾ ಮೂಲಕ ಹೊರಹೊಮ್ಮಿದೆ. ಇದೇ ಮೇ ಕೊನೆಯಲ್ಲಿ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಮಕ್ಕಳು ಜೊತೆಯಲ್ಲಿ ಪೋಷಕರು ನೋಡಲೇಬೇಕಾದ ಚಿತ್ರವಾಗಿರಲಿದೆ.