- ಸಸ್ಪೆನ್ಸ್ ಲೋಕಕ್ಕೆ ಕರೆದೊಯ್ಯಲು ಬರ್ತಿದೆ “ಶೋಧ” ವೆಬ್ ಸರಣಿ
- ಜೀ 5 ವೆಬ್ ಸರಣಿಗಳಿಗೆ ವೇದಿಕೆ ಆಗುತ್ತಿದ್ದು “ಶೋಧ” ಟ್ರೈಲರ್ ರಿಲೀಸ್ ಮಾಡಿದೆ.
- ಕೆ.ಆರ್.ಜಿ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ಸುನಿಲ್ ಮೈಸೂರು ನಿರ್ದೇಶಿಸಿದ್ದಾರೆ.
ಕನ್ನಡದಲ್ಲಿ ಇತ್ತೀಚೆಗೆ ವೆಬ್ ಸೀರಿಸ್ ಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಕೆಲವು ಸಮಯದ ಹಿಂದೆ ಬಿಡುಗಡೆಯಾಗಿದ್ದ “ಅಯ್ಯನ ಮನೆ” Ayyana Mane ಹೆಸರಿನ ಮಿನಿ ವೆಬ್ ಸರಣಿ ಕನ್ನಡದ ಪ್ರೇಕ್ಷಕರಿಗೆ ಸಖತ್ ಖುಷಿ ಕೊಟ್ಟಿತ್ತು. ಈ ಸೀರಿಸ್ ಗೆ ಎಲ್ಲೆಡೆ ಅಪಾರ ಮೆಚ್ಚುಗೆ ದೊರೆತಿತ್ತು. ಇದೀಗ ಜೀ 5 Zee 5 ಈ ರೀತಿಯ ವೆಬ್ ಸರಣಿಗಳಿಗೆ ವೇದಿಕೆ ಆಗುತ್ತಿದ್ದು “ಶೋಧ” Shodha ಎನ್ನುವ ಹೆಸರಿನ ಹೊಸತೊಂದು ವೆಬ್ ಸರಣಿಯ ಟ್ರೈಲರ್ ರಿಲೀಸ್ ಮಾಡಿದೆ. ಈ ಟ್ರೈಲರ್ ಸಸ್ಪೆನ್ಸ್ ಅಂಶಗಳ ಮೂಲಕ ಎಲ್ಲೆಡೆ ಗಮನ ಸೆಳೆಯುತ್ತಿದೆ.
ಕಾರ್ಯಾಚರಣೆಯ ಜೊತೆಗೆ ನಿಗೂಢತೆ
ಕೆ.ಆರ್.ಜಿ ಸ್ಟುಡಿಯೋಸ್ KRG Studios “ಶೋಧ”ಕ್ಕೆ ಬಂಡವಾಳ ಹೂಡಿದ್ದು, ಸುನಿಲ್ ಮೈಸೂರು Sunil Mysore ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ನಟನೆಯಲ್ಲೂ ಮಿಂಚಿದ್ದ ಪವನ್ ಕುಮಾರ್ Pavan Kumar “ಶೋಧ” ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಸಿರಿ ರವಿಕುಮಾರ್, ಸಪ್ತಮಿ ಗೌಡ Sapthami Gowda ಮೊದಲಾದವರು ಈ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಅರುಣ್ ಸಾಗರ್ Arun Sagar ಈ ಸರಣಿಯಲ್ಲಿ ಪೊಲೀಸ್ ಪಾತ್ರ ಮಾಡಿರುವುದು ವಿಶೇಷ. “ಶೋಧ” ವೆಬ್ ಸರಣಿಯು ಹೆಸರೇ ಹೇಳುವಂತೆ ಶೋಧ, ಅಂದ್ರೆ ಕಾರ್ಯಾಚರಣೆಯ ಜೊತೆಗೆ ನಿಗೂಢತೆಯ ಕಥಾಹಂದರವನ್ನು ಒಳಗೊಂಡಿದೆ. ಆಗಸ್ಟ್ 22 ರಿಂದ ಜೀ5 ಒಟಿಟಿಯಲ್ಲಿ “ಶೋಧ’ ವೆಬ್ ಸರಣಿ ವೀಕ್ಷಣೆಗೆ ಸಿಗಲಿದೆ. ಸದ್ಯ ಶೋಧದ ಟ್ರೈಲರ್ ಕನ್ನಡದ ವೆಬ್ ಸಿರೀಸ್ ಗಳ ಬಗ್ಗೆ ಹೊಸತೊಂದು ಭರವಸೆಯನ್ನು ಹುಟ್ಟುಹಾಕಿದೆ.