- ಓಟಿಟಿಯಲ್ಲಿ ಸಿನಿರಸಿಕರಿಗೆ ಹಬ್ಬ: ಈ ವಾರ ಓಟಿಟಿಗೆ ಬಂತು ಈ ನಾಲ್ಕು ಚಿತ್ರಗಳು
- ಮನೆಯಲ್ಲಿಯೇ ಕೂತು ಸಿನಿಮಾ ನೋಡ್ಬೇಕು ಎನ್ನುವವರಿಗೆ ಈಗ ಓಟಿಟಿಯಲ್ಲಿ ಹಬ್ಬ
- ಇತ್ತೀಚೆಗೆ ರಿಲೀಸ್ ಆಗಿ ಹಿಟ್ ಆದ ಚಿತ್ರಗಳು ನಿಮ್ಮ ಮೊಬೈಲ್ ನಲ್ಲಿ ವೀಕ್ಷಿಸಬಹುದು
ಈ ವಾರ ಓಟಿಟಿಗಳಲ್ಲಿ OTT ಕನ್ನಡದ ನಾಲ್ಕು ಅತ್ಯುತ್ತಮ ಚಿತ್ರಗಳು ರಿಲೀಸ್ ಆಗಿವೆ. ಒಂದೆಡೆ ಚಿತ್ರಮಂದಿರಗಳಲ್ಲೂ ಒಳ್ಳೊಳ್ಳೆ ಸಿನಿಮಾಗಳು ಓಡುತ್ತಿವೆ. ಆದ್ರೆ ಮನೆಯಲ್ಲಿಯೇ ಕೂತು ಸಿನಿಮಾ ನೋಡ್ಬೇಕು ಎನ್ನುವವರಿಗೆ ಈಗ ಓಟಿಟಿಯಲ್ಲಿ ಹಬ್ಬ. ಬನ್ನಿ ಹಾಗಾದ್ರೆ ಯಾವೆಲ್ಲಾ ಮೂವಿಗಳು ರಿಲೀಸ್ ಆಗ್ತಿದೆ ನೋಡೋಣ
X&Y
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ Sathyaprakash ನಿರ್ದೇಶಿಸಿ ನಟಿಸಿರುವ “X&Y” ಸಿನಿಮಾ, ವಿಭಿನ್ನ ಎಳೆಯ ಕತೆಯನ್ನೊಳಗೊಂಡಿದೆ. ಈ ಸಿನಿಮಾ ಈಗ ಸನ್ ನೆಕ್ಸ್ಟ್ Sun next ಓಟಿಟಿ ಪ್ಲಾಟ್ ಫಾರ್ಮ್ ಗೆ ಬಂದಿದ್ದು ಈ ಸಿನಿಮಾದಲ್ಲಿ ಬೃಂದಾ ಆಚಾರ್ಯ, ಅಯಾನಾ, ಸುಂದರ್
ವೀಣಾ ಮೊದಲಾದವರು ನಟಿಸಿದ್ದಾರೆ.
ಕೆಂಡ Kenda
ಇದು ಗೋಪಾಲ ದೇಶಪಾಂಡೆ Gopala Deshapande ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೊಸ ರೀತಿಯ ಸಿನಿಮಾ ಕೆಂಡ ಸಹದೇವ್ ಕೆಲವಡಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಸದ್ಯ ಪ್ರೈಂ ಚಂದಾದಾರರು ಈ ಸಿನಿಮಾ ನೋಡಬಹುದು.
ದಿ ಜಡ್ಜ್ ಮೆಂಟ್ The Judgement
ಒಂದು ಅತ್ಯಾಚಾರ ಕೊಲೆ ಪ್ರಕರಣದ ಸುತ್ತ ನಡೆಯುವ ಚಿತ್ರ “ದಿ ಜಡ್ಜ್ ಮೆಂಟ್ “. ಕೋರ್ಟ್ ಈ ಸಿನಿಮಾದ ಹೈಲೈಟ್. ರವಿಚಂದ್ರನ್ Ravichandran, ದಿಗಂತ್ Diganth ಹಾಗೂ ಧನ್ಯಾ ರಾಂ ಕುಮಾರ್ “ದಿ ಜಡ್ಜ್ ಮೆಂಟ್” ಚಿತ್ರದಲ್ಲಿ ನಟಿಸಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಪ್ರಮುಖ
ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯ ಪ್ರೈಂ ಚಂದಾದಾರರು ಈ ಸಿನಿಮಾ ನೋಡಬಹುದು.
ಎಡಗೈಯೇ ಅಪಘಾತಕ್ಕೆ ಕಾರಣ Edagaiye Apaghathakke Karana
ದಿಗಂತ್ ನಟನೆಯ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ಎಡಗೈಯೇ ಅಪಘಾತಕ್ಕೆ ಕಾರಣ” ಸಮರ್ಥ್ ಕೊಡ್ಕಲ್ Samarth Kodkal ಈ ಸಿನಿಮಾ ನಿರ್ದೇಶಕರು. ನಿಧಿ ಸುಬ್ಬಯ್ಯ Nidhi Subbayya, ರಾಧಿಕಾ ನಾರಾಯಣ್ ಈ
ಚಿತ್ರದಲ್ಲಿ ನಟಿಸಿದ್ದಾರೆ. ದಿಗಂತ್ ನಟನೆ ಚಿತ್ರದಲ್ಲಿ ಗಮನಸೆಳೆಯುವಂತಿದ್ದು ವಾಸ್ತವಕ್ಕೆ ಹತ್ತಿರವಾಗಿದೆ. ಸಸ್ಪೆನ್ಸ್ ಕಥಾನಕ ಕುತೂಹಲ ಹುಟ್ಟಿಸುವಂತಿದೆ. ಅಮಜಾನ್ ಪ್ರೈಂನಲ್ಲಿ ಈ ಚಿತ್ರ ವೀಕ್ಷಿಸಬಹುದಾಗಿದೆ