- ವರ್ಷಾಂತ್ಯಕ್ಕೆ ಸಿನಿಪ್ರಿಯರಿಗೆ ಹಬ್ಬ; ಒಟಿಟಿಗೆ ಬಂದಿವೆ ಈ ಸಿನಿಮಾಗಳು
- ಈ ಡಿಸೆಂಬರ್ ತಿಂಗಳಲ್ಲಿ ಹಲವು ಹಿಟ್ ಸಿನಿಮಾಗಳು
- ಒಟಿಟಿಗೆ ಬಂದಿವೆ ಜನಮೆಚ್ಚಿದ ಮೂವೀಸ್
ಸಿನಿಪ್ರಿಯರು ಸದಾ ಒಳ್ಳೆಯ ಮೂವಿಗಳಿಗೆ ಕಾದು ಚಿತ್ರಮಂದಿರಗಳಲ್ಲಿ ಹೋಗಿ ನೋಡುವುದಲ್ಲದೇ ಒಟಿಟಿಗಳ ಈ ಕಾಲದಲ್ಲಿ ಸಮಯ ಹೊಂದಿಸಿಕೊಂಡು ಮನೆಯಲ್ಲೇ ಮೂವೀ ನೋಡೋದನ್ನೂಇಷ್ಟಪಡ್ತಾರೆ. ಈ ಡಿಸೆಂಬರ್ ತಿಂಗಳಲ್ಲಿ ಸ್ಟಾರ್ ಆಕ್ಟರ್ ಗಳ ಹಿಟ್ ಮೂವೀಗಳು ತೆರೆಗೆ ಬಂದಿದ್ದಲ್ಲದೇ ಒಂದಷ್ಟು ಫೇಮಸ್ ಮೂವೀಗಳೂ ಈ ವಾರ ಒಟಿಟಿಗೆ ಬಂದು ಸಿನಿಪ್ರಿಯರಿಗೆ ಸಿನಿಮಾ ನೋಡುವ ಹಸಿವನ್ನು ಹೆಚ್ಚಿಸಿದೆ. ಹಾಗೇ ವೆಬ್ ಸೀರೀಸ್ ಗಳೂ ಈ ಸಾಲಿಗೆ ಸೇರಿವೆ.

ಭೂಲ್ ಭುಲಯ್ಯ 3 – Bhool bhulaiyaa 3
ಡಿಸೆಂಬರ್ 27ರಂದು ನೆಟ್ ಫ್ಲಿಕ್ಸ್ ಗೆ ಈ ಸಿನಿಮಾ ಬಿಡುಗಡೆಯಾಗಿದೆ. ‘ಸಿಂಘಂ ಅಗೇನ್’ ಚಿತ್ರದೊಂದಿಗೇ ಬಿಡುಗಡೆ ಆಗಿದ್ದ ಈ ಮೂವೀ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಈಗ ಮತ್ತೆ ಸಿಂಘಂ ಅಗೇನ್ ಒಟಿಟಿಗೆ ಬಂದ ದಿನವೇ ಇದೂ ಕೂಡಾ ಬಂದಿದೆ.
ಸಿಂಘಂ ಅಗೇನ್ – Singham again
ರಾಮಾಯಣ ಕತೆಯ ಹೋಲಿಕೆ ಹೊಂದಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಮುಂತಾದ ಬಾಲಿವುಡ್ ಸ್ಟಾರ್ಗಳು ನಟಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನ ಮಾಡಿರುವ ‘ಸಿಂಘಂ ಅಗೇನ್’ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.
ಭೈರತಿ ರಣಗಲ್ – Bhairathi Ranagal
ಶಿವರಾಜ ಕುಮಾರ್ ಅವರ ಹಿಟ್ ಮೂವೀ, ನವೆಂಬರ್ 15ರಂದು ಚಿತ್ರಮಂದಿರದಲ್ಲಿ ತೆರೆಕಂಡಿದ್ದ ಭೈರತಿ ರಣಗಲ್, ಒಟಿಟಿಗೆ ಎಂಟ್ರಿ ನೀಡಿದೆ. ಅಮೇಜಾನ್ ಪ್ರೈಂ ವಿಡಿಯೋ ಡಿಸೆಂಬರ್ 25 ರಿಂದ ಪ್ರಸಾರ ಆರಂಭಿಸಿದೆ.
ಸ್ಕಿಡ್ ಗೇಮ್ಸ್ 2 – Skid games 2
2021 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ಕೊರಿಯನ್ ವೆಬ್ ಸೀರೀಸ್ ‘ಸ್ಕ್ವಿಡ್ ಗೇಮ್’ ಸೆಕಂಡ್ ಸೀಸನ್ ಈಗ ಬಿಡುಗಡೆ ಆಗಿದೆ. ಮೊದಲ ಸೀಸನ್ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಲೋ ಜುಂಗ್ ಜೇ ಈ ಸೀಸನ್ನಲ್ಲೂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಮುರಾ – Mura
ಹಲವು ಭೀಕರ, ಥ್ರಿಲ್ಲರ್ ಸನ್ನಿವೇಶಗಳ ಮೂಲಕ ಸೂಪರ್ ಹಿಟ್ ಆಗಿದ್ದ ಮಲಯಾಳಂ ಸಿನಿಮಾ ‘ಮುರಾ’ ಇದೇ ವಾರ ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ.
ಸೊರ್ಗವಾಸಲ್ – Sorgavaasal
ಜೈಲುವಾಸಿಗಳು ಹಾಗೂ ಪೋಲಿಸರ ನಡುವೆ ನಡೆಯುವ ಕತೆಯೇ ಸೊರ್ಗವಾಸಲ್. ಇದು ಡಿಸೆಂಬರ್ 27 ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಸೆಲ್ವರಾಘವನ್ ಮತ್ತು ಬಾಲಾಜಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.