- ಚಂದನವನಕ್ಕೆ ಕಾಲಿಟ್ಟಿರುವ ಸುದೀಪ್ ಅಳಿಯ “ಸಂಚಿತ್” ಗೆ ಥ್ರಿಲ್ಲಿಂಗ್ ಕತೆ
- ಸಂಚಿತ್ ಚೊಚ್ಚಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ವಿವೇಕ್
- ನಾಯಕಿ ನಟಿಯಾಗಿ ಕರಾವಳಿ ಮೂಲಕ ಕಾಜಲ್ ಕುಂದರ್
- ಸದ್ಯದಲ್ಲೇ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಸಾಧ್ಯತೆ
ಒಂದೊಳ್ಳೆ ಡಿಫರೆಂಟ್ ಕಾನ್ಸೆಪ್ಟ್ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ, ಕಿಚ್ಚ ಸುದೀಪ್ Kiccha Sudeep ಅಕ್ಕನ ಮಗ ಸಂಚಿತ್ Sanchit. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸಿನಿಮಾಗೆ ಅದ್ದೂರಿ ಚಾಲನೆ ಸಿಕ್ಕಿದೆ. ಸಿನಿಮಾಗೆ ವಿಶ್ ಮಾಡಲು ಕಿಚ್ಚ ಸುದೀಪ್ ಕೂಡ ಹಾಜರಿದ್ದು ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾತಂಡಕ್ಕೆ ಶುಭಕೋರಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಯಾಮರಾ ಆನ್ ಮಾಡುವ ಮೂಲಕ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದರು.

ಸದ್ಯದಲ್ಲೇ ಟೈಟಲ್ ಘೋಷಣೆ
ಸಿನಿಮಾದ ನಿರ್ದೇಶನ ಮಾಡುತ್ತಿರುವ ವಿವೇಕ್ ಅವರಿಗೂ ಇದು ಮೊದಲ ಸಿನಿಮಾ. ಹಾಗಾಗಿ ಇಬ್ಬರು ಹೊಸಬರ ಜೋಡಿ ತೆರೆಯ ಮೇಲೆ ಮೋಡಿ ಮಾಡಬೇಕಿದೆ. ಈ ಸಿನಿಮಾವನ್ನು ಕೆಆರ್ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಇದು ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್. ಸ್ಟೋರಿಯಾಗಿದೆ. 2001 ರಿಂದ 2011ರ ವರೆಗೂ ನಡೆಯುವ ಕಥೆಯಾಗಿದೆ. ಈ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಸಂಚಿತ್ ಅವರ ಹುಟ್ಟುಹಬ್ಬ ದಿನ ಅಂದರೆ ಫೆಬ್ರವರಿ 5ಕ್ಕೆ ರಿವೀಲ್ ಮಾಡುವ ಸಾಧ್ಯತೆ ಇದೆ.
ಕರಾವಳಿ ಬೆಡಗಿ ಕಾಜಲ್ ಕುಂದರ್
ಪೆಪೆ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್, ಸಂಚಿತ್ ಜೊತೆ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಉಳಿದಂತೆ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಾಹಣ, ವಿಶ್ವಾಸ್ ಆರ್ಟ್ ವರ್ಕ್ ಇದೆ.