- ಟೈಮ್ ಟ್ರಾವೆಲಿಂಗ್ ಥ್ರಿಲ್ಲರ್ ಸ್ಟೋರಿ “ಗಣ” ಜ.31 ಕ್ಕೆ ತೆರೆಗೆ
- ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಚಿತ್ರ
- ನಿರ್ದೇಶಕ ಹರಿಪ್ರಸಾದ್ ಜಕ್ಕ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ
ಲ್ಯಾಂಡ್ ಲೈನ್ ಫೋನಿನ ಮೂಲಕ ಎರಡೆರಡು ಕಾಲಘಟ್ಟದಲ್ಲಿ ನಡೆಯುವ ಕತೆಯನ್ನು ತೆರೆದಿಡುವ ಗಣ ಚಿತ್ರ Gana Movie ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತು ನೋಡುವಂತೆ ಮಾಡುವಷ್ಟು ಥ್ರಿಲ್ಲಿಂಗ್ ಆಗಿರಲಿದೆ. 1993ರ ಕಾಲಘಟ್ಟದ ಕಥೆಯನ್ನು ಹೇಳುತ್ತಾ ಕೂಡಲೇ ಪ್ರಸ್ತುತ ಕಾಲಕ್ಕೆ ಹೊರಳುತ್ತದೆ. ಎರಡೂ ಕಾಲಘಟ್ಟದ ಕತೆಯನ್ನು ಸಮದೂಗಿಸಿಕೊಂಡು ಹೋಗುವ ಪ್ರಜ್ವಲ್ ದೇವರಾಜ್ Prajwal Devaraj ನಾಯಕತ್ವದ ಈ ಚಿತ್ರ ಈ ತಿಂಗಳ ಕೊನೆಯ ದಿನ ಚಿತ್ರಮಂದಿರಗಳಲ್ಲಿ ಲಗ್ಗೆ ಇಡಲಿದೆ.

ಟಾಲಿವುಡ್ ನಿಂದ ಸ್ಯಾಂಡಲ್ ವುಡ್ ಗೆ ಚೆರ್ರಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹೈದರಾಬಾದ್ ಮೂಲದ ಪಾರ್ಥು ಎಂಬುವವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಅಷ್ಟೇ ಅಲ್ಲದೇ, ನಿರ್ದೇಶಕರೂ ಕೂಡ ತೆಲುಗು ಮೂಲದವರೇ ಆಗಿದ್ದು ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಇತ್ತೀಚೆಗಷ್ಟೇ ಟಾಲಿವುಡ್ನಲ್ಲಿ ಹಿಟ್ ಆದ ಪುಷ್ಪ 2 ಸಿನಿಮಾ ನಿರ್ದೇಶಕ ಸುಕುಮಾರ್ ಅವರ ಜತೆಗೆ ಕೆಲಸ ಮಾಡಿದ ಅನುಭವ ಇರುವ ಹರಿಪ್ರಸಾದ್ ಜಕ್ಕ ಚಿತ್ರದ ನಿರ್ದೇಶನ ಮಾಡಿದ್ದಾರೆ.
ಟೈಮ್ ಟ್ರಾವೆಲಿಂಗ್ ನ ಸ್ಪೆಷಲ್ ಸಿನಿಮಾ
ಇದೊಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಆಗಿದೆ. ಟೈಮ್ ಟ್ರಾವೆಲಿಂಗ್ ಥ್ರಿಲ್ಲರ್ ಜಾನರ್ ಜೊತೆಗೆ ಅಮ್ಮ ಮಗನ ಬಾಂಧವ್ಯದ ಭಾವನಾತ್ಮಕ ಎಳೆಯೂ ಚಿತ್ರದಲ್ಲಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ , ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪಾತ್ರವರ್ಗದಲ್ಲಿ ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು ನಟಿಸಿದ್ದಾರೆ.