- ತನ್ನ ಸ್ಪೆಷಲ್ ಸ್ಮೈಲ್ ನಿಂದಲೇ ಅಭಿಮಾನಿಗಳ ಮನ ಗೆದ್ದಿರುವ “ಟಾಸ್ಕ್ ಮಾಸ್ಟರ್” ಯಾರು ಗೊತ್ತೇ?
- ಫಿಟ್ನೆಸ್ ಕಿಂಗ್, ಬಿಗ್ ಬಾಸ್ ಸೀಸನ್ 11 ರ ರನ್ನರ್ ಅಪ್ ತ್ರಿವಿಕ್ರಮ್
- ನಟನೆಯ ಕ್ಷೇತ್ರದಲ್ಲಿ ಧಾಪುಗಾಲಿಡುತ್ತಾ ಬೆಳೆಯುತ್ತಿದ್ದಾರೆ ತುಮಕೂರು ಹುಡುಗ
“ಪದ್ಮಾವತಿ” ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ, ತುಮಕೂರಿನ ಹುಡುಗ “ತ್ರಿವಿಕ್ರಮ್”, ಬ್ಯಾಡ್ ಮ್ಯಾನರ್ಸ್, ರಂಗನಾಯಕಿ ಹಾಗೂ ನವರಾತ್ರಿ ಮುಂತಾದ ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಬೆಳ್ಳಿತೆರೆಯನ್ನು ಪ್ರವೇಶಿಸಿದರು. ಆದರೆ 2024 ರಲ್ಲಿ ನಡೆದ ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ರಿಯಾಲಿಟಿ ಶೋ “ಬಿಗ್ ಬಾಸ್” ಸೀಸನ್ 11 ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದೇ ಅವರ ಚಾರ್ಮ್ ಬೇರೆಯೇ ಮಟ್ಟಕ್ಕೆ ಬೆಳೆಯಿತು. ಬಿಗ್ ಬಾಸ್ ಸೀಸನ್ 11 ರ ವಿನ್ನರ್ ಇವರೇ ಆಗ್ತಾರೆ ಅಂತ ಹೆಚ್ಚಿನವರ ನಿರೀಕ್ಷೆ ಪ್ರಾರಂಭದಲ್ಲೇ ಇದ್ರೂ ರನ್ನರ್ ಅಪ್ ಆಗಿ ಹೊರಹೊಮ್ಮಿದ್ರು ತ್ರಿವಿಕ್ರಮ್. ಅದೊಂದೇ ಅಲ್ಲ, ದೊಡ್ಡ ಫ್ಯಾನ್ಸ್ ಬೇಸ್ ಕ್ರಿಯೇಟ್ ಮಾಡೋದ್ರೊಂದಿಗೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ರು ತ್ರಿವಿಕ್ರಮ್.
ಮುದ್ದುಸೊಸೆಯ ಮುದ್ದಿನ ನಾಯಕ
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೇ ಕಲರ್ಸ್ ಕನ್ನಡದಲ್ಲಿ ಪ್ರಾರಂಭ ಆದ ಮುದ್ದುಸೊಸೆ ಧಾರಾವಾಹಿಯಲ್ಲಿ ನಟನೆ ಆರಂಭಿಸಿದ ತ್ರಿವಿಕ್ರಮ್ ತಮ್ಮ ನಟನೆ, ಫಿಟ್ನೆಸ್ ಹಾಗೂ ನಗುವಿನಿಂದಲೇ ಅಭಿಮಾನಿಗಳ ಮನಗೆಲ್ತಾ ಇದ್ದಾರೆ. ನಟನೆಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುವ ಇವರು, ತಮ್ಮ ಪರಿಶ್ರಮ, ಬದ್ಧತೆಯಿಂದಲೇ ಸಾಧನೆ ಮಾಡ್ತಿದ್ದಾರೆ. ಹಾಗೇ ಅವರ ಫಿಟ್ನೆಸ್ ಮತ್ತು ಆರೋಗ್ಯಕರ ಜೀವನಶೈಲಿಯೇ ಅವರ ಜೀವನೋತ್ಸಾಹದ ಗುಟ್ಟಂತೆ.
ಜೀವನದ ಬಗ್ಗೆ ಹೀಗೆ ಹೇಳ್ತಾರೆ ತ್ರಿವಿಕ್ರಮ್
ಸಣ್ಣ ಕುಟುಂಬದ ಹಿನ್ನೆಲೆಯಿಂದ ಬಂದ ತ್ರಿವಿಕ್ರಮ್ ತನ್ನ ತಂದೆ-ತಾಯಿಯರಿಂದಲೇ ಸಾಕಷ್ಟು ಪಾಠ ಕಲಿತಿದ್ದಾರಂತೆ. ಅವರ ತಾಳ್ಮೆ, ಪ್ಲಾನಿಂಗ್, ಇತರರಿಗೆ ಗೌರವ ಕೊಡುವ ಗುಣ, ಇತರರನ್ನು ಅರ್ಥ ಮಾಡ್ಕೊಳ್ಳೋ ಶಕ್ತಿ ಇದೆಲ್ಲಾ ಬಂದಿದ್ದೇ ತಂದೆ ತಾಯಿಯರಿಂದ. ಓದಿನಲ್ಲಿ ಯಾವಾಗ್ಲೂ ಮುಂದಿದ್ರಂತೆ. ಯಾವುದೇ ವೇದಿಕೆಯಲ್ಲಿ ಕೊನೆಯ ತನಕ ನಿಲ್ಲುವ ಭರವಸೆ ನಿಮಗಿದ್ರೆ ಮಾತ್ರ ನೀವು ಆ ವೇದಿಕೆಯನ್ನು ಪ್ರವೇಶಿಸಬೇಕು ಅಂತ ಕಿವಿಮಾತು ಹೇಳೋ ಇವ್ರು ತಮ್ಮ ಜೀವನದಲ್ಲಿ ಇದ್ನೇ ಅಳವಡಿಸಿಕೊಂಡಿದ್ದಾರಂತೆ. ನಿಮ್ಮ ಅವಕಾಶಗಳನ್ನು ನೀವೇ ಹುಡುಕಿಕೊಳ್ಬೇಕು ಅಥವಾ ಬಂದ ಅವಕಾಶಗಳನ್ನು ನಿಮ್ಗೆ ಬೇಕಾದ ಹಾಗೆ ಬದಲಾಯಿಸಿಕೊಳ್ಳೋ ಶಕ್ತಿ ನಿಮ್ಮಲ್ಲಿರ್ಬೇಕು ಅವಾಗ ಯಶಸ್ಸು ಸಾಧ್ಯ ಅಂತಾರೆ ಇವ್ರು.