- ಕನ್ನಡದಲ್ಲಿ ಬಿಡುಗಡೆಯಾಗಲಿದೆ ತುಳು ಭಾಷೆಯ ಹಿಟ್ ಮೂವಿ “ದಸ್ಕತ್”
- ಕರಾವಳಿಯ ಪ್ರತಿಭೆಗಳ ಅಪರೂಪದ, ಸಾರ್ವಕಾಲಿಕ ಕಥಾಹಂದರದ ಚಿತ್ರ “ದಸ್ಕತ್”
- 70 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ ಅನೀಶ್ ಪೂಜಾರಿ ವೇಣೂರು ನಿರ್ದೇಶನದ ಮೂವಿ
ಡಿ. 13 ಕ್ಕೆ ತುಳು ಭಾಷೆಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಿ, 70 ದಿನಗಳ ಭರ್ಜರಿ ಯಶಸ್ವಿ ಪ್ರದರ್ಶನ ಕಂಡ ಅನೀಶ್ ಕುಮಾರ್ ವೇಣೂರು Aneesh Kumar Venur ನಿರ್ದೇಶನದ “ದಸ್ಕತ್” Daskath ತುಳುನಾಡಿನ ಆಚಾರ-ವಿಚಾರ, ಸಂಸ್ಕೃತಿ ಸಂಘರ್ಷಗಳ ಮೇಲೆ ಬೆಳಕು ಬೀರುತ್ತಾ ನಮ್ಮ ಸರ್ಕಾರದ, ಸರ್ಕಾರಿ ಅಧಿಕಾರಿಗಳ, ವ್ಯವಸ್ಥೆಯ ಅವ್ಯವಸ್ಥೆಗಳ ಕುರಿತು ಕಥೆ ಹೇಳುವ ಬಹು ಅಪರೂಪದ ಕಥಾಹಂದರ ಹೊಂದಿರುವ ಚಿತ್ರ. ರಾಘವೇಂದ್ರ ಕುಡ್ವ Raghavendra Kudva ಚಿತ್ರ ನಿರ್ಮಾಣ ಮಾಡಿದ್ದರು. ಇದೀಗ ಕನ್ನಡಕ್ಕೆ ಡಬ್ ಮಾಡಿ ಇದನ್ನು ಬಿಡುಗಡೆ ಮಾಡುತ್ತಿದ್ದಾರೆ ಜಗದೀಶ್ ಎನ್. ಅರೇಬನ್ನಿಮಂಗಲ Jagadish N Arebannimangala.
ಕನ್ನಡಿಗರಿಗೊಂದು ಅದ್ಭುತ ಚಿತ್ರ
ತುಳುನಾಡಿನ ಗ್ರಾಮ್ಯ ಪರಿಸರದಲ್ಲಿ ತೆರೆದುಕೊಳ್ಳುತ್ತಾ ಸಾಗುವ ದಸ್ಕತ್ ಸಿನಿಮಾದ ದೃಶ್ಯಗಳು ತುಳುನಾಡಿನ ಜನರಲ್ಲಷ್ಟೇ ಅಲ್ಲ ಅನ್ಯ ಭಾಷಿಕರಲ್ಲೂ ಸಕ್ಕತ್ ಜೋಷ್ ತುಂಬಿಸುವಂತಿದೆ. ಚಿತ್ರದ ಹಾಡುಗಳೂ ಕೇಳುಗರಿಗೆ ಥ್ರಿಲ್ ಹುಟ್ಟಿಸುತ್ತವೆ. ಚಿತ್ರ ಚಿತ್ರೀಕರಣಗೊಂಡಂತಹಾ ಸ್ಥಳ, ಹಿನ್ನೆಲೆ ಇವೆಲ್ಲವೂ ಚಿತ್ರಕ್ಕೆ ಹೊಸ ಉತ್ಸಾಹ ತುಂಬಿಸಿದೆ. ತುಳು ಸಿನಿಮಾರಂಗದಲ್ಲೇ ಇದೊಂದು ಅದ್ಭುತವಾದ ದೃಶ್ಯೀಕರಣದ ಪ್ರಯತ್ನ. ಇದೀಗ ಈ ಚಿತ್ರ ಕನ್ನಡದಲ್ಲಿ ಬರುತ್ತಿರುವುದು ಕನ್ನಡ ಭಾಷಿಗರಿಗಂತೂ ಖಂಡಿತಾ ಸಂತಸದ ಸುದ್ದಿ.
ಚಿತ್ರ ತಂಡದಲ್ಲಿ ಮಿಂಚಿರುವ ತಂಡ
ಕಾಮಿಡಿ ಕಿಲಾಡಿಗಳು ಶೋ ನ ಅನೀಶ್ ಕುಮಾರ್ ವೇಣೂರು ಅವರ ನಿರ್ದೇಶನದ ಈ ಚಿತ್ರದಲ್ಲಿ ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ, ಮನೋಜ್ ಆನಂದ್ ಕಾರ್ಯನಿರ್ವಹಿಸಿದ್ದಾರೆ. ಪ್ರಜ್ಞೇಶ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನಾಯಕನಾಗಿ ದೀಕ್ಷಿತ್ Deekshith ಹಾಗೂ ನಾಯಕಿಯ ಪಾತ್ರದಲ್ಲಿ ಭವ್ಯ ಪೂಜಾರಿ Bhavya Poojari ಮಿಂಚಿದ್ದಾರೆ. ಕನ್ನಡ ಚಲನಚಿತ್ರ ನಟ ಮೋಹನ್ ಶೇಣಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವರು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಛಾಯಾಗ್ರಹಣ ಹಾಗೂ ಗಣೇಶ್ ನೀರ್ಚಾಲ್ ಸಂಕಲನ, ಸಮರ್ಥನ್ ಎಸ್. ರಾವ್ ಸಂಗೀತವಿದೆ. ಮೇ 9 ರಂದು ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಕನ್ನಡಿಗರು ನೋಡಲೇಬೇಕಾದ ಅದ್ಭುತ ಸಿನಿಮಾ ಇದಾಗಿದೆ