- ಹಿಟ್ ಆಗ್ತಿದೆ “ಮೀರಾ” ಚಿತ್ರದ “ದಿನ ಶುರು ಆಪುಂಡು” ತುಳು ಹಾಡು
- ಕನ್ನಡದ ಪ್ರಸಿದ್ಧ ರಾಪರ್ ಆಲ್ ಓಕೆ ಅವರ ಧ್ವನಿಯಲ್ಲಿ ಮೂಡಿ ಬಂದಿದೆ ತುಳು ಸಾಂಗ್
- ನಾಯಕಿ ಪ್ರಧಾನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ ಅಶ್ವಥ್
ಅಸ್ತ್ರ Asthra ಬ್ಯಾನರ್ ಅಡಿಯಲ್ಲಿ ಲಂಚುಲಾಲ್ ಕೆ.ಎಸ್ Lanchulal K S ನಿರ್ಮಿಸುತ್ತಿರುವ ಮಹಿಳಾ ಪ್ರಧಾನ ಚಿತ್ರ “ಮೀರಾ” Meera ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗೆ “ದಿನ ಶುರು ಆಪುಂಡು” Dina Shuru Apundu ಎಂಬ ಹಾಡು ಕನ್ನಡದ ಪ್ರಸಿದ್ಧ ರಾಪರ್ ಆಲ್ ಓಕೆ ALL OK ಅವರ ಕಂಠದಲ್ಲಿ ಮೂಡಿಬಂದಿದ್ದು ವೈರಲ್ ಆಗ್ತಿದೆ. ಅದರಲ್ಲು ಯುವವಲಯದಲ್ಲಿ ಭಾರೀ ಸಂಚಲನ ಮೂಡಿಸ್ತಿದೆ ಈ ಹಾಡು. ಜಯಪ್ರಕಾಶ್ ಕಳೇರಿ Jayaprakash Kaleri ಸಾಹಿತ್ಯ ಇರುವ ಈ ಹಾಡಿಗೆ ರೆಜ್ನು Rejnu ಸಂಗೀತ ನೀಡಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿದೆ ಮಹಿಳಾ ಪ್ರಧಾನ ಚಿತ್ರ
ಒಬ್ಬ ಮಹಿಳೆ ತನ್ನ ಕನಸುಗಳನ್ನು ಸಾಧಿಸುವ ಹಾದಿಯಲ್ಲಿ ಸಮಾಜದಲ್ಲಿ ಅನುಭವಿಸುವ ಕಷ್ಟಗಳು, ಸವಾಲುಗಳು ಹಾಗೂ ಆ ಸವಾಲುಗಳನ್ನು ಆಕೆ ಮೆಟ್ಟಿ ನಿಂತು ಗೆಲ್ಲುವ ಪರಿಯನ್ನು ಕಥಾಹಂದರವಾಗಿ ಹೊಂದಿರುವ ಮಹಿಳಾ ಪಾತ್ರ ಪ್ರಧಾನ ತುಳು ಚಿತ್ರದಲ್ಲಿ ಇಶಿತಾ ಶೆಟ್ಟಿ Ishitha Shetty ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲಕ್ಷ್ಯ ಎಲ್. Lakshya L ನಾಯಕನಾಗಿ ನಟಿಸಿದ್ದಾರೆ. ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವೋರ್ಕಾಡಿ, ಯತೀಶ್ ಪೂಜಾರಿ, ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಂಗಳೂರು, ಕಟೀಲು, ಕಾಸರಗೋಡು, ಸೀತಾಂಗೋಳಿ, ಕುಂಬಳೆ ಮತ್ತು ಕರಾವಳಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ “ಮೀರಾ” ತುಳು ಚಿತ್ರರಂಗದಲ್ಲೊಂದು ಮಹತ್ವದ ಮೈಲಿಗಲ್ಲು ಮೂಡಿಸಲಿದೆ ಎಂಬ ಭರವಸೆ ಹೊಂದಿದೆ.