- ದೀಪಾವಳಿಯ ಸಂಭ್ರಮಕ್ಕೆ ಜೊತೆಯಾಗಲು ಬಂತು ಎರಡು ಸೂಪರ್ ಹಿಟ್ ಚಿತ್ರಗಳು
- ಓಟಿಟಿ ಸಿನಿ ಪ್ರಿಯರಿಗೆ ಹಬ್ಬದ ಫೀಲ್!
- ಕನ್ನಡದ ಚಿತ್ರಗಳು ನಿಮ್ಮ ಮೊಬೈಲ್ ನಲ್ಲಿ
ಕನ್ನಡದ ಓಟಿಟಿ ಸಿನಿಮಾ ಪ್ರಿಯರಿಗಾಗಿ ಒಂದೇ ದಿನ ಒಟಿಟಿಯಲ್ಲಿ ಎರಡು ಸೂಪರ್ ಹಿಟ್ ಕನ್ನಡ ಚಿತ್ರಗಳು ಬಿಡುಗಡೆಯಾಗಿ ದೀಪಾವಳಿ ಸಂಭ್ರಮಕ್ಕೊಂದು ಸೆಲೆಬ್ರೇಷನ್ ಫೀಲ್ ನೀಡಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತೀ ವಾರ ಹಲವು ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಆದರೆ ಕನ್ನಡ ಚಿತ್ರಗಳಿಗಿಂತ ಹೆಚ್ಚು ಪರಭಾಷಾ ಸಿನಿಮಾಗಳ ಅಬ್ಬರವೇ ಜಾಸ್ತಿ ಇರುತ್ತಿತ್ತು. ಆದರೆ ಈಗ ಕನ್ನಡ ಸಿನಿ ಪ್ರೇಮಿಗಳಿಗಾಗಿ ಈ ಎರಡು ಚಿತ್ರಗಳು ಓಟಿಟಿ ವೇದಿಕೆಯಲ್ಲಿ ಅಬ್ಬರಿಸಿದೆ.
ಏಳುಮಲೆ: ಕಾಡುವ ರಿಯಲ್ ಸ್ಟೋರಿ
ಇತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದ “ಏಳುಮಲೆ” Elumale ಸಿನಿಮಾ ಇದೀಗ ಜೀ5 ZEE5 ಒಟಿಟಿ OTT ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಿದೆ. ರಾಣಾ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಚಿತ್ರವನ್ನು ಪುನೀತ್ ರಂಗಸ್ವಾಮಿ ನಿರ್ದೇಶಿಸಿದ್ದಾರೆ. ತರುಣ್ ಸುಧೀರ್ ಅವರ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸೆಪ್ಟೆಂಬರ್ 5ರಂದು ಚಿತ್ರ ಥಿಯೇಟರ್‌ನಲ್ಲಿ ಬಿಡುಗಡೆಯಾದಾಗ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದರೂ, ಹೆಚ್ಚಿನ ಜನರಿಗೆ ತಲುಪದಿದ್ದ ಕಾರಣ ನಿರ್ಮಾಪಕರು ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದರು. ಈಗ ಒಟಿಟಿ ಮೂಲಕ ಹೆಚ್ಚು ಪ್ರೇಕ್ಷಕರ ಮನಸ್ಸು ಗೆಲ್ಲುವ ನಿರೀಕ್ಷೆ ಇದೆ.
ಚಿತ್ರದ ಕಥೆಯು ಒಂದು ರಾತ್ರಿಯಲ್ಲಿ ನಡೆಯುವ ಘಟನೆಯ ಸುತ್ತ ತಿರುಗುತ್ತದೆ. ನೈಜ ಘಟನೆಗಳನ್ನು ಆಧರಿಸಿ ಚಿತ್ರೀಕರಿಸಿದ ಈ ಸಿನಿಮಾದಲ್ಲಿ ಪ್ರಿಯಾಂಕಾ ರಾಣಾಗೆ ಜೋಡಿಯಾಗಿ ನಟಿಸಿದ್ದಾರೆ. ಜೊತೆಗೆ ಜಗಪತಿ ಬಾಬು, ಕಿಶೋರ್ ಮೊದಲಾದ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದೊಂದಿತ್ತು ಕಾಲ: ಒಂದು ಚೆಂದದ ಪ್ರೇಮಕಥೆ
ವಿನಯ್ ರಾಜ್‌ಕುಮಾರ್ Vinay Raj Kumar ಮತ್ತು ಅಧಿತಿ ಪ್ರಭುದೇವ Adithi Prabhudeva ಅಭಿನಯದ “ಅಂದೊಂದಿತ್ತು ಕಾಲ” Adondittu Kala ಸಿನಿಮಾ ಆಗಸ್ಟ್ 19ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ Amazon Prime Video ಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ.
ಕೀರ್ತಿ ಕೃಷ್ಣಪ್ಪ ನಿರ್ದೇಶನದ ಈ ಚಿತ್ರದಲ್ಲಿ ನವಿರಾದ ಪ್ರೇಮಕತೆ ಇದೆ. ಅದ್ಭುತ ಅಭಿನಯ, ಸೊಗಸಾದ ಸಂಭಾಷಣೆಗಳು ಮತ್ತು ಮನಮೋಹಕ ಸಂಗೀತದ ಮೂಲಕ ಚಿತ್ರ ಪ್ರೇಕ್ಷಕರ ಮನವನ್ನು ಗೆದ್ದಿದೆ.
ಒಟ್ಟಾರೆಯಾಗಿ ಈ ವಿಕೆಂಡ್ ಓಟಿಟಿ ಪ್ರಿಯರಿಗೆ ಸಿನಿಮಾ ಹಬ್ಬ.ದೀಪಾವಳಿಯ ನಿರೀಕ್ಷೆಯಲ್ಲಿರುವವರಿಗೆ ಹಬ್ಬದ ಮೂಡಿನಲ್ಲಿ ಮನೆಯಲ್ಲಿಯೇ ಕೂತು ಸಿನಿಮಾ ನೋಡಲು ಇದೊಳ್ಳೊ ಚಾನ್ಸ್.


