2025 ರಲ್ಲಿ ತೆರೆಗೆ ಬರಲು ಸಿದ್ಧವಾಗಿವೆ ಈ ಚಿತ್ರಗಳು – Upcoming kannada movies 2025 list

Date:

  • 2025 ರಲ್ಲಿ ತೆರೆಗೆ ಬರಲು ಸಿದ್ಧವಾಗಿವೆ ಈ ಚಿತ್ರಗಳು
  • ಹಿಟ್ ಆಗುವ ನಿರೀಕ್ಷೆಯಲ್ಲಿ ತಯಾರಾಗುತ್ತಿವೆ ಕನ್ನಡ ಮೂವಿಗಳು
  • ಬಹುನಿರೀಕ್ಷಿತ ಚಿತ್ರಗಳ ಶೂಟಿಂಗ್ ಆಲ್ಮೋಸ್ಟ್ ಮುಗಿದಿವೆ.

ಕೆಡಿ-ದ ಡೆವಿಲ್ – KD The Devil

ಧೃವ ಸರ್ಜಾ Dhruva Sarja ನಾಯಕನಾಗಿ ನಟಿಸಿರುವ ಜೋಗಿ ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ, ಮಾರ್ಚ್ 7, 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ರೇಷ್ಮಾ ನಾಣಯ್ಯ, ವಿ.ರವಿಚಂದ್ರನ್, ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಯುವರ್ಸ್ ಸಿನ್ಸಿಯರ್ಲಿ ರಾಮ್ – Yours Sincerely Raam

ಕೃಷ್ಣಂ ಪ್ರಣಯ ಸಖಿ ಚಿತ್ರದ ನಂತರ ಗೋಲ್ಡನ್ ಸ್ಟಾರ್ ಗಣೇಶ್ Golden Star Ganesh ಮತ್ತೆ ಈ ಚಿತ್ರದ ಮೂಲಕ 2025 ರಲ್ಲಿ ಬೆಳ್ಳಿ ತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇವರೊಂದಿಗೆ ರಮೇಶ್ ಅರವಿಂದ್ ಕೂಡಾ ಮುಖ್ಯ ಪಾತ್ರವನ್ನು ಹಂಚಿಕೊಂಡಿದ್ದಾರೆ. ಎ.ಆರ್. ವಿಖ್ಯಾತ್ ನಿರ್ದೇಶಿಸಿದ ಈ ಚಿತ್ರ ಈ ವರ್ಷದ ಆಗಸ್ಟ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಕಾಂತಾರ ಅಧ್ಯಾಯ 1 – Kantara Chapter 1

ಇಡೀ ವಿಶ್ವದ ಸಿನಿಮಾ ರಂಗದಲ್ಲೇ ಸಂಚಲನ ಮೂಡಿಸಿದ ಹೊಂಬಾಳೆ ಫಿಲ್ಮ್ಸ್ ನಿರ್ದೇಶನದ ಕಾಂತಾರ ಚಿತ್ರ ಕರಾವಳಿಯ ಕರಾವಳಿಯ ಧಾರ್ಮಿಕ ಆಚರಣೆಗಳ ಕೇಂದ್ರೀಕೃತವಾಗಿತ್ತು. ರಿಷಭ್ ಶೆಟ್ಟಿ Rishab Shetty ನೇತೃತ್ವದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ರೆಡಿಯಾಗುತ್ತಿರುವ ಕಾಂತಾರ ಅಧ್ಯಾಯ 1 ಅಕ್ಟೋಬರ್ ತಿಂಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

ಡೆವಿಲ್ ದಿ ಹೀರೋ – Devil The Hero

ವೈಯಕ್ತಿಕ ವಿವಾದಗಳಿಂದಾಗಿ ಜೈಲು ಸೇರಿದ್ದ ನಟ ದರ್ಶನ್ Darshan ಅವರ ಡೆವಿಲ್ ಸಿನಿಮಾದ ಶೂಟಿಂಗ್ ಅರ್ಧಕ್ಕೇ ನಿಂತಿದ್ದು ಈ ವರ್ಷ ಪೂರ್ಣಗೊಂಡು ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಿಟ್ ಆಗಿದ್ದ ಕಾಟೇರ ಚಿತ್ರದ ನಂತರದ ದರ್ಶನ್ ಅವರ ಬಹುನಿರೀಕ್ಷಿತ ಚಿತ್ರ ಇದಾಗಿದೆ.

ಟಾಕ್ಸಿಕ್ – Toxic

ಗೋವಾದ ಡ್ರಗ್ ಮಾಫಿಯಾದ ಸುತ್ತ ಸುತ್ತುವ ರಾಕಿಂಗ್ ಸ್ಟಾರ್ ಯಶ್ Rocking Star Yash ಅಭಿನಯದ ಚಿತ್ರ ಟಾಕ್ಸಿಕ್, ಹೈ ಬಜೆಟ್ ಥ್ರಿಲ್ಲರ್ ಮೂವೀ ಆಗಿದ್ದು, ಈ ವರ್ಷಾಂತ್ಯದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಬಿಲ್ಲಾ ರಂಗ ಬಾಷಾ – Billa Ranga Baashaa

2024 ರ ಅಂತ್ಯದಲ್ಲಿ ಮ್ಯಾಕ್ಸ್ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿರುವ ಕಿಚ್ಚ ಸುದೀಪ್ Kiccha Sudeep ಅವರ ಇನ್ನೊಂದು ಚಿತ್ರ ಬಿಲ್ಲಾ ರಂಗ ಬಾಷಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಅನುಪ್ ಭಂಡಾರಿ ಇದರ ನಿರ್ದೇಶಕರಾಗಿರುತ್ತಾರೆ. ಈ ಚಿತ್ರ 2025 ರಲ್ಲೇ ಬಿಡುಗಡೆಯಾಗಲಿದೆ.

45 Movie

ಅತ್ಯಂತ ಕುತೂಹಲಕಾರಿಯಾದ ಚಿತ್ರ 45. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಿಸಿರುವ ಘಟಾನುಘಟಿಗಳಾದ, ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮುಂತಾದವರ ನಟನೆ ಇರುವ ಈ ಚಿತ್ರ ಫೆಬ್ರವರಿ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರುವ ಸಾಧ್ಯತೆಯಿದೆ.

ಆರಿದ್ರಾ – Aridra

ಅಜಯ್ ಸೂರ್ಯ ಫಿಲಂಸ್ ನ ಚೊಚ್ಚಲ ಚಿತ್ರ ಅಜಯ್ ಸೂರ್ಯ Ajay Surya ಅವರ ನಟನೆ ಹಾಗೂ ನಿರ್ದೇಶನದ “ಆರಿದ್ರಾ”, ಚಿತ್ರ ಫೆಬ್ರವರಿ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲು ಸಜ್ಜಾಗುತ್ತಿದೆ.

ರಾಚಯ್ಯ – Rachayya

ಇದು ಸತ್ತವರ ಕಥೆಯಲ್ಲ, ಬದುಕುಳಿದವರ ಕತೆ ಎಂಬ ಟ್ಯಾಗ್ ಲೈನ್ ಹೊಂದಿರುವ ದುನಿಯಾ ವಿಜಯ್ Duniya Vijay ಅಭಿನಯದ ಈ ಚಿತ್ರ ಜಾತಿ ಸಮಸ್ಯೆಗಳನ್ನು ಚರ್ಚಿಸುವ ಚಿತ್ರವಾಗಿದೆ. ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರ ಆಗಸ್ಟ್ ತಿಂಗಳಲ್ಲಿ ಬೆಳ್ಳಿತೆರೆಗೆ ಬರುವ ಸಂಭವವಿದೆ.

ಬುದ್ಧಿವಂತ 2 – Buddhivantha 2

ಯುಐ ಚಿತ್ರದ ಯಶಸ್ಸಿನ ನಂತರ ಉಪೇಂದ್ರ ಬುದ್ಧಿವಂತ 2 ಚಿತ್ರವನ್ನು ತೆರೆಯ ಮೇಲೆ ತರಲು ಮುಂದಾಗಿದ್ದು, ಈ ಬಹುನಿರೀಕ್ಷಿತ ಚಿತ್ರ ಈ ವರ್ಷದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

100 ಕೋಟಿ ಗಳಿಸಿ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ಆನಿಮೇಷನ್ ಚಿತ್ರ “ಮಹಾವತಾರ ನರಸಿಂಹ”

100 ಕೋಟಿ ಗಳಿಸಿ ದಾಖಲೆ ಬರೆದ ಭಾರತದ ಮೊಟ್ಟ ಮೊದಲ ಆನಿಮೇಷನ್...

ಸದ್ದಿಲ್ಲದೇ ನಡೆಯುತ್ತಿದೆ “ಕಟಕ 2” ಚಿತ್ರದ ತಯಾರಿ

ಸದ್ದಿಲ್ಲದೇ ನಡೆಯುತ್ತಿದೆ “ಕಟಕ 2” ಚಿತ್ರದ ತಯಾರಿ ವಿಭಿನ್ನ ಕತೆ ಮತ್ತು ನಿರೂಪಣೆಯ...

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು ಗ್ರಾಮ ಜೀವನದ ಕತೆ ಹೇಳುವ ಎರಡು ಚಿತ್ರಗಳು

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು...

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್

ಕರ್ನಾಟಕ-ತಮಿಳುನಾಡು ಗಡಿಭಾಗದ ಪ್ರೇಮಕಥೆ ಹೇಳುವ “ಏಳುಮಲೆ” ಚಿತ್ರದ ಫಸ್ಟ್ ಸಾಂಗ್ ರಿಲೀಸ್ ನಿರ್ದೇಶಕ...