- ಕಣ್ಣೆದುರು ಗ್ರಾಮ ಜೀವನದ ಮುಗ್ದಲೋಕ ಬಿಚ್ಚಿಡುವ “ವಲವಾರ”
- ಸಿಂಪಲ್ಲಾಗ್ ಅದ್ದೂರಿತನ ಮೆರೆದ “ವಲವಾರ” ಟ್ರೈಲರ್
- ಬಾಲ ನಟರೇ ಇಲ್ಲಿ ಕತೆ ಹೇಳ್ತಾರೆ
ಕನ್ನಡದಲ್ಲಿ ಬಾಲ ನಟರೇ ಪ್ರಧಾನ ಪಾತ್ರ ವಹಿಸಿದ ಸಿನಿಮಾಗಳು ಇತ್ತೀಚೆಗೆ ಕಡಿಮೆಯಾಗಿವೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಬಾಲ್ಯದ ಘಟನೆಯೊಂದನ್ನು ಎಲ್ಲ ವಯೋಮಾನದವರಿಗೂ ತಾಕುವಂತೆ ಕಾಡಿಸುವ ಸಿನಿಮಾಗಳು ಜಾಸ್ತಿಯಾಗಬೇಕು ಎನ್ನು ಅಭಿಪ್ರಾಯ ಸ್ಯಾಂಡಲ್ ವುಡ್ ನಲ್ಲಿತ್ತು. ಇದೀಗ ಅಂತಹ ಸುಂದರ ಕಥಾನಕವುಳ್ಳ, ಬಾಲ ನಟರೇ ಮುಖ್ಯ ಪಾತ್ರವಹಿಸಿರುವ ಸಿನಿಮಾದ ಟ್ರೈಲರ್ ಸದ್ದು ಮಾಡುತ್ತಿದೆ.
ಕಲಾತ್ಮಕ ನಿರೂಪಣೆ, ಸುಂದರ ಸಂಯೋಜನೆ
ಚಿತ್ರದ ಹೆಸರು “ವಲವಾರ” Valvaara. ಅಣ್ಣ-ತಮ್ಮದಿಂರ ಸೆಂಟಿಮೆಂಟ್, ಗ್ರಾಮೀಣ ಜೀವನದ ಮುಗ್ದಲೋಕ, ಪುಟ್ಟ ಹುಡುಗನ ಪ್ರಾಣಿ ಪ್ರೀತಿ ಎಲ್ಲವೂ ಇರೋ ಚಿತ್ರವಿದು. ಅಪ್ಪಟ ಹಸುರಿನ ಸುಂದರ ದೃಶ್ಯಾವಳಿ, ಭಾವನಾತ್ಮಕ ಕತೆಯ ಜೊತೆ ಕಾಡುವ ನಿರೂಪಣೆ ಈ ಚಿತ್ರದಲ್ಲಿದೆ. ಸಿನಿಮಾಗೆ ಸುತನ್ ಗೌಡ Suthan Gowda ಆಕ್ಷನ್ ಕಟ್ ಹೇಳಿದ್ದಾರೆ. ಜೆ ಗಿರಿಧರ್, ಅನಿರುದ್ಧ್ ಗೌತಮ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಮಾಸ್ಟರ್ ಕೌಶಲ್, ಮಾಸ್ಟರ್ ಶಯಾನ್ ,ಅಭಯ್, ಮಾಲತೇಶ್, ಹರ್ಷಿತಾ ಗೌಡ ಅವರ ನಟನೆಯಲ್ಲಿ ದೇಶಿ ಭಾಷೆಯ ಭಾವ ಅಭಿವ್ಯಕ್ತಿ ಇದೆ.
ಸಿಂಪಲ್ಲಾದ ಅದ್ದೂರಿತನವನ್ನು ಬಿಂಬಿಸಿದ ಟ್ರೈಲರ್
ಈಗಾಗಲೇ ಚಿತ್ರದ ಸೊಗಸಾದ ಟ್ರೈಲರ್ ಗೆ ಇತರ ಭಾಷೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಟ್ರೈಲರ್ ನಲ್ಲಿ ಗ್ರಾಮೀಣ ಜೀವನವನ್ನೂ ಸಹಜ ಸುಂದರಾಗಿ ತೋರಿಸಿರುವುದು ಚಿತ್ರದ ಸಿಂಪಲ್ಲಾದ ಅದ್ದೂರಿತನವನ್ನು ಬಿಂಬಿಸಿದೆ. ಹಾಗಾಗಿ ಟ್ರೈಲರ್ ನಲ್ಲಿಯೇ “ವಲವಾರ” ಚಿತ್ರದ ಕುರಿತು ಹತ್ತಾರು ನಿರೀಕ್ಷೆಗಳು ಹುಟ್ಟಿಕೊಂಡಿದೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ Kadri Manikanth ಇಂಪಾದ ಸಂಗೀತವಿದೆ. ಶ್ರೀಕಾಂತ್ ಎಸ್ ಎಚ್ ಕ್ರಿಯೇಟಿವ್ ಸಂಕಲನವಿದೆ. ಬಾಲರಾಜ್ ಗೌಡ ಅವರ ಕಲಾತ್ಮಕ ಸಿನಿಮಾಟೋಗ್ರಫಿ ಡೈರೆಕ್ಷನ್ ಇದೆ.