- ಏಪ್ರಿಲ್ 10ಕ್ಕೆ ತೆರೆಮೇಲೆ ಬರಲಿದೆ “ವಾಮನ”
- ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಶಂಕರ್ ರಾಮನ್ ನಿರ್ದೇಶನದ ಚೊಚ್ಚಲ ಚಿತ್ರ “ವಾಮನ”
- ಕುತೂಹಲ ಹುಟ್ಟುಹಾಕಿವೆ ಚಿತ್ರದ ‘ಮುದ್ದು ರಾಕ್ಷಸಿ’ ಮತ್ತು ‘ವಾ ವಾ ವಾಮನ’ ಹಾಡುಗಳು
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಅವರು ನಿರ್ಮಿಸುತ್ತಿರುವ ಚಿತ್ರ “ವಾಮನ”. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಶಂಕರ್ ರಾಮನ್. ಧನ್ವೀರ್ ಮತ್ತು ರೀಷ್ಮಾ ನಾಣಯ್ಯ ಮುಖ್ಯಭೂಮಿಕೆಯಲ್ಲಿ ನಟಸಿರುವ ಬಹುನಿರೀಕ್ಷಿತ ವಾಮನ ಚಿತ್ರದ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದ್ದು, ಏ.10 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಕುತೂಹಲ ಮೂಡಿಸ್ತಿವೆ ಹಾಡುಗಳು
ಈ ಚಿತ್ರದ ‘ಮುದ್ದು ರಾಕ್ಷಸಿ’ ಮತ್ತು ‘ವಾ ವಾ ವಾಮನ’ ಎಂಬ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಹುಟ್ಟಿಸ್ತಿವೆ. ಚಿತ್ರದ ಟೀಸರ್ ಕೂಡ ಎಲ್ಲರ ಗಮನ ಸೆಳೆದಿದೆ. ತಾರಾಗಣದಲ್ಲಿ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಪೆಟ್ರೋಲ್ ಪ್ರಸನ್ನ, ಶಿವರಾಜ್ ಕೆಆರ್ ಪೇಟೆ ಮತ್ತು ಕಾಕ್ರೋಚ್ ಸುಧಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಭೂಷಣ್ ನೃತ್ಯ ಸಂಯೋಜನೆ, ಮಹೇಂದ್ರ ಸಿಂಗ್ ಅವರ ಛಾಯಾಗ್ರಹಣವಿದೆ.