- ಥ್ರಿಲ್ಲರ್ ಲೋಕದ ಹೊಸ ಕತೆ ಹೇಳಲು “ವೃತ್ತ” ರೆಡಿ
- “ವೃತ್ತ” ಹೊಸ ಚಿತ್ರವೊಂದು ಆಗಸ್ಟ್ 1ರಂದು ರಿಲೀಸ್ ಆಗಲಿದೆ.
- ಸಿದ್ದಾರ್ಥ್ ಎಂಬ ಪಾತ್ರದ ಸುತ್ತ ನಡೆಯುವ ಕಥೆ ಸಿನಿಮಾದ ಹೈಲೈಟ್
ಕನ್ನಡದಲ್ಲಿ ಥ್ರಿಲ್ಲರ್ ಚಿತ್ರಗಳು ಇತ್ತೀಚೆಗೆ ಜಾಸ್ತಿ ಬರುತ್ತಿವೆ. ಯಾಕಂದ್ರೆ ಥ್ರಿಲ್ಲರ್ ಕತೆಯುಳ್ಳ ಚಿತ್ರಗಳನ್ನು ಪ್ರೇಕ್ಷಕರು ಜಾಸ್ತಿ ಇಷ್ಟಪಡುತ್ತಿದ್ದಾರೆ. ಇದೀಗ “ವೃತ್ತ” Vrutta ಹೊಸ ಚಿತ್ರವೊಂದು ಆಗಸ್ಟ್ 1ರಂದು ರಿಲೀಸ್ ಆಗಲಿದೆ. ಇದೂ ಕೂಡ ಥ್ರಿಲ್ಲರ್ ಕತೆಯನ್ನೊಳಗೊಂಡ ಚಿತ್ರವಾಗಿದ್ದು, ನಿರ್ದೇಶಕ ಲಿಖಿಲ್ ಕುಮಾರ್ Likhil Kumar ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ವೃತ್ತ ಸಿನಿಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಂಡಿದೆ. ಇದೊಂದು ಥ್ರಿಲ್ಲರ್ ಕತೆಯ ಜೊತೆಗೆ ಭಾವನಾತ್ಮಕ ಅಂಶವುಳ್ಳ ಚಿತ್ರವಾಗಿದೆ. ಒಂದಿಡೀ ರಾತ್ರಿ ನಡೆಯುವ ಸನ್ನಿವೇಶಗಳನ್ನು ಈ ಚಿತ್ರದಲ್ಲಿ ಪೋಣಿಸಲಾಗಿದೆ. ಸಿದ್ದಾರ್ಥ್ ಎಂಬ ಪಾತ್ರದ ಸುತ್ತ ನಡೆಯುವ ಕಥೆ ಸಿನಿಮಾದ ಹೈಲೈಟ್. ಸಿದ್ದಾರ್ಥ್ ನ ಮನಸ್ಥಿತಿಯೇ ಆತನ ಶತ್ರು. ಒಂದು ರಾತ್ರಿ, ಒಂದು ಕರೆ ಹಾಗೂ ನಾಯಕ ದಾರಿಯಲ್ಲಿ ತೆಗೆದುಕೊಳ್ಳಬಹುದಾದ ರಾಂಗ್ ಟರ್ನ್‌ನಿಂದ ಏನೆಲ್ಲಾ ಸಂಭವಿಸುತ್ತೆ ಎಂಬುವುದನ್ನು ಚಿತ್ರ ಕತೆ ಬಿಚ್ಚಿಡುತ್ತಾ ಸಾಗುತ್ತದೆ.
ಸದ್ದು ಮಾಡ್ತಿದೆ ಚಿತ್ರದ ಟ್ರೇಲರ್
ಯುವನಟ ಮೊಹಿಯುದ್ದೀನ್ Mohiyuddin ಅವರು ನಾಯಕ ಸಿದ್ದಾರ್ಥ್ ಪಾತ್ರದಲ್ಲಿ ಮಿಂಚಿದ್ದಾರೆ, ಜಯಣ್ಣ ಫಿಲಂಸ್ Jayanna Films ಚಿತ್ರದ ವಿತರಣೆ ಹೊತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಹಾಗೂ “ಅದು ಯಾವ ಮಾಯೆಯೋ” ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದ್ದು, ಆ ಹಾಡು ವೈರಲ್ ಆಗಿದೆ. ಚಿತ್ರದ ಟ್ರೈಲರ್ ಕೂಡ ಸದ್ದು
ಮಾಡ್ತಿದೆ.
ಲಕ್ಷಯ್ ಆರ್ಟ್ಸ್ Lakshay Arts ಬ್ಯಾನರ್ ಅಡಿ ಟಿ. ಶಿವಕುಮಾರ್ T Shivakumar ಅವರು ಚಿತ್ರವನ್ನು
ನಿರ್ಮಿಸಿದ್ದಾರೆ. ಯೋಗೇಶ್‌ಗೌಡ ಅವರ ಕಥೆ, ಶಂಕರ ರಾಮನ್ ಅವರ ಸಂಭಾಷಣೆ ಚಿತ್ರಕ್ಕಿದೆ. ನಿರ್ದೇಶಕ ಲಿಖಿತ್ ಕುಮಾರ್ ಅವರೇ ಚಿತ್ರಕಥೆ ಬರೆದಿದ್ದಾರೆ. ಮಹಿರ್ ಜತೆ ಹರಿಣಿ ಸುಂದರ ರಾಜನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಂಟನಿ ಎಂಜಿ, ಹಾಗೂ ಹರಿ ಕೃಷಾಂತ್ ಸಂಗೀತ ಸಂಯೋಜನೆಯಿದೆ. ಗೌತಮ್ ಕೃಷ್ಣ ಅವರ ಸಿನಿಮಾಟೋಗ್ರಫಿ ಸುರೇಶ್ ಆರ್ಮುಗಂ ಅವರ ಸಂಕಲನ ಈ ಚಿತ್ರಕ್ಕಿದೆ.