- “ಕೂಲಿ” ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು? ಕೊನೆಗೂ ಸಿಕ್ಕಿತು ಉತ್ತರ
- ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ “ಕೂಲಿ” ಚಿತ್ರದಲ್ಲಿ ಬಹು ಭಾಷಾ ತಾರೆಯರಿದ್ದಾರೆ
- ರಿಯಲ್ ಸ್ಟಾರ್ ಉಪೇಂದ್ರ ರೋಲ್ ಕೂಡ ಇಂಟ್ರಸ್ಟಿಂಗ್ ಆಗಿದೆ
ಸೂಪರ್ ಸ್ಟಾರ್ ರಜನಿಕಾಂತ್ Supar Star Rajanikanth ಅಭಿನಯದ “ಕೂಲಿ” Kooli ಚಿತ್ರದಲ್ಲಿ ಬಹು ಭಾಷಾ ತಾರೆಯರಿದ್ದಾರೆ. ಕನ್ನಡದ ಖ್ಯಾತ ನಟ ಉಪೇಂದ್ರ Upendra ಅವರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೆ ಗೊತ್ತೇ ಇದೆ. ಆದ್ರೆ ಚಿತ್ರದಲ್ಲಿ ಉಪೇಂದ್ರ ಯಾವ ಪಾತ್ರ ನಿರ್ವಹಿಸುತ್ತಾರೆ ಎನ್ನುವ ಕುತೂಹಲ ಮಾತ್ರ ಉಪೇಂದ್ರ ಅಭಿಮಾನಿಗಳಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಲೇ ಇತ್ತು. ಆ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಟಾಲಿವುಡ್ನ ನಾಗಾರ್ಜುನ್ Nagarjun ಈ ಸಿನಿಮಾದಲ್ಲಿ ಸ್ಟೈಲಿಶ್ ರೋಲ್ ಮಾಡಿದ್ದಾರೆ. ಬಾಲಿವುಡ್ ನಟ ಆಮೀರ್ ಖಾನ್ Amir Khan ರೋಲ್ ಕೂಡ ವಿಭಿನ್ನವಾಗಿಯೇ ಇದೆ. ಹಾಗೆಯೇ ರಿಯಲ್ ಸ್ಟಾರ್ ಉಪೇಂದ್ರ Real Star Upendra ರೋಲ್ ಕೂಡ ಇಂಟ್ರಸ್ಟಿಂಗ್ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಕಲೀಶ್ ಅನ್ನುವ ಹೆಸರಿನ ಪಾತ್ರದಲ್ಲಿ ಉಪ್ಪಿ
“ಕೂಲಿ” ಸಿನಿಮಾದಲ್ಲಿ ಉಪೇಂದ್ರ, ಕಲೀಶ್ ಅನ್ನುವ ಹೆಸರಿನ ಪಾತ್ರ ಮಾಡಿದ್ದಾರಂತೆ. ಈ ಒಂದು ಪಾತ್ರದ ಮೂಲಕವೇ ಉಪೇಂದ್ರ ಫಸ್ಟ್ ಟೈಮ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಗೆ ಅಭಿನಯಿಸಿದ್ದಾರೆ. ಉಪೇಂದ್ರ ಅವರ ಕಲೀಶ್ ಪಾತ್ರಕ್ಕೆ ಚಿತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆಯಂತೆ. ಆದರೆ ಉಪ್ಪಿ ಈ ವರೆಗೂ ನಿರ್ವಹಿಸಿದ ಪಾತ್ರಗಳಿಗಿಂತಲೂ ಈ ಪಾತ್ರ ತೀರಾ ವಿಭಿನ್ನವಾಗಿರಲಿದೆ ಎನ್ನುವ ಮಾಹಿತಿ ದೊರೆತಿದೆ. ರಜನೀಕಾಂತ್ ಮತ್ತು ಉಪೇಂದ್ರ ಅವರ ಹೊಂದಾಣಿಕೆ ಸಿನಿಮಾದಲ್ಲಿ ಅದ್ಬುತವಾಗಿ ಮೂಡಿಬಂದಿದೆಯಂತೆ. ಇದಕ್ಕೆ ವೈಯಕ್ತಿಕ ಜೀವನದಲ್ಲಿಯೂ ರಜನೀಕಾಂತ್, ಅವರು ಉಪೇಂದ್ರ ಅಭಿನಯವನ್ನು ಮೆಚ್ಚಿಕೊಂಡಿರುವುದು ಮತ್ತು ಉಪೇಂದ್ರ ಅವರಿಗೂ ರಜನಿ ಕುರಿತು ವಿಶೇಷ ಪ್ರೀತಿ ಗೌರವ ಇರುವುದೂ ಕೂಡ ಕಾರಣವೆಂದು ವಿಶ್ಲೇಷಿಸಬಹುದಾಗಿದೆ.
ಇನ್ನೇನಿದ್ದರೂ ಕೆಲವೇ ದಿನಗಳಲ್ಲಿ “ಕೂಲಿ” ರಿಲೀಸ್ ಆಗಲಿದ್ದು ಉಪೇಂದ್ರ ಅವರು ಪಾತ್ರವನ್ನು ಯಾವ ರೀತಿ ಮಾಡಿದ್ದಾರೆ ಎನ್ನುವ ಪ್ರೇಕ್ಷಕರ ಕುತೂಹಲಗಳಿಗೆ ಉತ್ತರ ಸಿಗಲಿದೆ.