- ಬೆರಗುಗಣ್ಣ ಚೆಲುವೆ ಸಂಗೀತ ಶೃಂಗೇರಿ ಅದ್ಯಾಕೆ ಸಿನಿಮಾ ಮಾಡ್ತಿಲ್ಲ ಇಲ್ಲಿದೆ ಅಸಲಿ ಕಾರಣ..!
- ಈಕೆ ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಯುವಜನರ ಹೃದಯದಲ್ಲಿ ಖುಷಿಯ ಕಾವ್ಯ ಬರೆದಿದ್ರು.
- ಬೋಲ್ಡ್ ಆಗಿ ಐಟಂ ಸಾಂಗ್ ಗಳಿಗಷ್ಟೇ ಕುಣಿಯುವ ನಟಿಯಾಗಲು ಇಷ್ಟವಿಲ್ಲ ಎಂದಿದ್ದಾರೆ ಸಂಗೀತ
ಬಿಗ್ ಬಾಸ್ 10 ರ ಮೋಹಕ ಚೆಲುವೆ ಸಂಗೀತಾ ಶೃಂಗೇರಿ. ಈಕೆ ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಯುವಜನರ ಹೃದಯದಲ್ಲಿ ಖುಷಿಯ ಕಾವ್ಯ ಬರೆದಿದ್ರು. ಈಕೆಯ ಬೋಲ್ಡ್ ನೆಸ್ ಮತ್ತು ನಗುವಿಗೆ ಅಪಾರ ಫ್ಯಾನ್ಸ್ ಗಳು ಹುಟ್ಟಿಕೊಂಡಿದ್ದರು. ಬಿಗ್ ಬಾಸ್ ಗಿಂತ ಮೊದಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ರೂ ಬಿಗ್ ಬಾಸ್ ಗೆ ಬಂದ ಮೇಲೆ ಸಂಗೀತ ಸಖತ್ ಫೇಮಸ್ಸಾಗಿದ್ರು. ಆ ಜನಪ್ರಿಯತೆ ನೋಡಿ ಹತ್ತಾರು ಸಿನಿಮಾಗಳಿಗೆ ನಟಿಯಾಗಲು ಭರ್ಜರಿ ಆಫರ್ ಕೂಡ ಈಕೆಗೆ ಬಂದಿತ್ತು. ಆದ್ರೆ ಸಂಗೀತ ಅಲ್ಲೆಲ್ಲೂ ಕಾಣಿಸಿಕೊಂಡಿಲ್ಲ, ಎಲ್ಲಿ ಹೋದ್ಲು ಈಕೆ ಎಂದು ಅಭಿಮಾನಿಗಳೂ ಹುಡುಕಿದ್ದಂತೂ ನಿಜ.
ಸಿನಿಮಾ ನಟನೆ ಬಗ್ಗೆ ಹೀಗಂತಾರೆ ಸಂಗೀತ
ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಫೋಟೋ ಶೂಟ್, ಮೋಹಕ ವಿಡಿಯೋಗಳ ಜೊತೆ ಆಗಾಗ ಸಂಗೀತ ಸಿಕ್ಕಿ ಎದೆಯಲ್ಲಿ ಸರಿಗಮ ಹಾಡಿದ್ದೇನೋ ಹೌದು. ಆದ್ರೆ ಈಕೆ ಯಾಕೆ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ತಿಲ್ಲ ಎನ್ನುವ ಪ್ರೇಕ್ಷಕರ ಪ್ರಶ್ನೆಗೆ ಉತ್ರ ಸಿಕ್ಕಿರಲಿಲ್ಲ. ಇತ್ತೀಚೆಗೆ ಸಂಗೀತ, ಅದಕ್ಕೆ ಮಾಧ್ಯಮಗಳಲ್ಲೆ ಉತ್ತರ ಕೊಟ್ಟಿದ್ದಾರೆ. ಮಾಧ್ಯಮಗಳಿಗೆ ಕೊಟ್ಟ ಸಂದರ್ಶನದಲ್ಲಿ “ನಂಗೆ ಸೂಟ್ ಆಗುವ, ತುಂಬಾ ಕೆನೆಕ್ಟ್ ಆಗುವ, ಜನ ಎಂದೆಂದಿಗೂ ನೆನಪಿಡುವ ಪಾತ್ರಗಳೇ ಸಿಗ್ತಾ ಇಲ್ಲ, ಸುಮ್ಮಸುಮ್ಮನೆ ಬೋಲ್ಡ್ ಆಗಿ ಐಟಂ ಸಾಂಗ್ ಗಳಿಗಷ್ಟೇ ಕುಣಿಯುವ ನಟಿಯಾಗಲು ಇಷ್ಟವಿಲ್ಲ, ಹಾಗಾಗಿ ಇಂತಹ ಹತ್ತಾರು ಅವಕಾಶ ಬಂದ್ರೂ ಅದನ್ನು ಓಕೆ ಮಾಡಿಲ್ಲ, ಒಳ್ಳೆ ಪಾತ್ರ ಸಿಕ್ಕರೆ ಮುಂದೆ ಖಂಡಿತ ಬಿಡೋದಿಲ್ಲ” ಎಂದು ಸಂಗೀತ ಇಷ್ಟು ದಿನ ಸಿನಿಮಾದಿಂದ ದೂರವಿದ್ದದ್ದಕ್ಕೆ ಕಾರಣ ಕೊಟ್ಟಿದ್ದಾರೆ.
ಈಗ ಏನ್ ಮಾಡ್ತಿದ್ದಾರೆ ನೋಡಿ
ಸದ್ಯ ಸ್ಪಿರಿಚುವಲ್ ಜರ್ನಿ, ಮತ್ತು ತಮ್ಮ ಹೊಸ ಕ್ರಿಸ್ಟಲ್ ಬೀಡ್ಸ್ ಗಳ ಬ್ಯುಸಿನೆಸ್ ಮಾಡುತ್ತ ಕ್ರಿಯಾಶೀಲರಾಗಿರುವ ಸಂಗೀತ, ಸದ್ಯ ಯಾವುದೂ ಸಿನಿಮಾ ಒಪ್ಪಿಕೊಂಡಂತೆ ಕಾಣುತ್ತಿಲ್ಲ, ಈಗಾಗಲೇ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತ, ಕೊನೆಯದಾಗಿ ಮಾರಿಗೋಲ್ಡ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. ಅವರ ಮುಂದಿನ ಸಿನಿಮಾ ಯಾವುದಾಗಿರಬಹುದು ಎನ್ನುವ ಕಾತರದಿಂದ ಅವರ ಅಭಿಮಾನಿಗಳಂತೂ ಕಾಯುತ್ತಿದ್ದಾರೆ.