- ಸಜ್ಜಾಗ್ತಿದೆ ಮಹಿಳಾ ಪ್ರಧಾನ ಚಿತ್ರ “ಕರಳೆ”
- ನೈಜ ಘಟನೆ ಆಧಾರಿತ ವಿಭಿನ್ನ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ ನಿರ್ದೇಶಕ ಅವಿರಾಮ್ ಕಂಠೀರವ
- ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ಸದ್ಯದಲ್ಲೇ ತೆರೆಗೆ ಬರ್ತಾ ಇದೆ “ಕರಳೆ”
“ಕರಳೆ” Karale ಹೆಸರೇ ವಿಚಿತ್ರ ಅಂತನ್ನಿಸಿದ್ರೂ ವಿಭಿನ್ನವಾದ, ನೈಜಘಟನೆಯನ್ನಾಧರಿಸಿದ ಚಿತ್ರ ಸಿನಿ ಪ್ರೇಕ್ಷಕರಿಗೆ ಕೊಡ್ತಾ ಇದ್ದಾರೆ ನಿರ್ದೇಶಕ ಅವಿರಾಮ್ ಕಂಠೀರವ Aviram Kantirava. ಕಲಿವೀರ, ಕನ್ನಡ ದೇಶದೊಳ್ ವಿಶಿಷ್ಟ ಸಿನಿಮಾಗಳ ಮೂಲಕ ಜನಮಾನಸ ಗೆದ್ದ ಇವರ ಹೊಸ ಸಿನಿಮಾ “ಕರಳೆ” ಎರಡು ಹಂತದ ಚಿತ್ರೀಕರಣ ಮುಗಿಸಿದೆ.
ಗಮನ ಸೆಳೀತಿದೆ ಪೋಸ್ಟರ್
ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದ್ದು, ಮೊದಲ ನೋಟದಲ್ಲೇ ಕುತೂಹಲ ಹುಟ್ಟಿಸುತ್ತಿದೆ. ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಸಮಾಜದ ವಾಸ್ತವ ಅಂಶಗಳನ್ನೇ ಇಲ್ಲಿ ಚಿತ್ರೀಸಲಾಗುತ್ತಿದೆ. ಎಮೋಷನಲ್, raw, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ ಎಂದಿದ್ದಾರೆ ನಿರ್ದೇಶಕರು. ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದು ಆದ್ದರಿಂದ ಚಿತ್ರವನ್ನು ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ತೆರೆಗೆ ಸಿದ್ಧತೆ ನಡೆದಿದೆ. ಕನ್ನಡ ಜೊತೆಗೆ ನೆರೆ ರಾಷ್ಟ್ರ ಚೈನಾದ ಚೈನೀಸ್ ಭಾಷೆಯಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನಿಮಾ ಎಂಬ ಹೆಗ್ಗಳಿಕೆ ಕರಳೆ ಚಿತ್ರಕ್ಕಿದೆ. ಡಾರ್ಕ್ ಶೇಡ್ ನಲ್ಲಿ ಚಿತ್ರ ತಯಾರಾಗುತ್ತಿದ್ದು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.