ರಾಗಕೆ ಸ್ವರವಾಗಿ, ನಟನೆಗೂ ಜೀವ ನೀಡಿದ “ಯಶಸ್ವಿನಿ”

Date:

  • ರಾಗಕೆ ಸ್ವರವಾಗಿ, ನಟನೆಗೂ ಜೀವ ನೀಡಿದ “ಯಶಸ್ವಿನಿ”
  • ಸಂಗೀತದಲ್ಲೂ, ಅಭಿನಯದಲ್ಲೂ ಯಶಸ್ವಿ “ಯಶಸ್ಸಿನಿ ಕಾಪ್ಸೆ”
  • ರಾಗ ಮತ್ತು ಅಭಿನಯದ ಮೋಹವಿರುವ ಇವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಬೆಳೆದದ್ದು, ಬೆಂಗಳೂರಿನಲ್ಲಿ.

ಕಿರಿಯ ವಯಸ್ಸಿನಲ್ಲೇ ಚಿತ್ರರಂಗದಲ್ಲೂ ಸಂಗೀತ ಕ್ಷೇತ್ರದಲ್ಲಿಯೂ ಮಿಂಚುತ್ತಿರೋ ಭರವಸೆಯ ಕಲಾವಿದೆ ಯಶಸ್ವಿನಿ ಕಾಪ್ಸೆ Yashaswini Kapse. ಇವರ ವಯಸ್ಸು 19, ಆದರೆ ವಯಸ್ಸಿಗೂ ಮೀರಿ ಸಂಗೀತವನ್ನು ಕಲಿತು, Instrument ಸಂಗೀತವನ್ನೂ ಕರಗತ ಮಾಡಿಕೊಂಡಿರೋ ಕ್ರಿಯಾಶೀಲ ಪ್ರತಿಭೆ ಇವರು.

ರಾಗ ಮತ್ತು ಅಭಿನಯದ ಮೋಹವಿರುವ ಇವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಬೆಳೆದದ್ದು, ಕನಸು ಕಂಡಿದ್ದು ಮಹಾನಗರಿ ಬೆಂಗಳೂರಿನಲ್ಲಿ. 5 ನೇ ವಯಸ್ಸಿನಿಂದಲೂ ಸಂಗೀತ ಕಲಿಯುತ್ತ, ಈಗಲೂ ವಿವಿಧ ಗುರುಗಳಿಂದ ಹಿಂದುಸ್ತಾನಿ ಸಂಗೀತ ಕಲಿಯುತ್ತಿರೋ ಕನಸು ಕಂಗಳ ಹುಡುಗಿ. ಇದೀಗ ಇಂಜಿನಿಯರಿಂಗ್ ಪದವಿ ಓದುತ್ತ, ಹಿಂದುಸ್ತಾನಿ ಕ್ಲಾಸಿಕಲ್ Hindustani Classical Music ಹಿನ್ನೆಲೆ ಹಾಡುಗಾರ್ತಿಯಾಗಿ ಸಪ್ತ ಸ್ವರಗಳ ಜೊತೆಯಾಗಿದ್ದಾರೆ. ಸ್ವಂತ ಆಸಕ್ತಿಯಿಂದ ಗಿಟಾರ್ Guitar ನುಡಿಸೋದನ್ನು ಕಲಿತು ಗಿಟಾರ್ ರಾಗಗಳನ್ನೂ ಪ್ರೀತಿಸ್ತಾ ಇದ್ದಾರೆ.

ಹೀಗಿದೆ ಯಶಸ್ವಿನಿ ಸಿನಿ ಜರ್ನಿ

ಜನಪ್ರಿಯ ಬ್ಯಾಂಡ್ ಗಳಲ್ಲಿ ಹಾಡು ಮತ್ತು ಗಿಟಾರ್ ಜೊತೆ ಪ್ರೋಗ್ರಾಂ ನೀಡುತ್ತ ಕೇಳುಗರ ಮೋಡಿ ಮಾಡ್ತಿದ್ದಾರೆ ಯಶಸ್ವಿನಿ. ಹೆಸರಿನಂತೆ ಹೆಜ್ಜೆ ಇಟ್ಟ ಎಲ್ಲ ಕ್ಷೇತ್ರದಲ್ಲೂ ಇವರು ಯಶಸ್ವಿನಿಯೇ. AMC college ನಲ್ಲಿ Information Science Engineering ಓದ್ತಾ ಅಕಾಡೆಮಿಕ್ ಸಾಧನೆಯಲ್ಲೂ ಸಂಗೀತದಷ್ಟೇ ಸ್ಟ್ರಾಂಗ್ ಆಗಿದ್ದಾರೆ. “ಡ್ಯೂಡ್” Dude, “ಸುಡೋಕು” Sudoku ಸಿನಿಮಾದಲ್ಲಿ ನಟಿಸಿ ನಟನೆಯಲ್ಲೂ ಮಿಂಚು ಮೂಡಿಸಿದ್ದಾರೆ upcoming movies.

ಇನ್ನೇನು ತೆರೆಗೆ ಬರಲಿರೋ “ಬೊಂಬುಸವಾರಿ” Bombusavari ಹಾಗೂ “ಕಾಲಘಟ್ಟ” Kalaghatta ಸಿನಿಮಾಗಳಲ್ಲಿ ಇವರ ಧ್ವನಿ ಕಂಪೇರಲಿದೆ.

ವಿವೇಕ್ ಜಂಗ್ಲಿಯವರ “ಮೌನ” Mouna ಎನ್ನುವ ಆಲ್ಬಂ ಸಾಂಗ್ Album song ಸೇರಿದಂತೆ ಹಲವಾರು ಆಲ್ಬಂ ಸಾಂಗ್ ಗಳಿಗೆ ಧ್ವನಿಯಾಗಿದ್ದಾರೆ. “ಅವರು ಯುವ ಸಂಗೀತ ನಿರ್ದೇಶಕ ಪ್ರಣವ್ ಸತೀಶ್ ‘ಜನರಿಂದ ನಾನು ಮೇಲೆ ಬಂದೆ’ ಸಿನಿಮಾದಲ್ಲಿ ಹಾಡು ಕೂಡ ಹಾಡಿದ್ದಾರೆ, ಗಾಯಕಿ ಯಶಸ್ವಿನಿ ಕಾಪ್ಸೆ, ಸಂವೇದನಾತ್ಮಕ ಹಾಗೂ ಅನೇಕ ಹಿಟ್ ಹಾಡುಗಳನ್ನು ಕೊಟ್ಟಿರುವ “ಅಂದೋಂದಿತ್ತು ಕಲಾ” ಚಲನಚಿತ್ರದ ಸಂಗೀತ ನಿರ್ದೇಶಕ ರಾಘವೇಂದ್ರ ವಿ ಅವರ ಜೊತೆ ಕೂಡ ಭವಿಷ್ಯದ ಸ್ವತಂತ್ರ ಹಾಡುಗಳಿಗೆ ಸಹಯೋಗ ನೀಡುತ್ತಿದ್ದಾರೆ.

ಸಾಮಾಜಿಕ ಕಳಕಳಿಯಲ್ಲೂ ಎತ್ತಿದ ಕೈ

ಪ್ರಾಣಿಗಳು, ಬೀದಿ ನಾಯಿಗಳಂದ್ರೆ ಇವರಿಗೆ ಪ್ರೀತಿ, ಸಮಯ ಸಿಕ್ಕಾಗಲೆಲ್ಲಾ ಬೀದಿ ನಾಯಿ ಉಳಿಸುವ ತಂಡಗಳಲ್ಲೂ ಕೆಲಸ ಮಾಡೋದು, ಸಾಮಾಜಿಕವಾಗಿ ಸ್ಪಂದಿಸೋದಂದ್ರೆ ಇವರಿಗಿಷ್ಟ. ಶಿಕ್ಷಣದಲ್ಲೂ ಶ್ರದ್ಧೆ, ಶಿಸ್ತಿನ ಜೊತೆಗೆ ,ಕಠಿಣ ಶ್ರಮ ಹಾಕ್ತಾರೆ ಯಶಸ್ವಿನಿ. ಮಾಡೆಲಿಂಗ್, ಸಂಗೀತ, ಶಿಕ್ಷಣ ಎಲ್ಲದಕ್ಕೂ ಸಮಯ ಹೊಂದಿಸ್ಕೊಂಡು ಕೆಲಸ ಮಾಡೋದು ಇವರಿಗಿಷ್ಟ.
“ಮಕ್ಕಳ ಬೆಳವಣಿಗೆಯನ್ನು ಕೇವಲ ಗ್ಯಾಜೆಟ್‌ಗಳು ಮತ್ತು ಅಂಕಗಳಿಗೆ ಒಪ್ಪಿಸಬಾರದು ಎಂಬುದು ಇತ್ತೀಚಿನ ಪಾಠವಾಗಿದೆ. ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ತಂದೆ ತಾಯಿ ಈ ನಂಬಿಕೆಯಲ್ಲಿದ್ದಾರೆ, ಹಣ ಸಂಪಾದನೆಗೆ ತೊಡಗಿರುವಾಗಲೂ ಮಕ್ಕಳಿಗೆ ಕೇವಲ ವಸ್ತುಗಳು ಮಾತ್ರವಲ್ಲ, ಅವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಪೋಷಕರ ಸಮಯ ಮತ್ತು ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗುತ್ತದೆ”. ಅವಳು ಯುವ ಪೀಳಿಗೆಗೆ ಆದರ್ಶವೂ ಪ್ರೇರಣೆಯೂ ಆಗಿರುವ ವ್ಯಕ್ತಿ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

“ಕೂಲಿ” ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು? ಕೊನೆಗೂ ಸಿಕ್ಕಿತು ಉತ್ತರ

“ಕೂಲಿ” ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು? ಕೊನೆಗೂ ಸಿಕ್ಕಿತು ಉತ್ತರ ಸೂಪರ್ ಸ್ಟಾರ್ ರಜನಿಕಾಂತ್...

“ರೌಡಿಸಂ ಮಾಡಬೇಡಿ” ಎನ್ನುವ ಸಂದೇಶ ನೀಡಲು ಬರ್ತಿದೆ “ಸೂರಿ ಅಣ್ಣ” ಸಿನಿಮಾ: ಏನಿದೆ ಈ ಚಿತ್ರದ ವಿಶೇಷ?

“ರೌಡಿಸಂ ಮಾಡಬೇಡಿ” ಎನ್ನುವ ಸಂದೇಶ ನೀಡಲು ಬರ್ತಿದೆ “ಸೂರಿ ಅಣ್ಣ” ಸಿನಿಮಾ:...

ಸ್ವಾತಂತ್ರ್ಯ ದಿನಾಚರಣೆಯಂದೇ ಸದ್ದು ಮಾಡಲಿದೆ “ದಿ ಡೆವಿಲ್” ಚಿತ್ರದ ಮೊದಲ ಸಾಂಗ್

ಸ್ವಾತಂತ್ರ್ಯ ದಿನಾಚರಣೆಯಂದೇ ಸದ್ದು ಮಾಡಲಿದೆ “ದಿ ಡೆವಿಲ್” ಚಿತ್ರದ ಮೊದಲ ಸಾಂಗ್ “ಇದ್ರೆ...

“ಕೃಷ್ಣಂ ಪ್ರಣಯ ಸಖಿ” ಜೋಡಿಯ ಹೊಸ ಸಿನಿಮಾ ಅನೌನ್ಸ್: ವಿಭಿನ್ನ ಕಥಾ ಹಂದರವಿರೋ ರೊಮ್ಯಾಂಟಿಕ್ ಚಿತ್ರ

“ಕೃಷ್ಣಂ ಪ್ರಣಯ ಸಖಿ” ಜೋಡಿಯ ಹೊಸ ಸಿನಿಮಾ ಅನೌನ್ಸ್: ವಿಭಿನ್ನ ಕಥಾ...