- ಏಪ್ರಿಲ್ 18 ರಂದು ಬಿಡುಗಡೆಯಾಗಲಿದೆ “ಯುದ್ಧಕಾಂಡ”
- ಪವನ್ ಭಟ್ ಆಕ್ಷನ್ ಕಟ್ ಹೇಳಿರುವ, ಕೃಷ್ಣ ಅಜೇಯ್ ರಾವ್ ನಟನೆ, ನಿರ್ಮಾಣವಿರುವ ಚಿತ್ರ
- ಉಸಿರು ಬಿಗಿಹಿಡಿದು ನೋಡಿಸಿಕೊಂಡು ಹೋಗತ್ತೆ ಚಿತ್ರದ ಟ್ರೇಲರ್
ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಶನ್ಸ್ Shri Krishna Arts and Creations ಬ್ಯಾನರ್ ಅಡಿಯಲ್ಲಿ ಕೃಷ್ಣ ಅಜೇಯ್ ರಾವ್ Krishna Ajai Rao ನಿರ್ಮಾಣದ ಚಿತ್ರ “ಯುದ್ಧಕಾಂಡ”. Yuddhakanda ಪವನ್ ಭಟ್ Pavan Bhat ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಮುಖ್ಯಪಾತ್ರಧಾರಿಯಾಗಿದ್ದಾರೆ ನಿರ್ಮಾಪಕ ಕೃಷ್ಣ ಅಜೇಯ್ ರಾವ್. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಅನ್ನು ನಟ ರವಿಚಂದ್ರನ್ Ravichandran ಶಂಖ ಊದುವ ಮೂಲಕ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭಹಾರೈಸಿದ್ದಾರೆ. ಎ2 ಮ್ಯೂಸಿಕ್ A2 Music ಚಾನಲ್ ನಲ್ಲಿ ಬಿಡುಗಡೆಯಾಗಿರುವ ಟ್ರೇಲರ್ ಉಸಿರು ಬಿಗಿಹಿಡಿದುಕೊಂಡು ಮುಂದೇನಾಗತ್ತೆ ಎಂದು ನೋಡುವಂತೆ ಕುತೂಹಲಕ್ಕೆ ಕಾರಣವಾಗ್ತಿದೆ.
ನ್ಯಾಯಾಂಗ ವ್ಯವಸ್ಥೆಯ “ಯುದ್ಧಕಾಂಡ”
ಶೋಷಣೆಗೆ ಒಳಗಾದ ಒಬ್ಬಳು ಹೆಣ್ಣಿಗೆ ಸರಿಯಾದ ಸಮಯಕ್ಕೆ ನ್ಯಾಯ ಸಿಗದಾದಾಗ ಅದು ಇನ್ನೊಂದು ಅಪರಾಧಕ್ಕೆ ಕಾರಣ ಆಗತ್ತೆ. ಹಾಗೇ ನ್ಯಾಯ ಸಿಗುವ ಕಾಲಕ್ಕೆ ನ್ಯಾಯಕ್ಕೆ ಹೋರಾಡಿದ ವ್ಯಕ್ತಿಯೇ ಇಲ್ಲದಿರುವ ಪರಿಸ್ಥಿತಿ. ಹೀಗೆಲ್ಲಾ ನ್ಯಾಯ ಅನ್ಯಾಯಗಳ, ಕಾನೂನು ವ್ಯವಸ್ಥೆಗಳ ಸುತ್ತ ಸುತ್ತತ್ತೆ ಯುದ್ಧಕಾಂಡದ ಕಥೆ. ಅರ್ಚನಾ ಜೋಯ್ಸ್, ಪ್ರಕಾಶ್ ಬೆಳವಾಡಿ Prakash Belavadi ಮುಂತಾದವರು ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ಶರ್ಮ ಸಿನಿಮಾಟೋಗ್ರಫಿ, ಹೇಂಮತ್ ಜೋಯ್ಸ್, ಕೆ.ಬಿ.ಪ್ರವೀಣ್ ಸಂಗೀತ ಚಿತ್ರಕ್ಕಿದ್ದು, ಇದೇ ಏಪ್ರಿಲ್ 18 ರಂದು ಚಿತ್ರ ತೆರೆಮೇಲೆ ಬರಲಿದೆ. ಬಾಕ್ಸಾಫೀಸ್ ಯುದ್ಧದಲ್ಲಿ ಯುದ್ಧಕಾಂಡ ಗೆಲ್ಲುತ್ತದೆಯೋ ಕಾದು ನೋಡಬೇಕಿದೆ.