“ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ

Date:

  • “ಲವ್ ಯು” ಮೂಲಕ “ಎಐ” ಕ್ರಾಂತಿ ಮಾಡಲಿದೆ ಕನ್ನಡ ಚಿತ್ರರಂಗ
  • ಕನ್ನಡದ “ಲವ್ ಯು” ಸಿನಿಮಾ ವಿಶ್ವದ ಮೊದಲ ಸಂಪೂರ್ಣವಾಗಿ AI-ಆಧಾರಿತ ಸಿನಿಮಾ ಆಗಲಿದೆ
  • ನಿರ್ದೇಶಕ, ನಿರ್ಮಾಪಕ, AI ಇನ್ಸ್ಟ್ರಕ್ಟರ್ ಹಾಗೂ ಪಿಆರ್ಓ ಬಿಟ್ಟು ಬೇರೆ ಯಾರೂ ನಿಜವಾದ ವ್ಯಕ್ತಿಗಳು ಈ ಚಿತ್ರದಲ್ಲಿಲ್ಲ

ಜಾಗತಿಕ ಚಲನಚಿತ್ರೋದ್ಯಮದಲ್ಲಿ ಹೊಸಕ್ರಾಂತಿ ಮಾಡುವ ಮೂಲಕ ಮೈಲಿಗಲ್ಲನ್ನು ಸೃಷ್ಟಿಸಲು ತಯಾರಾಗಿದೆ ಕನ್ನಡ ಚಿತ್ರರಂಗ. ಸಂಪೂರ್ಣವಾಗಿ ಎಐ AI, ಕೃತಕಬುದ್ಧಿಮತ್ತೆಯನ್ನು ಬಳಸಿಕೊಂಡು ವಿಶ್ವದ ಮೊದಲ ಸಿನಿಮಾವನ್ನು ತಯಾರಿಸುತ್ತಿದೆ ಕನ್ನಡ ಚಿತ್ರರಂಗ. “ಲವ್ ಯು” Love You ಸಿನಿಮಾದಲ್ಲಿ ಆಶ್ಚರ್ಯವೆಂದರೆ ನಿರ್ದೇಶಕ, ನಿರ್ಮಾಪಕ, AI ಇನ್‌ಸ್ಟ್ರಕ್ಟರ್ ಹಾಗೂ ಪಿಆರ್‌ಓ ಬಿಟ್ಟು ಬೇರೆ ಯಾರೂ ನಿಜವಾದ ವ್ಯಕ್ತಿಗಳು ಇಲ್ಲ. ಎಸ್ ನರಸಿಂಹಮೂರ್ತಿ S. Narasimha Murthy ಅವರು ಈ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಅವರೇ ಹೇಳಿದಂತೆ, ಇದು ಒಂದು ಡಿಜಿಟಲ್ ಅದ್ಭುತ. ಸಂಗೀತ, ಹಾಡುಗಳು, ಲೋಕೇಶನ್ಸ್ ಕೂಡ AIನಲ್ಲೇ ಮಾಡಲಾಗಿದ್ದು, 95 ನಿಮಿಷಗಳ ಈ ಸಿನಿಮಾ ಸೆನ್ಸಾರ್ ಮುಗಿಸಿ ಇದೀಗ ಬಿಡುಗಡೆಗೆ ಸಜ್ಜಾಗಿದೆ.

ಎಲ್ಲವೂ AIಮಯ

“ಪ್ರತಿಯೊಂದು ಫ್ರೇಮ್, ಹಾಡು, ಸಂಭಾಷಣೆ, ಪಾತ್ರದ ಅನಿಮೇಷನ್, ಲಿಪ್-ಸಿಂಕ್ ಮತ್ತು ಕ್ಯಾಮೆರಾ ಚಲನೆಯನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯಿಂದ ನಿರ್ಮಿಸಲಾಗಿದೆ. ಕೋಡ್ ಮತ್ತು ಸೃಜನಶೀಲತೆಯ ಹಿಂದೆ AI ಎಂಜಿನಿಯರ್ ನೂತನ್ ಇದ್ದಾರೆ. ಸುಂದರ್ ರಾಜ್ ಗುಂಡೂರಾವ್ ಅವರು ಇಡೀ ಪ್ರಾಜೆಕ್ಟ್ ನ ನೇತೃತ್ವ ವಹಿಸಿದ್ದಾರೆ. ಇಡೀ ತಂಡ ಕ್ರಿಯೇಟಿವ್ ಆಗಿ ಕೆಲಸ ಮಾಡಿದೆ” ಎಂದು ಸಿನಿಮಾದ ನಿರ್ದೇಶಕ ನರಸಿಂಹಮೂರ್ತಿ ಹೇಳಿದ್ದಾರೆ. ಸದ್ಯದಲ್ಲೇ ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದ್ದು ದಿನಾಂಕ ಇನ್ನಷ್ಟೇ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

“ಕೂಲಿ” ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು? ಕೊನೆಗೂ ಸಿಕ್ಕಿತು ಉತ್ತರ

“ಕೂಲಿ” ಸಿನಿಮಾದಲ್ಲಿ ಉಪೇಂದ್ರ ಪಾತ್ರವೇನು? ಕೊನೆಗೂ ಸಿಕ್ಕಿತು ಉತ್ತರ ಸೂಪರ್ ಸ್ಟಾರ್ ರಜನಿಕಾಂತ್...

“ರೌಡಿಸಂ ಮಾಡಬೇಡಿ” ಎನ್ನುವ ಸಂದೇಶ ನೀಡಲು ಬರ್ತಿದೆ “ಸೂರಿ ಅಣ್ಣ” ಸಿನಿಮಾ: ಏನಿದೆ ಈ ಚಿತ್ರದ ವಿಶೇಷ?

“ರೌಡಿಸಂ ಮಾಡಬೇಡಿ” ಎನ್ನುವ ಸಂದೇಶ ನೀಡಲು ಬರ್ತಿದೆ “ಸೂರಿ ಅಣ್ಣ” ಸಿನಿಮಾ:...

ಸ್ವಾತಂತ್ರ್ಯ ದಿನಾಚರಣೆಯಂದೇ ಸದ್ದು ಮಾಡಲಿದೆ “ದಿ ಡೆವಿಲ್” ಚಿತ್ರದ ಮೊದಲ ಸಾಂಗ್

ಸ್ವಾತಂತ್ರ್ಯ ದಿನಾಚರಣೆಯಂದೇ ಸದ್ದು ಮಾಡಲಿದೆ “ದಿ ಡೆವಿಲ್” ಚಿತ್ರದ ಮೊದಲ ಸಾಂಗ್ “ಇದ್ರೆ...

ರಾಗಕೆ ಸ್ವರವಾಗಿ, ನಟನೆಗೂ ಜೀವ ನೀಡಿದ “ಯಶಸ್ವಿನಿ”

ರಾಗಕೆ ಸ್ವರವಾಗಿ, ನಟನೆಗೂ ಜೀವ ನೀಡಿದ "ಯಶಸ್ವಿನಿ" ಸಂಗೀತದಲ್ಲೂ, ಅಭಿನಯದಲ್ಲೂ ಯಶಸ್ವಿ “ಯಶಸ್ಸಿನಿ...