- “ಕರಾವಳಿ” ಸಿನಿಮಾದ ಟೀಸರ್ ನೋಡಿ ಪ್ರೇಕ್ಷಕರು ಸಖತ್ ಖುಷ್: ಏನ್ ಸ್ಪೆಷಲ್ ಇದೆ ಟೀಸರ್ ನಲ್ಲಿ?
- ಈ ಸಿನಿಮಾ ತುಳುನಾಡಿನ ಕಂಬಳವನ್ನು ಆಧರಿಸಿದೆ ಎನ್ನುವ ಕುತೂಹಲದ ಸುದ್ದಿ ಇದೆ.
- ಪ್ರಜ್ವಲ್ ದೇವರಾಜ್ ನಟಿಸಿ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ ಚಿತ್ರ
ಕೆಲವು ಸಮಯಗಳಿಂದ ನಟ ಪ್ರಜ್ವಲ್ ದೇವರಾಜ್ Prajwal Devaraj ನಟಿಸಿ ಗುರುದತ್ ಗಾಣಿಗ Gurudath Ganiga ನಿರ್ದೇಶನ ಮಾಡುತ್ತಿರುವ “ಕರಾವಳಿ” ಚಿತ್ರ ಸುದ್ದಿಯಲ್ಲಿದೆ. ಈ ಸಿನಿಮಾ ತುಳುನಾಡಿನ ಕಂಬಳವನ್ನು Kambala ಆಧರಿಸಿದೆ ಎನ್ನುವ ಕುತೂಹಲದ ಸುದ್ದಿ ಒಂದೆಡೆಯಾದರೆ, ಸಿನಿಮಾದಲ್ಲಿ ಹಿಂದೆಂದೂ ಕಾಣದಂತಹ ಅಬ್ಬರ ಇರಲಿದೆ ಎನ್ನುವ ಸುದ್ದಿ ಇನ್ನೊಂದೆಡೆ.
ತಂಡಕ್ಕೆ ಮತ್ತೊಬ್ಬ ಪವರ್ಫುಲ್ ನಟ
ಇದೀಗ ಅಬ್ಬರಿಸುವ ಸರದಿ ಸಿನಿಮಾದ ಟೀಸರ್ ನದ್ದು. ಹೌದು, “ಕರಾವಳಿ” ಸಿನಿಮಾ ಈಗ ಹೊಸತೊಂದು ಅಬ್ಬರ ದ ಟೀಸರ್ ಬಿಟ್ಟು ಸಂಚಲನ ಉಂಟು ಮಾಡಿದೆ. ಈ ಹಿಂದೆ ಬಿಟ್ಟಿದ್ದ ಫಸ್ಟ್ ಲುಕ್ ನಲ್ಲಿ ಪ್ರಜ್ವಲ್ ದೇವರಾಜ್ ಜೊತೆಗೆ ಮಿತ್ರ, ರಮೇಶ್ ಇಂದಿರಾ ಅವರ ಪಾತ್ರಗಳು ಸಖತ್ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ತಂಡಕ್ಕೆ ಮತ್ತೊಬ್ಬ ಪವರ್ಫುಲ್ ನಟ ಸೇರಿಕೊಂಡಿದ್ದಾರೆ, ಅವರೇ ರಾಜ್ ಬಿ ಶೆಟ್ಟಿ. Raj B Shetty ಚಿತ್ರದ ಟೀಸರ್ ನಲ್ಲಿ ನಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದು ಪ್ರೇಕ್ಷಕರ ಅಚ್ಚರಿ ಮತ್ತು ಖುಷಿಗೆ ಕಾರಣವಾಗಿದೆ.
ಟೀಸರ್ ನಲ್ಲಿ ರಾಜ್ ಬಿ ಶೆಟ್ಟಿ, ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಟೀಸರ್ ನಲ್ಲಿ ರಾಜ್ ಬಿ ಶೆಟ್ಟಿ ಅವರ ತಲೆಯಲ್ಲಿ ಕೂದಲಿದೆ. ಅವರ ಎಂದಿನ ಬೊಕ್ಕ ತಲೆ ಇಲ್ಲಿಲ್ಲ . ಜೊತೆಗೆ ಅವರು ಕಂಬಳದ ಕೋಣಗಳನ್ನು ಹಿಡಿದುಕೊಂಡು, ಹೋಗುವ ದೃಶ್ಯವಿದೆ. ಈ ದೃಶ್ಯಕ್ಕೆ ಅವರ ಅಭಿಮಾನಿಗಳು ಥ್ರಿಲ್ಲ್ ಆಗಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಹಿಂಟ್ ನೀಡಿದೆ ಈ ಟೀಸರ್.
ಟೀಸರ್ನ ಹಿನ್ನೆಲೆ ಸಂಗೀತ ಮೋಹಕವಾಗಿದೆ. “ಸಾಯುವ ಮೊದಲು ರಥಬೀದಿಯಲ್ಲಿ ಕಂಬಳದ ಕೋಣಗಳ ಮೆರವಣಿಗೆ ಮಾಡಬೇಕು” ಎಂದು ದುಃಖದಿಂದ ಆಗ್ರಹಿಸುತ್ತಿರುವ ಹಿನ್ನೆಲೆ ಧ್ವನಿ ಟೀಸರ್ನಲ್ಲಿ ಅಪ್ಪಳಿಸಿದೆ. “ಕರಾವಳಿ” ಚಿತ್ರ, ಕಂಬಳದ ಅಭಿಮಾನಿಗಳಿಗೂ ಇಷ್ಟವಾಗುವ ಚಿತ್ರವಾಗಲಿದೆ ಎನ್ನುವುದು ಟೀಸರ್ ನಿಂದ ಸಾಬೀತಾಗಿದೆ.