- ಸೈಮಾ ಪ್ರಶಸ್ತಿ: ಕಿಚ್ಚ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿ: ಇನ್ನೂ ಯಾರಿಗೆಲ್ಲಾ ಪ್ರಶಸ್ತಿಯ ಗರಿ?
- ಪ್ರಶಸ್ತಿ ಬಾಚಿ ಸದ್ದು ಮಾಡಿದ ಕನ್ನಡ ಸಿನಿ ತಾರೆಯರು
- ಕನ್ನಡ ಚಿತ್ರಗಳಿಗೆ ಸೈಮಾ ಮನ್ನಣೆ
ಸೈಮಾ ಪ್ರಶಸ್ತಿಯಲ್ಲಿSIIMA Awards ಕನ್ನಡ ಚಿತ್ರಗಳು ಮಿಂಚಿದ್ದು ಕನ್ನಡದ ನಟ-ನಟಿಯರೂ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಸಿನಿಮಾ ರಂಗದ ಪ್ರತಿಷ್ಟಿತ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮ್ಯೂವಿ ಅವಾರ್ಡ್ SIIMA ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಬಾರಿ ಕಿಚ್ಚ ಸುದೀಪ್ Kiccha Sudeep ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಅದೂ “ಮ್ಯಾಕ್ಸ್” Max ಚಿತ್ರದಲ್ಲಿನ ನಟನೆಗಾಗಿ. ಇನ್ನೂ, “ಯುಐ” UI ಸೃಷ್ಟಿಕರ್ತ ಉಪೇಂದ್ರ Actor Upendra “ಅತ್ಯುತ್ತಮ ನಿರ್ದೇಶಕ” ಪ್ರಶಸ್ತಿ ದೊರೆತಿದ್ದು ಇನ್ನೂ ಅನೇಕ ಕನ್ನಡದ ನಟ ನಟಿಯರಿಗೆ, ಸಂಗೀತ ನಿರ್ದೇಶಕರಿಗೆ, ಛಾಯಾಗ್ರಾಹಕರಿಗೆ, ಗಾಯಕರಿಗೂ ಪ್ರಶಸ್ತಿ ದೊರೆತಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮನ್ನಣೆಯೂ ಸಿಕ್ಕಂತಾಗಿದೆ
ಯಾವ ಚಿತ್ರದ ನಟನೆಗೆ ಯಾರಿಗೆಲ್ಲಾ ಪ್ರಶಸ್ತಿ?
ಅತ್ಯುತ್ತಮ ನಟ – ಕಿಚ್ಚ ಸುದೀಪ್ (ಚಿತ್ರ: ಮ್ಯಾಕ್ಸ್)
ಅತ್ಯುತ್ತಮ ನಟಿ – ಆಶಿಕಾ ರಂಗನಾಥ್ (ಚಿತ್ರ: O2)
ಅತ್ಯುತ್ತಮ ನಟ (ಕ್ರಿಟಿಕ್ಸ್) – ದುನಿಯಾ ವಿಜಯ್ (ಚಿತ್ರ: ಭೀಮ)
ಅತ್ಯುತ್ತಮ ಚಿತ್ರ – ಕೃಷ್ಣಂ ಪ್ರಣಯ ಸಖಿ
ಅತ್ಯುತ್ತಮ ನಿರ್ದೇಶಕ – ಉಪೇಂದ್ರ (ಚಿತ್ರ: ಯುಐ)
ಅತ್ಯುತ್ತಮ ಸಂಗೀತ ನಿರ್ದೇಶನ – ಬಿ ಅಜನೀಶ್ ಲೋಕನಾಥ್ (ಚಿತ್ರ: ಮ್ಯಾಕ್ಸ್)
ಅತ್ಯುತ್ತಮ ಹಾಸ್ಯ ನಟ – ಜ್ಯಾಕ್ ಸಿಂಗಂ (ಚಿತ್ರ: ಭೀಮ)
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ – ಸಂದೀಪ್ ಸುಂಕದ್ (ಚಿತ್ರ: ಶಾಕಾಹಾರಿ)
ಅತ್ಯುತ್ತಮ ಉದಯೋನ್ಮುಖ ನಟ – ಸಮರ್ಜಿತ್ ಲಂಕೇಶ್ (ಚಿತ್ರ: ಗೌರಿ)
ಭರವಸೆಯ ನವ ನಟಿ – ಸಾನ್ಯ ಅಯ್ಯರ್ (ಚಿತ್ರ: ಗೌರಿ)
ಅತ್ಯುತ್ತಮ ಉದಯೋನ್ಮುಖ ನಟಿ – ಅಂಕಿತಾ ಅಮರ್
ಸಾಂಗ್ ಡಿಸೈನ್ ಆಫ್ ದಿ ಇಯರ್ – ವಿ ಹರಿಕೃಷ್ಣ
ಅತ್ಯುತ್ತಮ ಛಾಯಾಗ್ರಾಹಕ – ಶ್ರೀವತ್ಸನ್ ಸೆಲ್ವರಾಜನ್ (ಚಿತ್ರ: ಇಬ್ಬನಿ ತಬ್ಬಿದ ಇಳೆಯಲಿ)
ಅತ್ಯುತ್ತಮ ಗಾಯಕಿ – ಐಶ್ವರ್ಯಾ ರಂಗರಾಜನ್
ಅತ್ಯುತ್ತಮ ಗಾಯಕ – ಜಸ್ಕರಣ್