- ಡಾ. ಕರ್ಣ “ಕಿರಣ್ ರಾಜ್” ಅವ್ರ ಕುರಿತು ಇಂಟೆರೆಸ್ಟಿಂಗ್ ವಿಷಯ ಇಲ್ಲಿದೆ ನೋಡಿ
- ಕಿರಣ್ ರಾಜ್ ಮದ್ವೆ ಆಗೋ ಹುಡ್ಗಿ ಹೀಗಿರ್ಬೇಕು ಅಂತಾರೆ
- ಅಜ್ಜಿಗೋಸ್ಕರ ಸೀರಿಯಲ್ ಮಾಡ್ತಾರೆ “ಕಿರಣ್”
- ಕರ್ಣ ಸೀರಿಯಲ್ ರಿಲೀಸ್ ಲೇಟ್ ಆಗಲು ನಿಜವಾದ ಕಾರಣ ಏನು?
ತಂದೆ ಆರ್ಮಿಯಲ್ಲಿ ಇದ್ದಿದ್ರಿಂದ ಕಿರಣ್ ರಾಜ್ Kiran Raj ಅವರ ಬಾಲ್ಯ ಕಳೆದದ್ದು ಮಧ್ಯಪ್ರದೇಶದಲ್ಲಿ. ಆರ್ಮಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿದ ಇವರು ನಂತರ ಮೈಸೂರಿನಲ್ಲಿ ಶಿಕ್ಷಣ ಮುಂದುವರೆಸಿದರು. ಫಿಲ್ಮ್ ಮೇಕಿಂಗ್ ಡಿಗ್ರೀ ಮುಂಬೈನಲ್ಲಿ ಪೂರೈಸಿದ್ರು. ಶಾಲಾದಿನಗಳಿಂದಲೂ ಆಸಕ್ತಿ ಇಲ್ಲದ ವಿಷಯದ ಕುರಿತು ಗಮನ ಕೊಡ್ತಿರ್ಲಿಲ್ಲ. ತಂದೆ ತಾಯಿಗೆ ಡಾಕ್ಟರ್ ಆಗ್ಬೇಕು ಅನ್ನೋ ಆಸೆ ಇತ್ತು. ಈಗ ಡಾ.ಕರ್ಣ ಮೂಲಕ ಅವರ ಆಸೆ ಪೂರೈಸ್ತಿದಾರಂತೆ ಕಿರಣ್ ರಾಜ್.
ಅಜ್ಜಿಗೋಸ್ಕರ ಸೀರಿಯಲ್ ಮಾಡ್ತಾರೆ “ಕಿರಣ್”
ಊರಲ್ಲಿರೋ ಕಿರಣ್ ರಾಜ್ ಅವ್ರ ಅಜ್ಜಿಗೆ ವಯಸ್ಸಾಗಿರೋದ್ರಿಂದ ಸಿನಿಮಾ ಎಲ್ಲಾ ನೋಡ್ಲಿಕ್ಕೆ ಕಷ್ಟ ಆಗತ್ತಂತೆ. ಆದ್ರೆ ಟಿವಿಯಲ್ಲಿ ಪ್ರತಿದಿನ ಅರ್ಧ ಗಂಟೆ ಬರೋ ಧಾರಾವಾಹಿ ನೋಡೋದು ಅಜ್ಜಿಗೆ ಖುಷಿ ಅಂತೆ. ಕನ್ನಡತಿ Kannadathi ಧಾರಾವಾಹಿ ಮುಗಿದ ನಂತರ ಅಜ್ಜಿ ಈಗ ನಿನ್ನನ್ನು ಟಿವಿ ಲಿ ನೋಡ್ಲಿಕ್ಕೇ ಆಗಲ್ಲ ಅಂತ ಹೇಳಿದ್ರಂತೆ, ಅಲ್ಲದೇ ಕರ್ಣ Karna ಧಾರಾವಾಹಿಯಲ್ಲಿ ಉತ್ತಮ ಅವಕಾಶನೂ ಅದೇ ಸಮಯದಲ್ಲಿ ಸಿಕ್ಕಿದ್ರಿಂದ ಒಪ್ಕೊಂಡ್ರಂತೆ. “ದಿನಾ ಎಲ್ಲರ ಮನೆಗೂ ಹೋಗ್ಬೋದು ಸೀರಿಯಲ್ ಮೂಲಕ” ಅಂತ ಖುಷಿ ಪಡ್ತಾರೆ ಕಿರಣ್.
ಕರ್ಣ ಸೀರಿಯಲ್ ರಿಲೀಸ್ ಲೇಟ್ ಆಗಲು ಕಾರಣ ಏನು?
ಸೀರಿಯಲ್ ಪ್ರಾರಂಭದ ದಿನಾಂಕ ಘೋಷಣೆಯಾಗಿ ಪ್ರೋಮೋ ಎಲ್ಲಾ ಬಿಡುಗಡೆಯಾದ ನಂತರ ಘೋಷಣೆಯಾದ ದಿನದಂದು ಸೀರಿಯಲ್ ಪ್ರಾರಂಭವಾಗಲಿಲ್ಲ. ಇದಕ್ಕೆ ಕೆಲವು ಲೀಗಲ್ ಸಮಸ್ಯೆಗಳು ಉಂಟಾಗಿತ್ತು. ಕರ್ಣ ಸೀರಿಯಲ್ ನ ಮುಖ್ಯ ನಟಿ ಭವ್ಯಾ ಗೌಡ Bhavya Gowda ಅವರ ಬೇರೆ ಪ್ರಾಜೆಕ್ಟ್ ನ ಅಗ್ರೀಮೆಂಟ್ ಅವಧಿ ಮುಗಿದಿರಲಿಲ್ಲ. ಹಾಗಾಗಿ ಅಲ್ಲಿ ಸ್ವಲ್ಪ ಗೊಂದಲಗಳಿದ್ದವು. ಅದು ಮುಗಿದ ನಂತರ ಧಾರಾವಾಹಿ ಪ್ರಾರಂಭವಾಯಿತು ಅಂತಾರೆ ಕಿರಣ್ ರಾಜ್.
ಕಿರಣ್ ರಾಜ್ ಮದ್ವೆ ಆಗೋ ಹುಡ್ಗಿ ಹೀಗಿರ್ಬೇಕು ಅಂತಾರೆ
ಲಕ್ಷಣವಾಗಿ ಸಂಸ್ಕಾರವಂತೆಯಾಗಿರೋ, ಸಂಬಂಧಗಳ ಅರಿವು ಇರುವಂತ ಹುಡ್ಗಿ ಬೇಕು ಅಂತ ಇಚ್ಛಿಸ್ತಾರೆ ಕಿರಣ್ ರಾಜ್. ಲವ್ ಮ್ಯಾರೇಜ್, ಅರೇಂಜ್ ಮ್ಯಾರೇಜ್ ಇದ್ಯಾವ್ದ್ರ ಬಗ್ಗೆನೂ ಯೋಚನೆ ಇರದ ಇವ್ರಿಗೆ ಮೈಲೇಜ್ ಕೊಡುವಂತದ್ದಾಗಿದ್ರಾಯ್ತಂತೆ.
ಟ್ರೆಂಡಿಂಗ್ ನಲ್ಲಿರೋದು ಅಂದ್ರೆ ಕಿರಣ್ ಪ್ರಕಾರ ಏನು?
Trend is something like which we like at that particular moment of time. ಯಾಕಂದ್ರೆ ಅದು ಬದಲಾವಣೆ ಆಗ್ತಾನೇ ಇರತ್ತೆ. ಇದು ಟ್ರೆಂಡಿಂಗ್ ಆಗತ್ತೆ ಯಾಕಂದ್ರೆ ಎಲ್ಲರ ಪರಿಶ್ರಮನೂ ಇದರ ಹಿಂದೆ ಇರತ್ತೆ. ತೆರೆ ಮೇಲೆ ಕಾಣುವವರು ನಾಲ್ಕೈದು ಜನ ಇರ್ಬೋದು ಆದ್ರೆ ಆ ಯಶಸ್ಸಿನ ಹಿಂದಿನ ಹಲವು ಕಾಣದ ಮುಖಗಳಿರುತ್ತವೆ. ಪ್ರತಿಯೊಬ್ಬರು ಅಷ್ಟೇ ಸೀರಿಯಸ್ ಆಗಿ, ಪ್ರಾಮಾಣಿಕವಾಗಿ ಪ್ರಯತ್ನ, ಕೆಲಸ ಮಾಡೋದ್ರಿಂದ ಫಲಿತಾಂಶ ಚೆನ್ನಾಗಿರತ್ತೆ.