- “ಬಿಗ್ ಬಾಸ್” ಮೂಲಕ ಎಲ್ಲರನ್ನೂ ಅತಿಯಾಗಿ ರಂಜಿಸ್ತಿರೋ ರಕ್ಷಿತಾ ಯಾರು? ಅವ್ರ ಕಥೆ ಏನು ಇಲ್ಲಿದೆ ನೋಡಿ
- ಅತಿಯಾಗಿ ಟ್ರೋಲ್ ಆಗ್ತಿರೋ ಬಿಗ್ ಬಾಸ್ ಕಂಟೆಸ್ಟೆಂಟ್ ರಕ್ಷಿತಾ ಶೆಟ್ಟಿ
- ನ್ಯಾಷನಲ್ ಲೆವೆಲ್ ಅಥ್ಲೀಟ್ ರಕ್ಷಿತಾ ಅವ್ರ ಕನ್ನಡ ಭಾಷೆ ಹೀಗಿರುವುದರ ಹಿಂದಿನ ಕಾರಣ ಏನು
ಮೂಲತಃ ಕರ್ನಾಟಕದ ಮಂಗಳೂರಿನವರಾದ ರಕ್ಷಿತಾ ಶೆಟ್ಟಿ Rakshitha Shetty ಪೋಷಕರು ಉದ್ಯೋಗದ ಕಾರಣದಿಂದಾಗಿ ಹಲವಾರು ವರ್ಷಗಳಿಂದ ಮುಂಬೈನಲ್ಲಿ ಸೆಟಲ್ ಆಗಿದಾರೆ. ಮಂಗಳೂರಿನಲ್ಲಿ ಹುಟ್ಟಿದ್ರೂ ರಕ್ಷಿತ ಬೆಳೆದದ್ದೆಲ್ಲಾ ಮುಂಬೈನಲ್ಲಂತೆ. ಹಾಗಾಗಿ ಮನೆ ಭಾಷೆ ತುಳು ಬಿಟ್ರೆ ಅವ್ರಿಗೆ ಹಿಂದಿ, ಮರಾಠಿ, ಇಂಗ್ಲಿಷ್ ಮಾತ್ರ ಜಾಸ್ತಿ ಟಚ್. ಆದ್ರೂ ರಕ್ಷಿತಾ ಕನ್ನಡದಲ್ಲಿ ವ್ಲಾಗ್ ಮಾಡ್ತಾರೆ. ಹಿಂದಿ ಮಿಶ್ರಿತ ತುಳು ವ್ಲಾಗ್ ಮೂಲಕ ಜಾಸ್ತಿ ಚಿರಪರಿಚಿತರಾದ್ರೂ ಅವ್ರಿಗೆ ಕನ್ನಡ ಕಲಿಯೋ ಆಸೆ. ಹಾಗಾಗಿ ಕನ್ನಡ ಕಲೀತಿದಾರೆ. ನಿತ್ಯದ ಜೀವನದಲ್ಲಾಗುವ ಚಿತ್ರಣವನ್ನೇ ವೀಡಿಯೋ ಮೂಲಕ ಯಥಾವತ್ತಾಗಿ ಜನರೆದುರು ಇಡುವುದು ಇವರ ಶೈಲಿ.
ವ್ಲಾಗ್ ಪ್ರಾರಂಭಿಸಿದ್ದರ ಹಿಂದಿನ ಕಥೆ
ಕೊರೋನಾ ಕಾಲದಲ್ಲಿ ಮುಂಬೈನಿಂದ ತಮ್ಮ ಊರಾದ ದಕ್ಷಿಣ ಕನ್ನಡಕ್ಕೆ ಬಂದು ಸ್ವಲ್ಪ ದಿನ ಇದ್ದು, ಪುನಃ ಹಿಂದಿರುಗಿದ ನಂತರ ಬ್ಲಾಂಕ್ ನೆಸ್ ಫೀಲ್ ಆಗಕ್ಕೆ ಪ್ರಾರಂಭ ಆಯ್ತಂತೆ ರಕ್ಷಿತಾ ಅವ್ರಿಗೆ. ಮುಂಬೈನಲ್ಲಿ ಯಾವಾಗಲೂಮುಚ್ಚಿರುವ ಮನೆಯ ಬಾಗಿಲು, ಅಕ್ಕ ಪಕ್ಕದವರೊಡನೆ ಯಾವುದೇ ಒಡನಾಟ ಇಲ್ಲ. ಆದರೆ ಊರಿನಲ್ಲಿ ಇದರ ತದ್ವಿರುದ್ಧ ಸ್ಥಿತಿ ಖುಷಿ ಕೊಟ್ಟಿತ್ತಂತೆ. ಊರಿನ ನೆನಪಿನ ಕಂಟೆಂಟ್ ಇವ್ರ ಮೊದಲನೇ ವೀಡಿಯೋ ಅಂತೆ. ಅದು ವೈರಲ್ ಆಗ್ಬೋದು ಅನ್ನೋ ಯೋಚ್ನೆನೂ ಇಲ್ದೇ ಮಾಡಿದ್ದ ಕಂಟೆಂಟ್ ಫುಲ್ ವೈರಲ್ ಆಗೋಯ್ತಂತೆ. ಯಾವುದೇ ಫಿಲ್ಟರ್ ಇಲ್ದೇ ಇದ್ದಿದ್ದನ್ನು ಇದ್ದ ಹಾಗೇ ಮುಗ್ಧವಾಗಿ ಹೇಳೋದೇ ಇವ್ರ ಸ್ಪೆಷಾಲಿಟಿ. “ಎಲ್ಲಾ ಭಾಷೆಯ ಜನರನ್ನೂ ನಾನು ಕನೆಕ್ಟ್ ಆಗ್ಬೇಕು ಅಂತ ನಾನು ತುಳು, ಕನ್ನಡ, ಹಿಂದಿ ಮೂರೂ ಭಾಷೆಗಳಲ್ಲಿ ವ್ಲಾಗ್ ಮಾಡ್ತೀನಿ. ಅಲ್ದೇ ನಾನು ಎಡಿಟ್ ಕೂಡಾ ಮಾಡ್ದೇ ಹಾಗೇ ವೀಡಿಯೋ ಹಾಗ್ತೀನಿ.” ಹಾಗಾಗಿ ಇವರ ಹಲವು ವೀಡಿಯೋಗಳು ಟ್ರೋಲ್‌ಗೆ ಒಳಗಾಗಿದೆ. ಆದರೆ ಇದಾವುದಕ್ಕೂ ಈಕೆ ತಲೆಕೆಡಿಸಿಕೊಳ್ಳದ ಇವರು ಎಲ್ಲವನ್ನೂ ಪಾಸಿಟಿವ್ ಆಗಿಯೇ ಸ್ವೀಕರಿಸಿ ಮುನ್ನಡೆಯುತ್ತಿದ್ದಾರೆ.
ಬಲೆ ಬಲೆ ಗಯ್ಸ್ ಫೇಮಸ್ ರಕ್ಷಿತಾಗೆ ಮದ್ವೆ ಆಗೋ ಹುಡ್ಗ ಹೀಗಿರ್ಬೇಕಂತೆ
ಪಾನಿಪುರಿ ಚೈಲ್ಡ್ ಹುಡ್ ಫೇವರಿಟ್ ಅನ್ನೋ ರಕ್ಷಿತಾಗೆ ಸಣ್ಣ ಹೋಟೆಲ್ ಸ್ಟಾರ್ಟ್ ಮಾಡಿ ತನ್ನ ಕೈಯಾರೆ ಅಡಿಗೆ ಮಾಡಿ ಬಡಿಸೋ ಪ್ಲಾನ್ ಅಂತೆ. ಮದ್ವೆ ಬಗ್ಗೆ ಮಾತಾಡೋ ಹೀಗೆ ಹೇಳ್ತಾರೆ. ಇವ್ರ ತರನೇ ಇರೋ ಹುಡ್ಗ ಬೇಡ್ವಂತೆ. ಹಾಗೇ ತುಂಬಾ ಮಾತಾಡದೇ ಇರೋ ಹುಡ್ಗ ಕೂಡಾ ಬೇಡ್ವಂತೆ. ಯಾವ ಊರಿನ, ದೇಶದ ಹುಡ್ಗ ಆದ್ರೂ ತೊಂದ್ರೆ ಇಲ್ಲ. ಹುಡ್ಗ ಸಿಕ್ಕಿದ್ರೆ ಈ ಕ್ಷಣದಲ್ಲೇ ಮದ್ವೆ ಆಗಲೂ ತಯಾರಿದ್ದಾರಂತೆ. ಅದೂ ಸಿಂಪಲ್ ಆಗಿ ಅಜ್ಜಿ ಮನೆಲಿ ಮದ್ವೆ ಆಗೋ ಕನಸು ರಕ್ಷಿತಾಂದು.
ಎಲ್ಲಾ ಜನರಿಗೂ ನಾವು, ನಮ್ಮ ವ್ಲಾಗ್ ಇಷ್ಟ ಆಗ್ಬೇಕು ಅಂತಿಲ್ಲ. ಇಷ್ಟ ಆಗೋವ್ರು ಅವ್ರಾಗೇ ಖಂಡಿತಾ ನೋಡ್ತಾರೆ. ಇಷ್ಟ ಆಗಲ್ಲ ಅಂದ್ರೆ ನೋಡಲ್ಲ. ನಾನು ಜನರಿಗೋಸ್ಕರ ವ್ಲಾಗ್ ಮಾಡೋದಲ್ಲ ಅನ್ನೋ ರಕ್ಷಿತಾ, ಜನರ ಕೆಲಸನೇ ಇನ್ನೊಬ್ಬರ ಬಗ್ಗೆ ಕಮೆಂಟ್ ಮಾಡೋದು ನಾನು ಅದಕ್ಕೆಲ್ಲಾ ತಲೇನೇ ಕೆಡಿಸ್ಕೊಳಲ್ಲ. ಈ ಫೀಲ್ಡ್ ಗೆ ಕಾಲಿಡೋ ಹೊಸಬರಿಗೂ ನಾನು ಅದ್ನೇ ಹೇಳೋದು ಅಂತಾರೆ.


