ಹೀಗಿತ್ತು ರಾಕಿಂಗ್ ಸ್ಟಾರ್ ಯಶ್ ಕುಟುಂಬದ ದೀಪಾವಳಿ ಸೆಲೆಬ್ರೇಶನ್ ಮೋಡ್

Date:

  • ಹೀಗಿತ್ತು ರಾಕಿಂಗ್ ಸ್ಟಾರ್ ಯಶ್ ಕುಟುಂಬದ ದೀಪಾವಳಿ ಸೆಲೆಬ್ರೇಶನ್ ಮೋಡ್
  • ಯಶ್ ಕುಟುಂಬದ ಸಂಭ್ರಮ ನೋಡಿ ಸಖತ್ ಖುಷ್ ಆದ್ರು ಅಭಿಮಾನಿಗಳು
  • ವೈರಲ್ಲಾದ ಸೆಲೆಬ್ರೇಶನ್ ವಿಡಿಯೋಗೆ ಅಭಿಮಾನಿಗಳ ಕಾಮೆಂಟ್ ಸುರಿಮಳೆ

ಬೆಳಕಿನ ಹಬ್ಬ ದೀಪಾವಳಿ ನಾಡಿನಾದ್ಯಂತ ಉತ್ಸಾಹವನ್ನೇ ಹರಿಸಿದೆ. ಈ ಬೆಳಕಿನ ಹಬ್ಬದ ಸಡಗರವನ್ನು ರಾಕಿಂಗ್ ಸ್ಟಾರ್ ಯಶ್ Rocking Star Yash ಕುಟುಂಬವು ಭರ್ಜರಿಯಾಗಿ ಆಚರಿಸಿದೆ. ಯಶ್ ಕುಟುಂಬದ ದೀಪಾವಳಿ ಆಚರಣೆಯ ಚೆಂದದ ತುಣುಕೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ. ಈ ವಿಡಿಯೋದಲ್ಲಿ ಪರ್ಪಲ್ ಬಣ್ಣದ ಟ್ರೆಡಿಶನಲ್ ಉಡುಗೆಯಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ Radhika Pandith ಕಂಗೊಳಿಸಿದ್ದು, ಅವರ ಮಕ್ಕಳಾದ ಐರಾ ಮತ್ತು ಯಥರ್ವ್ ಪಿಸ್ತಾ ಬಣ್ಣದ ಉಡುಪಿನಲ್ಲಿ ಗಮನ ಸೆಳೆದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಟ್ರೆಂಡಿಂಗ್

ಯಶ್ ಕುಟುಂಬದ ಈ ಸಂತಸದ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿ ನೆಟ್ಟಿಗರ, ಯಶ್ ಅಭಿಮಾನಿಗಳ ಹೃದಯವನ್ನು ಬೆಳಗಿಸಿವೆ. ಅಲ್ಲದೇ ವಿಡಿಯೋದಲ್ಲಿ ಯಶ್ ಮತ್ತು ರಾಧಿಕಾ “ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು”ಎಂದು ಪ್ರೀತಿಯಿಂದ ಶುಭ ಕೋರಿದ್ದಾರೆ. ನಂತರ ಮಕ್ಕಳು ಸಂತೋಷದಿಂದ ಕುಣಿದು ಕುಪ್ಪಳಿಸುವ ದೃಶ್ಯಗಳನ್ನು ಕಂಡು ಯಶ್ ಮತ್ತು ರಾಧಿಕಾ ಮುಗುಳು ನಕ್ಕಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. “ರಾಕಿ ಬಾಯ್ ಅವರ ಕುಟುಂಬ ನೋಡಿದ್ರೆ ಮನಸಿಗೆ ಶಾಂತಿ ಸಿಗುತ್ತೆ”ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರು ಮದುವೆಯಾದ ಬಳಿಕ ಸಿನಿಮಾರಂಗದಿಂದ ದೂರ ಉಳಿದು, ಮಕ್ಕಳ ಬೆಳವಣಿಗೆಗೆ ಹೆಚ್ಚು ಸಮಯ ಕೊಡುತ್ತಿದ್ದಾರೆ. ಅವರು ಮಕ್ಕಳ ಜೊತೆ ಕಳೆಯುವ ಕ್ಷಣಗಳನ್ನು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಸದ್ಯ ಯಶ್ ಅವರು ಟಾಕ್ಸಿಕ್ Toxic ಹಾಗೂ ರಾಮಾಯಣ Ramayana ಚಿತ್ರಗಳ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರೂ ದೀಪಾವಳಿಯ ಸೆಲೆಬ್ರೇಶನ್ ಮೋಡ್ ಗೆ ಜೊತೆಯಾಗಿರುವುದು ಅವರ ಅಭಿಮಾನಿಗಳಿಗೆ ಭಾರೀ ಖುಷಿ ಮೂಡಿಸಿರುವುದು ಮಾತ್ರ ಸುಳ್ಳಲ್ಲ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್

ಇಂಪಾದ ಗುಂಗನ್ನು ಮನದಲ್ಲಿ ಉಳಿಸುತ್ತದೆ “ಮರಳಿದೆ ಜೀವ” ಮೆಲೋಡಿ ಸಾಂಗ್ ಹೊರಬಂತು ಸದ್ಯದಲ್ಲೇ...

ಅನೌನ್ಸ್ ಆಯ್ತು “ಸಿಕ್ಸ್ ಮಂಥ್ಸ್ ನೋಟಿಸ್”; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ ಚಿತ್ರ

ಅನೌನ್ಸ್ ಆಯ್ತು "ಸಿಕ್ಸ್ ಮಂಥ್ಸ್ ನೋಟಿಸ್"; ಹೊರಬರಲಿದೆ ಹೃದಯಸ್ಪರ್ಶಿ ಪ್ರಣಯ, ಹಾಸ್ಯ...

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ “ಗಿಲ್ಲಿ ನಟ” ನ ಇಂಟೆರೆಸ್ಟಿಂಗ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ "ಗಿಲ್ಲಿ ನಟ" ನ ಇಂಟೆರೆಸ್ಟಿಂಗ್...

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ – Dr Vishnuvardhan Dialogues Quotes

ಸಾಹಸಸಿಂಹ ವಿಷ್ಣುವರ್ಧನ್ ಅವ್ರ ಫೇಮಸ್ ಮೂವೀ ಡೈಲಾಗ್ಸ್ - Dr Vishnuvardhan...