- ರಾಜಕಾರಣಿಯಾಗಲಿದ್ದಾರೆ ಶಿವರಾಜಕುಮಾರ್: ನೆಚ್ಚಿನ ನಟನ ಹೊಸ ಗೆಟಪ್ ಗೆ ಪ್ರೇಕ್ಷಕರು ಖುಷ್
- ತೆಲಂಗಾಣ ಮೂಲದ ಜನಪರ ನಾಯಕನ ಜೀವನಗಾಥೆಗೆ ಶಿವಣ್ಣ ನಟನೆಯ ಸಾಥ್
- ಬಹುಭಾಷೆಗಳಲ್ಲಿ ಬರಲಿದೆ ಅಪರೂಪದ ಸಿನಿಮಾ
ನಟ ಶಿವರಾಜ್ ಕುಮಾರ್ Shivaraj Kumar ಹೊಸ ಸಿನಿಮಾವನ್ನು ಘೋಷಿಸಿದ್ದಾರೆ. ಈ ಬಾರಿ ಶಿವಣ್ಣ ಅವರು ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಈ ಸಿನಿಮಾ ಆಂಧ್ರ ಮೂಲದ ಜನಪರ ನಾಯಕ ಗುಮ್ಮಡಿ ನರಸಯ್ಯ Gummadi Narsaiah ಅವರ ಜೀವನಗಾಥೆ ಆಧಾರಿತವಾಗಿದೆ. ಚಿತ್ರದ ನಿರ್ದೇಶನವನ್ನು ಪರಮೇಶ್ವರ್ ಹಿವ್ರಲೆ Parameshwar Hivrale ಮಾಡುತ್ತಿದ್ದಾರೆ. ಅವರು ಈ ಹಿಂದೆ ತೆಲುಗು ಸಿನಿಮಾಗಳಾದ ಚಿರು ಗೋಡವಾಲು ಮತ್ತು ಲಾವಣ್ಯ ವಿತ್ ಲವ್ ಬಾಯ್ಸ್ ನಲ್ಲಿ ನಟಿಸಿದ್ದರು. ಇದೀಗ ತಮ್ಮ ಮೊದಲ ನಿರ್ದೇಶನದ ಚಿತ್ರವಾಗಿ ಕನ್ನಡದಲ್ಲಿ ಈ ಸಿನಿಮಾವನ್ನು ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರು ಫೈನಲ್ ಆಗಿಲ್ಲ
ಶಿವಣ್ಣ ಹೊಸ ಗೆಟಪ್ ನಲ್ಲಿ
ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅದರಲ್ಲಿ ಶಿವರಾಜ್ ಕುಮಾರ್ ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಧರಿಸಿ ಸರ್ಕಾರಿ ಕಚೇರಿ ಮುಂದೆ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿ ಅವರ ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ.
ಈ ಚಿತ್ರಕ್ಕೆ ಎನ್. ಸುರೇಶ್ ರೆಡ್ಡಿ ನಿರ್ಮಾಪಕರಾಗಿದ್ದಾರೆ. ಕಥೆ ಕಮ್ಯುನಿಸ್ಟ್ ನಾಯಕ ಗುಮ್ಮಡಿ ನರಸಯ್ಯ ಅವರ ಸರಳ ಹಾಗೂ ಹೋರಾಟದ ಬದುಕಿನ ಆಧಾರಿತವಾಗಿದೆ. ಅವರು 1983 ರಿಂದ 1994 ಹಾಗೂ 1999 ರಿಂದ 2009ರವರೆಗೆ ತೆಲಂಗಾಣದ ಯೆಲ್ಲಾಂಡು ಕ್ಷೇತ್ರದ ಶಾಸಕರಾಗಿದ್ದರು. ಐದು ಬಾರಿ ಶಾಸಕರಾಗಿದ್ದರೂ ಸೈಕಲ್ನಲ್ಲಿ ಓಡಾಡುವುದು, ರಸ್ತೆ ಬದಿಯಲ್ಲಿ ಊಟ ಮಾಡುವುದು, ಹಳೆಯ ಮನೆಯಲ್ಲಿ ವಾಸಿಸುವಂತಹ ಸರಳ ಜೀವನ ನಡೆಸಿದ್ದರು. ಈ ಸಿನಿಮಾ ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಾಮಾಜಿಕ ಹೋರಾಟಗಾರನ ಜೀವನವನ್ನು ಚಿತ್ರಿಸುವ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಹೊಸ ರೂಪ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


