- ಅಶ್ವಿನಿ ಪುನೀತ್ ರಾಜ್ ಕುಮಾರ್ ಅವ್ರ ಲವ್ ಸ್ಟೋರಿ ರಿವೀಲಾಯ್ತು!!
- ಹೊಸದಾಗಿ ಲಾಂಚ್ ಆದ ಪಿ.ಆರ್.ಕೆ. ಆಪ್ ನಲ್ಲಿದೆ ಅಶ್ವಿನಿ ಅವರ ಪಾಡ್ ಕಾಸ್ಟ್
- ತಮ್ಮ ಬಾಲ್ಯದಿಂದ ಹಿಡಿದು ದೊಡ್ಮನೆಯ ಸೊಸೆಯಾದ ಕುರಿತು ಗುಟ್ಟು ಬಿಚ್ಚಿಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್
ಅಪ್ಪು ಅಂದ್ರೆ ಎಲ್ಲಾ ಕನ್ನಡಿಗರ ಕಿವಿ ನೆಟ್ಟಗಾಗುತ್ತದೆ. ಸಿನಿಪ್ರಿಯರಲ್ಲದಿದ್ದವರಿಗೂ ಪುನೀತ್ ರಾಜ್ ಕುಮಾರ್ ತಮ್ಮ ವ್ಯಕ್ತಿತ್ವದಿಂದ ಹತ್ತಿರಾದವರು. ಅವರ ಸ್ಮರಣೆಯಲ್ಲಿ ಅಭಿಮಾನಿಗಳೆಲ್ಲಾ ಸೇರಿ ಪಿ.ಆರ್.ಕೆ ಆಪ್ ಲಾಂಚ್ ಮಾಡಿದ್ದು, ಅದರಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಮೊದಲ ಪಾಡ್ ಕಾಸ್ಟ್ ರಿಲೀಸ್ ಆಗಿದೆ. ಜನಪ್ರಿಯ ಆಂಕರ್ ಅನುಶ್ರೀ ಈ ಪಾಡ್ ಕಾಸ್ಟ್ ನಡೆಸಿಕೊಟ್ಟಿದ್ದಾರೆ. ಅಶ್ವಿನಿ ಅವರು ತಮ್ಮ ಬಾಲ್ಯದಿಂದ ಹಿಡಿದು ದೊಡ್ಮನೆಯ ಸೊಸೆ ಆಗುವಲ್ಲಿವರೆಗಿನ ತಮ್ಮ ಬಾಳಪಯಣ, ಗುಟ್ಟುಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡಿದ್ದಾರೆ.
ಹೀಗಿತ್ತು ಅಶ್ವಿನಿ ಅವ್ರ ಬಾಲ್ಯ
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವ್ರು ತಮ್ಮ ಬಾಲ್ಯದಲ್ಲಿ ತುಂಬಾ ನಾಟಿ ಇದ್ರಂತೆ. ಅವ್ರ ಅಜ್ಜಿಅವ್ರನ್ನ ಕುದುರೆ ಅಂತ ಕರೀತಿದ್ರಂತೆ. ಅವ್ರ ಕುಂಟುಂಬದಲ್ಲಿ ಇವ್ರೇ ಹಿರಿಯ ಮೊಮ್ಮಗಳಂತೆ, ಗಲ್ಲಿಗಳಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್ ಆಡೋದ್ರಿಂದ ಹಿಡಿದು ಎಲ್ಲಾ ರೀತಿ ಬಾಲ್ಯದ ಚೇಷ್ಟೆಗಳನ್ನು ಮಾಡಿ ಎಂಜಾಯ್ ಮಾಡ್ಕೊಂಡು ಬೆಳ್ದಿದಾರಂತೆ. ಮರ ಹತ್ತಿ ಹಲಸಿನಕಾಯಿಯನ್ನು ಕೊಯ್ದು ಅಜ್ಜಿ ಹತ್ರ ಬೈಸಿಕೊಂಡಿದ್ದನ್ನ ನೆನಪು ಮಾಡಿಕೊಳ್ತಾರೆ ಇವ್ರು. ಮ್ಯಾಥಮಟಿಕ್ಸ್ ಅಂದ್ರೆ ತುಂಬಾ ಕಷ್ಟ ಪಡ್ತಿದ್ರಂತೆ ಅವ್ರು. ಹತ್ತನೇ ತರಗತಿವರೆಗೂ ಓದಿನಲ್ಲಿ ಸಾಧಾರಣ ಹುಡುಗಿಯಾಗಿದ್ದ ಅಶ್ವಿನಿ ಅವ್ರು ಮೌಂಟ್ ಕಾರ್ಮೆಲ್ ಕಾಲೇಜಿಗೆ ಸೇರ್ಬೇಕು ಅಂತ ಪಣ ತೊಟ್ಟು ಪಿಯುಸಿಯಲ್ಲಿ ಚೆನ್ನಾಗಿ ಓದಿ ಮಾರ್ಕ್ಸ್ ತೆಗ್ದು ಡಿಗ್ರಿಲಿ ಅಲ್ಲಿಗೆ ಸೇರಿದ್ರಂತೆ. ತಾಯಿಗಿಂತ ತಂದೆ ಸ್ಟ್ರಿಕ್ಟ್ ಆಗಿದ್ರಂತೆ.
ಮೊದಲ ಸಂಬಳದಲ್ಲಿ ಅಪ್ಪುಗೆ ಸನ್ ಗ್ಲಾಸಸ್ ಗಿಫ್ಟ್!
ಮನೆ ಕೆಲಸಗಳಲ್ಲಿ ಹಾಗೇ ಅಡಿಗೆ ಮಾಡ್ಲಿಕ್ಕೂ ತಾಯಿಗೆ ಹೆಲ್ಪ್ ಮಾಡೋದು ಅಶ್ವಿನಿ ಅವ್ರಿಗೆ ಖುಷಿ ಆಗ್ತಿತ್ತಂತೆ. ಅದ್ರಲ್ಲೂ ಪಾತ್ರೆ ತೊಳಿಯೋ ಕೆಲಸ ಅವ್ರ ಫೇವರಿಟ್ ಅಂತೆ. ಶಾಂತಿಸಾಗರ್ ನಲ್ಲಿ ಸಂಜೆ ಫ್ರೆಂಡ್ಸ್ ಜೊತೆ ಚಾಟ್ಸ್ ತಿಂದ್ಕೊಂಡು ಬಸ್ ನಲ್ಲೇ ಕಾಲೇಜ್ ಗೆ ಓಡಾಡ್ಕೊಂಡು ಇದ್ದ ಅಶ್ವಿನಿಅವ್ರಿಗೆ ಫೈನಲ್ ಇಯರ್ ನಲ್ಲಿ ಕೈನೆಟಿಕ್ ಹೊಂಡ ಕೊಡ್ಸಿದ್ರಂತೆ ಪೇರೆಂಟ್ಸ್. ಇದೇ ಕೆಲಸ ಮಾಡ್ಬೇಕು ಅನ್ನೋ ಗೋಲ್ ಏನೂ ಇಲ್ದೇ ಇದ್ರೂ ಚೆನ್ನಾಗಿ ಓದಿ ಒಳ್ಳೇ ಕೆಲಸ ಪಡೀಬೇಕು ಅನ್ನೋದಷ್ಟೇ ಅವ್ರ ಗೋಲ್ ಆಗಿತ್ತಂತೆ. ಅಮೀರ್ ಖಾನ್ ಮೂವೀ ನೋಡ್ಲಿಕ್ಕೆ ಕ್ಲಾಸ್ ಬಂಕ್ ಮಾಡಿ ಹೋಗ್ತಿದ್ದ ಅಶ್ವಿನಿ ಅವ್ರಿಗೆ ಬೇರೆ ಮೂವಿಗಳ ಬಗ್ಗೆ ಅಷ್ಟೇನೂ ಆಸಕ್ತಿ ಇರ್ಲಿಲ್ವಂತೆ. ಅನಂತರ ತಾರೆ ಜಮೀನ್ ಪರ್ ಮೂವೀ ಶೂಟಿಂಗ್ ಟೈಮ್ ನಲ್ಲಿ ಅಮೀರ್ ಖಾನ್ ಅವ್ರನ್ನ ಮೀಟ್ ಆಗಿ ಫುಲ್ ಖುಷಿ ಪಟ್ಟಿದ್ರಂತೆ. ಇಂಗ್ಲಿಷ್ ನಲ್ಲಿ ಎಂ.ಎ. ಮುಗಿಸಿದ ನಂತರ ಒಂದು ಕಂಪನಿಯಲ್ಲಿ ಎಚ್.ಆರ್. ಟೀಮ್ ನಲ್ಲಿ ಕೆಲಸ ಮಾಡಿರ್ತಾರೆ. ಫಸ್ಟ್ ಸ್ಯಾಲರಿನಲ್ಲಿ ತಾಯಿಗೊಂದು ಸೀರೆ ಹಾಗೇ ಅಪ್ಪು ಅವ್ರಿಗೊಂದು ಗ್ಲಾಸಸ್ ಕೊಡ್ಸಿದ್ರಂತೆ. ತಂದೆ ಜೊತೆ ಬೆಟ್ಟದ ಹೂವು ಸಿನಿಮಾ ನೋಡಿದ್ದ ಅಶ್ವಿನಿ ಅವ್ರು ಪುನೀತ್ ಅವ್ರನ್ನ ಮದ್ವೆ ಆಗ್ತೀನಿ ಅಂತ ಕನಸಲ್ಲೂ ಅನ್ಕೊಂಡಿರ್ಲಿಲ್ವಂತೆ.
ಹೀಗಿತ್ತು ಅಪ್ಪು, ಅಶ್ವಿನಿ ಲವ್ ಸ್ಟೋರಿ
ಅಶ್ವಿನಿ ಅವ್ರಿಗೆ ಸಿನಿಮಾಗಳ ಬಗ್ಗೆ ಅಷ್ಟೇನೂ ಹುಚ್ಚಿಲ್ಲದಿದ್ರೂ ಪುನೀತ್ ಬಾಳ ಸಂಗಾತಿಯಾಗಿ ದೊರೆತದ್ದು ಅದೃಷ್ಟವೇ ಸರಿ. ಅಶ್ವಿನಿ ಅವರ ತಂಗಿಯ ಫ್ರೆಂಡ್ಸ್ ಪುನೀತ್ ಅವ್ರಿಗೂ ಫ್ರೆಂಡ್ಸ್ ಆಗಿದ್ರಂತೆ. ಹಾಗಾಗಿ ಒಂದೆರಡು ಬಾರಿ ಪುನೀತ್ ಅವರ ಭೇಟಿ ಸಹಜವಾಗಿ ಗೆಳೆಯರೊಟ್ಟಿದೆ ಆಗಿತ್ತಂತೆ. ಆದ್ರೆ ಒಮ್ಮೆ ಆಕಸ್ಮಿಕವಾಗಿ ಅಶ್ವಿನಿ ಒಬ್ಬರೇ ಎಲ್ಲೋ ಹೋದ ಸಂದರ್ಭದಲ್ಲಿ ಪುನೀತ್ ಅವ್ರು ಸಿಕ್ಕು ಅಶ್ವಿನಿಯವರನ್ನು ಮಾತನಾಡಿಸಿದರಂತೆ. ಹಾಗೇ ಫೋನ್ ನಂಬರ್ ಪಡೆದುಕೊಂಡ್ರಂತೆ. ಇಲ್ಲಿಂದ ಪ್ರಾರಂಭವಾದ ಲವ್ ಸ್ಟೋರಿ ಲ್ಯಾಂಡ್ ಲೈನ್ ಫೋನ್ ನಲ್ಲಿ ಅಪ್ಪ- ಅಮ್ಮಂದಿರ ಕಣ್ಣು ತಪ್ಪಿಸಿ, ಕೋಡ್ ವರ್ಡ್ ಗಳೊಂದಿಗೆ ಸಂಭಾಷಣೆ ನಡೆಸುತ್ತಾ ಮುಂದುವರೆಯಿತಂತೆ. ಅಶ್ವಿನಿ ಅವರ ಮನೆಯಲ್ಲಿ ಮೊದಲು ಪುನೀತ್ ಅವರದ್ದು ಸಿನಿಮಾ ಫ್ಯಾಮಿಲಿ ಅಂತ ಅಷ್ಟಾಗಿ ಮನಸ್ಸಿರಲಿಲ್ಲ, ಒಪ್ಪಿರಲಿಲ್ಲವಂತೆ. ಆದ್ರೆ ಕೆಲವು ತಿಂಗಳುಗಳ ನಂತರ ಡಾ. ರಾಜ್ ಕುಮಾರ್ ಅವ್ರೇ ಕುಟುಂಬ ಸಮೇತ ಅಶ್ವಿನಿ ಅವರ ಮನೆಗೆ ಬಂದು ಹೆಣ್ಣು ಕೇಳಿದಾಗ ಮನೆಯಲ್ಲಿ ಒಪ್ಪಿಗೆ ನೀಡಿದರಂತೆ. ಹೀಗೆ ಮುಂದುವರೆದು ಫುಲ್ ಸಕ್ಸಸ್ ಕಾಣ್ತು ಪುನೀತ್-ಅಶ್ವಿನಿ ಲವ್ ಸ್ಟೋರಿ.


