ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’

Date:

  • ಆಸ್ಕರ್ ವೇದಿಕೆಗೆ ಬಂತು ‘ಮಹಾವತಾರ್ ನರಸಿಂಹ’ ಹಾಗೂ ‘ಕಾಂತಾರ: ಅಧ್ಯಾಯ 1’
  • ಭಾರತೀಯ ಚಲನಚಿತ್ರಗಳತ್ತ ತಿರುಗಿ ನೋಡಿದ ಪಾಶ್ಚ್ಯಾತ್ಯ ಸಿನಿ ಜಗತ್ತು
  • ಜಾಗತಿಕ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಯ್ತು ಭಾರತದ ಕಥೆಗಳು

“ಮಹಾವತಾರ್ ನರಸಿಂಹ” Mahavathar Narasimha ಹಾಗೂ “ಕಾಂತಾರ: ಅಧ್ಯಾಯ 1” Kanthara Chapter 1 ಚಿತ್ರಗಳು ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿದೆ. ಹೊಂಬಾಳೆ ಫಿಲ್ಮ್ಸ್ Hombale films ಬ್ಯಾನರ್ ನಲ್ಲಿ ಮೂಡಿಬಂದ ಈ ಎರಡು ಚಿತ್ರಗಳು ಆಸ್ಕರ್ ಲಿಸ್ಟ್ ನಲ್ಲಿರುವುದರಿಂದ ಇಡೀ ಸಿನಿಜಗತ್ತೇ ಕನ್ನಡದತ್ತ ತಿರುಗಿ ನೋಡುವಂತಾಗಿದೆ. ಅಂದ ಹಾಗೆ ಈ ಚಿತ್ರಗಳು ಅಧಿಕೃತವಾಗಿ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಸ್ಥಾನ ಪಡೆದುಕೊಂಡಿವೆ.

‘ಮಹಾವತಾರ್ ನರಸಿಂಹ’ ಚಿತ್ರಕ್ಕೆ ಪ್ರಶಸ್ತಿ ಗ್ಯಾರಂಟಿ?

ಕಳೆದ ವರ್ಷ ಬಿಡುಗಡೆಯಾದ ಈ ಎರಡು ಚಿತ್ರಗಳು ಜನಮನ ಗೆದ್ದು, ಕೋಟಿ ಕೋಟಿ ರೂಪಾಯಿ ಗಳಿಸಿ ದಾಖಲೆ ನಿರ್ಮಿಸಿದ್ದವು. ಚಿತ್ರಗಳನ್ನು ಆಸ್ಕರ್ ವೇದಿಕೆಗೆ ಕೊಂಡೊಯ್ಯುವ ಉದ್ದೇಶವನ್ನು ಹೊಂಬಾಳೆ ಫಿಲ್ಮ್ಸ್ ಮೊದಲೇ ಪ್ರಕಟಿಸಿತ್ತು. ವಿಶೇಷವಾಗಿ ಆನಿಮೇಟೆಡ್ ವಿಭಾಗದಲ್ಲಿ ‘ಮಹಾವತಾರ್ ನರಸಿಂಹ’ ಚಿತ್ರಕ್ಕೆ ಪ್ರಶಸ್ತಿ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವರ್ಷದ ಆಸ್ಕರ್ ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಸ್ಥಾನ ಪಡೆದ ಐದು ಭಾರತೀಯ ಚಿತ್ರಗಳಲ್ಲಿ ಎರಡು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಗಳಾಗಿರುವುದು ಗಮನಾರ್ಹ.

ಗುಣಮಟ್ಟಕ್ಕೆ ಸಂದ ಮನ್ನಣೆ:

ಈ ಎರಡೂ ಸಿನಿಮಾಗಳಲ್ಲಿ ಕಥೆ ಹೇಳುವ ಶೈಲಿ, ತಾಂತ್ರಿಕ ನೈಪುಣ್ಯ ಮತ್ತು ಸಿನಿಮೀಯ ದೃಷ್ಟಿಕೋನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅತ್ಯುತ್ತಮ ನಟ, ನಟಿ, ನಿರ್ದೇಶಕ, ನಿರ್ಮಾಪಕ, ಮೂಲ ಚಿತ್ರಕಥೆ, ನಿರ್ಮಾಣ ವಿನ್ಯಾಸ ಹಾಗೂ ಛಾಯಾಗ್ರಹಣ ಸೇರಿದಂತೆ ಪ್ರಮುಖ ಆಸ್ಕರ್ ವಿಭಾಗಗಳಲ್ಲಿ ಈ ಚಿತ್ರಗಳು ಪರಿಗಣನೆಗೆ ಬಂದಿದೆ. ಭಾರತೀಯ ಚಿತ್ರರಂಗದ ದೃಷ್ಟಿಯಿಂದ ಆಸ್ಕರ್ ಪ್ರಶಸ್ತಿ ಇನ್ನೂ ಕನಸಿನಂತೆಯೇ ಉಳಿದಿದೆ. ಆಗೊಮ್ಮೆ ಈಗೊಮ್ಮೆ ಪ್ರಶಸ್ತಿಗಳು ಬಂದಿದ್ದರೂ, ಭಾರತದಲ್ಲಿ ನಿರ್ಮಾಣವಾದ ಫೀಚರ್ ಚಿತ್ರಗಳಿಗೆ ಪ್ರಮುಖ ವಿಭಾಗಗಳಲ್ಲಿ ಇನ್ನೂ ಸಾಧನೆ ಸಾಧ್ಯವಾಗಿಲ್ಲ. ಮೂರು ವರ್ಷಗಳ ಹಿಂದೆ ರಾಜಮೌಳಿ ನಿರ್ದೇಶನದ ‘RRR’ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಸಿಕ್ಕಿದ್ದು ಇದುವರೆಗಿನ ಅತ್ಯಂತ ದೊಡ್ಡ ಸಾಧನೆ.

ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಾಣದ ‘ಮಹಾವತಾರ್ ನರಸಿಂಹ’ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬೆನ್ನೆಲುಬಾಗಿ ನಿಂತು ವಿತರಣೆ ಮಾಡಿತ್ತು. ಈ ಎರಡೂ ಸಿನಿಮಾಗಳು ಹಾಲಿವುಡ್ ಚಿತ್ರಗಳೊಂದಿಗೆ ಆಸ್ಕರ್ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವುದು ಸ್ಯಾಂಡಲ್ವುಡ್ಗೆ ಹೊಸ ಆಶಾಕಿರಣ.ಎಲ್ಲರ ಕಣ್ಣುಗಳು ಆಸ್ಕರ್ ಪ್ರಶಸ್ತಿ ಅನನ್ಸ್ ಮೆಂಟ್ ಗಾಗಿ ಕಾಯುವಂತಾಗಿದೆ.

LEAVE A REPLY

Please enter your comment!
Please enter your name here

Share post:

spot_imgspot_imgspot_imgspot_img
spot_imgspot_imgspot_imgspot_img

Popular

You Might Also Like
Related

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ

ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ ಹಿಗ್ಗಿ ನಲಿದಾಡಿಸುವ...

ಓಟಿಟಿಯಲ್ಲಿ ರಿಲೀಸಾಗಿದೆ ಕನ್ನಡದ ಈ ಸಿನಿಮಾಗಳು

ಓಟಿಟಿಯಲ್ಲಿ ರಿಲೀಸಾಗಿದೆ ಕನ್ನಡದ ಈ ಸಿನಿಮಾಗಳು ಹೊಸ ವರ್ಷಕ್ಕೆ ಮನರಂಜನೆಯ ಸವಿಯೂಟ ಓಟಿಟಿಯಲ್ಲಿ...

ಈ ವರ್ಷ ಬಿಡುಗಡೆಯಾಗಿ ವಿಭಿನ್ನ ಕಂಟೆಂಟ್ ಗಳಿಂದ ಸದ್ದು ಮಾಡಿದ ಚಿತ್ರಗಳಿವು – Kannada Movies released in 2025

ಈ ವರ್ಷ ಬಿಡುಗಡೆಯಾಗಿ ವಿಭಿನ್ನ ಕಂಟೆಂಟ್ ಗಳಿಂದ ಸದ್ದು ಮಾಡಿದ ಚಿತ್ರಗಳಿವು Kannada...

New Year Kannada Party Songs List – ಹೊಸವರ್ಷ, ಕ್ರಿಸ್ ಮಸ್ ಪಾರ್ಟಿಗಳಿಗೆ ಈ ಹಾಡುಗಳು ಜೊತೆಯಾದ್ರೆ ಫೀಲೇ ಬೇರೆ

ಹೊಸವರ್ಷ, ಕ್ರಿಸ್ ಮಸ್ ಪಾರ್ಟಿಗಳಿಗೆ ಈ ಹಾಡುಗಳು ಜೊತೆಯಾದ್ರೆ ಫೀಲೇ ಬೇರೆKannada...