- ಸಂಕ್ರಾಂತಿ ಹಬ್ಬದ ಸಡಗರಕ್ಕೆ ಈ ಸಿನಿಮಾ ಹಾಡುಗಳನ್ನು ಟ್ಯೂನ್ ಮಾಡ್ಕೊಳ್ಳಿ
- ಹಿಗ್ಗಿ ನಲಿದಾಡಿಸುವ ಸುಗ್ಗಿ ಹಾಡುಗಳಿವು
- ಕನ್ನಡ ಸಿನಿಮಾಗಳಲ್ಲಿ ಸಖತ್ ಸೌಂಡ್ ಮಾಡಿದ ಸಂಕ್ರಾಂತಿ ಗೀತೆಗಳು
ಕನ್ನಡ ಚಿತ್ರರಂಗದಲ್ಲಿ ಸಂಕ್ರಾಂತಿ Sankranthi festival songs ಹಬ್ಬದ ಹಾಡುಗಳು ಕನ್ನಡಿಗರ ಕಿವಿಗಳನ್ನು ಅರಳಿಸಿದೆ. ಇನ್ನೇನು ಸಂಕ್ರಾಂತಿ ಹಬ್ಬ ಬರುತ್ತಿದೆ. ಈ ಸುಗ್ಗಿಯ ಸಂಭ್ರಮವನ್ನು ಹೆಚ್ಚಿಸುವ ಹಾಡುಗಳನ್ನು ಮತ್ತೆ ಮತ್ತೆ ಟ್ಯೂನ್ ಮಾಡಿಕೊಳ್ಳುವ ಹೊತ್ತಿದು. ಆ ಸುಮಧುರ ಸಂಕ್ರಾಂತಿ ಹಾಡುಗಳ ಲಿಸ್ಟ್ ಇಲ್ಲಿದೆ.
ಸಂಕ್ರಾಂತಿ ಬಂತು ರತ್ತೋ ರತ್ತೋ: Sankranthi Banthu Rattho Rattho
ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. 1992 ರಲ್ಲಿ ಕ್ರೇಝಿಸ್ಟಾರ್ ರವಿಚಂದ್ರನ್ Ravichandran ನಟಿಸಿದ “ಹಳ್ಳಿ ಮೇಸ್ಟ್ರು” Halli Meshtru ಸಿನಿಮಾದ ಬ್ಯೂಟಿಫುಲ್ ಹಾಡಿದು. ಹಂಸಲೇಖ Hamsalekha ಅವರು ಬರೆದು ಸಂಯೋಜಿಸಿದ ಈ ಹಾಡನ್ನು ಹಾಡಿದವರು ಎಸ್.ಪಿ.ಬಾಲಸುಬ್ರಹ್ಮಣ್ಯ SP Balasubramanya ಮತ್ತು ಎಸ್ ಜಾನಕೀ S Janaki. ಇಂದಿಗೂ ಈ ಹಾಡು ಎಷ್ಟೋ ಸಂಕ್ರಾಂತಿ ಕಾರ್ಯಕ್ರಮಗಳಲ್ಲಿಸೌಂಡ್ ಮಾಡುತ್ತಲೇ ಇದೆ. ಹಾಡಿನ ರಂಗುರಂಗಾದ ಅರ್ಥಪೂರ್ಣ ಸಾಹಿತ್ಯ ಕನ್ನಡಿಗರ ಮೈಮನ ಸೆಳೆದಿದೆ.
ಸಂಕ್ರಾಂತಿ ಬಂತು ಸುಗ್ಗಿ ತಂತು: Sankranthi Banthu Suggi Thanthu
ಸುದೀಪ್ Sudeep ಅಭಿನಯದ “ಪಾರ್ಥ” Partha ಸಿನಿಮಾದ ಸುಮಧುರ ಹಾಡಿದು. “ಸಂಕ್ರಾಂತಿ ಬಂತು.. ಸುಗ್ಗಿ ತಂತು ಹಿಗ್ಗಿ ನಲಿದಾಡಿರೋ” ಎಂದು ಶುರುವಾಗುವ ಈ ಹಾಡಿನಲ್ಲಿ ಸಂಕ್ರಾಂತಿ ಆಚರಣೆಯ ಹಿನ್ನೆಲೆಯಿದೆ. ಗುರುಕಿರಣ್ Gurukiran ಸಂಗೀತ ನೀಡಿರುವ ಈ ಹಾಡಿಗೆ, ವಿ ನಾಗೇಂದ್ರ ಪ್ರಸಾದ್ V Nagendra Prasad ಸಾಹಿತ್ಯವಿದೆ. ಶಂಕರ್ ಮಹಾದೇವನ್, ಮಾಲ್ಗುಡಿ ಶುಭಾ ಕಂಠಸಿರಿಯಿದೆ.
ಸಂಕ್ರಾಂತಿ ತಕ ಥೈ: Sankranthi Thaka Thai
“ತಕ ಥೈ ತಕ ಥೈ ಆಗಸದಾಗೆ ಓಕುಳಿ ಚೆಲ್ಲೈತೋ ಉತ್ತರಾಯಣದಾಚೆ ಸೂರ್ಯನ ತೇರು ಹೊಂಟೈತೋ” ಎನ್ನುವ ಲಿರಿಕಲ್ ವಿಡಿಯೋ ಸಾಂಗ್ ಗೆ ಒಂದಷ್ಟು ಸಿನಿಮಾ ತಾರೆಯರು ಹೆಜ್ಜೆ ಹಾಕಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲೂ ಈ ಹಾಡು ಗಮನಸೆಳೆದಿತ್ತು. ರಮೇಶ್ ಅರವಿಂದ್ Ramesh Aravind, ಹರ್ಷಿಕಾ ಪೂಣಚ್ಚ, ರಾಧಿಕಾ ನಾರಾಯಣ್, ಪೃಥ್ವಿ ಅಂಬಾರ್ ಸೇರಿದಂತೆ ತೆಲುಗಿನ ಒಂದಷ್ಟು ಕಲಾವಿದರು ಈ ಹಾಡಿಗೆ ಸ್ಪೆಪ್ಪ್ ಹಾಕಿದ್ದರಿಂದ ಯುಟ್ಯೂಬ್ ನಲ್ಲಿ ಈ ಹಾಡು ಸದ್ದು ಮಾಡಿತ್ತು. ಸಂಕ್ರಾಂತಿಯ ಸಮಯದ ಪ್ರಾಕೃತಿಕ ವರ್ಣನೆ ಈ ಹಾಡಿನಲ್ಲಿದೆ.
ಹಬ್ಬ ನಂಗೆ..ಹಬ್ಬ ನಂಗೆ.. ಹಿಗ್ಗು ನಂಗೆ: Habba Nange Habba Nange Higgu Nange
“ಹಬ್ಬ ನಂಗೆ, ಹಬ್ಬ ನಂಗ, ಹಿಗ್ಗು ನಂಗೆ…ಸಂಕ್ರಾಂತಿ ನವರಾತ್ರಿ ಎಲ್ಲಾನೂ ಕೂಡಿ ಬಂದೈತೋ” ಎನ್ನುವ ಸಾಹಿತ್ಯದೊಂದಿಗೆ ಆರಂಭವಾಗುವ ಈ ಹಾಡು “ನೀನೆಲ್ಲೋ ನಾನಲ್ಲೇ” Ninelli Nanalle ಚಿತ್ರದ್ದು. ಈ ಚಿತ್ರದಲ್ಲಿ ವಿಷ್ಣುವರ್ಧನ್ Vishnuvardhan, ಅನಿರುದ್ಧ್, ರವಿಚಂದ್ರನ್ ನಟಿಸಿದ್ದು ಹಬ್ಬದ ಜೋಶ್ ಜಾಸ್ತಿ ಮಾಡುವ ಮಸ್ತ್ ಹಾಡಿದು. ಕವಿರಾಜ್ ಸಾಹಿತ್ಯ ಬರೆದಿದ್ದು, ರಮೇಶ್ ಕೃಷ್ಣ ಕಂಪೋಸ್ ಮಾಡಿದ್ದಾರೆ. ಹೇಮಂತ್ ಕುಮಾರ್, ರಾಜೇಶ್ ಕೃಷ್ಣ ನ್ ಹಾಡಿಗೆ ಧ್ವನಿಯಾಗಿದ್ದಾರೆ.


