- ಫೆಬ್ರವರಿಯಲ್ಲಿ ತೆರೆಗೆ ಬರಲು ರೆಡಿಯಾಯ್ತು ಅಧಿಪತ್ರ.!
- ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅಭಿನಯ ಸಿನಿಮಾ
ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಬಿಗ್‌ಬಾಸ್ ಮೂಲಕ ಮನೆ ಮಾತಾದ ನಟ ರೂಪೇಶ್ ಶೆಟ್ಟಿ ಅಭಿನಯದ ಅಧಿಪತ್ರ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಫೆಬ್ರವರಿ ಗ 7 ರಂದು ಅಧಿಪತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕರಾವಳಿ ಭಾಗದ ವಿಶೇಷತೆಗಳನ್ನೊಳಗೊಂಡ ಸಿನಿಮಾ;
ಇನ್ನು ಚಿತ್ರ ಟೀಸರ್ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು, ಕರಾವಳಿ ಭಾಗದ ವಿಶೇಷ ಆಚರಣೆಗಳಾದ ಆಟಿ ಕಳಂಜಾ, ಯಕ್ಷಗಾನ, ಹುಲಿ ಕುಣಿತ ಮೊದಲಾದ ಕರಾವಳಿ ವಿಶೇಷತೆಯನ್ನು ಈ ಸಿನಿಮಾದ ಕಥೆಯಲ್ಲಿ ಹೊಸ ರೀತಿಯಲ್ಲಿ ಹೆಣೆಯಲಾಗಿದೆ. ಚಿತ್ರವನ್ನು ಕರಾವಳಿ ಭಾಗದಲ್ಲಿಯೇ ಚಿತ್ರೀಕರಿಸಲಾಗಿದ್ದು, ಈಗಾಗಲೇ ಡಬ್ಬಿಂಗ್ ಹಾಗೂ ಓಟಿಟಿ ಹಕ್ಕುಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ.

ಚಿತ್ರದ ಬಿಡುಗಡೆ ದಿನಕ್ಕೆ ಕೌಂಟ್‌ಡೌನ್;
ಚಿತ್ರದ ಮೊದಲ ಹಾಡು ಲಹರಿ ಮ್ಯೂಸಿಕ್ ನಲ್ಲಿ ಜನವರಿ 27 ರಂದು ಬಿಡುಗಡೆ ಆಗಲಿದ್ದು, ಇದರೊಂದಿಗೆ ಚಿತ್ರಕ್ಕೆ ಇನ್ನಷ್ಟು ಕ್ರೇಜ್ ಸಿಗಲಿದೆ. ಫೆಬ್ರವರಿ 7ರಂದು ಅಧಿಪತ್ರ ತೆರೆಗೆ ಅಬ್ಬರಿಸಲಿದೆ.
ಪ್ರೇಕ್ಷಕರು ಈಗಾಗಲೇ ಈ ಸಿನಿಮಾದ ನಿರೀಕ್ಷೆಯಲ್ಲಿದ್ದು, ಬಿಡುಗಡೆ ದಿನಕ್ಕೆ ಕೌಂಟ್‌ಡೌನ್ ಶುರುವಾಗಿದೆ.