- ಹಾಲಿವುಡ್ ನಲ್ಲಿ ಮಿಂಚಲಿರುವ ಕನ್ನಡದ ರಾಜಾಹುಲಿ
- ಟಾಕ್ಸಿಕ್ ಚಿತ್ರದ ಮೂಲಕ ಹಾಲಿವುಡ್ ನಲ್ಲು ಫೇಮಸ್ ಆಗಲಿದ್ದಾರೆ ಯಶ್
- ಅಭಿಮಾನಿಗಳಿಗೆ ಮಾತ್ರವಲ್ಲ ಕನ್ನಡಿಗರಿಗೇ ಸಿಹಿಸುದ್ದಿ ನೀಡಿದ ರಾಕಿಬಾಯ್
- ಟಾಕ್ಸಿಕ್ ಚಿತ್ರ ಏಪ್ರಿಲ್ 10, 2025 ರಂದು ಬಿಡುಗಡೆಯ ನಿರೀಕ್ಷೆಯಿದೆ
ಯಶ್ Rocking star Yash ನಟನೆಯ ‘ಟಾಕ್ಸಿಕ್’ Toxic movie ಸಿನಿಮಾದ ಚಿತ್ರೀಕರಣ ಬಲು ಜೋರಾಗಿ ನಡೆದಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿ ಈಗ ಮುಂಬೈಗೆ ಚಿತ್ರತಂಡ ಶಿಫ್ಟ್ ಆಗಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ಯಶ್, ಹಾಲಿವುಡ್ನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸದ್ಯ ಕ್ಯಾಮೆರಾ ಕಣ್ಣಿಗೆ ಬಿದ್ದರೆ ಅದೇ ಒಂದು ಟ್ರೆಂಡ್ ಆಗುತ್ತಿದ್ದು, ಕಳೆದ ವಾರವಷ್ಟೇ ಪತ್ನಿ ರಾಧಿಕಾ ಜೊತೆ ಉಪೇಂದ್ರ ಅಭಿನಯದ UI ಚಿತ್ರವನ್ನು ವೀಕ್ಷಿಸಿದ್ದರು. ಇದರ ನಡುವೆ ಯಶ್ ಇದೇ ಜನವರಿ 25, 2025ಕ್ಕೆ 39ನೇ ವರ್ಷಕ್ಕೆ ಕಾಲಿಡಲಿದ್ದಾರೆ.
ಆದರೆ ಇತ್ತೀಚೆಗೆ ರಾಕಿ ಬಾಯ್ ಈ ಬಾರಿ ತಮ್ಮ ಜನ್ಮದಿನದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು ತಿಳಿಸಿದ್ದರು. ಇದರಿಂದ ಫ್ಯಾನ್ಸ್ ಬೇಸರವಾಗಿದ್ದರೂ ಸಹ ಇದೀಗ ಭಾರತೀಯ ಚಿತ್ರರಂಗವೇ ಒಮ್ಮೆ ತಿರುಗಿ ನೋಡುವಂತಹ ಸುದ್ದಿಯೊಂದು ಹರಿದಾಡುತ್ತಿದ್ದು, ಯಶ್ ಫ್ಯಾನ್ಸ್ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿದೆ.

ವರ್ಲ್ಡ್ ಫೇಮಸ್ ಆಗಲಿದ್ದಾರೆ ಯಶ್
ಹಲವು ಒಳ್ಳೆಯ ಸಿನಿಮಾಗಳ ಮೂಲಕ ಕನ್ನಡಿಗರ ಹೃದಯ ಗೆದ್ದು, KGF-2 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದ ಯಶ್ ಇದೀಗ ಟಾಕ್ಸಿಕ್ ಮೂಲಕ ಪ್ಯಾನ್ ವರ್ಲ್ಡ್ ನಾಯಕನಾಗುವತ್ತ ದೃಢವಾಗಿ ಹೆಜ್ಜೆಯಿಟ್ಟಿದ್ದಾರೆ. ಅದರ ಭಾಗವಾಗಿ ಯಶ್ ಈ ಬಾರಿ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ. ಇದೇನಾದರೂ ಯಶಸ್ವಿಯಾದಲ್ಲಿ ಭಾರತೀಯ ಚಿತ್ರರಂಗವೇ ಎದ್ದು ನಿಂತು ಸಲಾಂ ಹೊಡೆಯುವುದು ಫಿಕ್ಸ್. ತಮ್ಮ ಮುಂದಿನ ಟಾಕ್ಸಿಕ್ ಸಿನಿಮಾವನ್ನು ಹಾಲಿವುಡ್ ಲೆವೆಲ್‌ನಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.